ಮದುವೆ ತಡೆಯಲು ಬಂದ ಪ್ರಿಯಕರನಿಗೆ ಥಳಿತ !

ಹಟ್ಟಿಚಿನ್ನದಗಣಿ: ಪ್ರೀತಿಸಿದ ಹುಡುಗಿಯ ಮದುವೆ ನಿಲ್ಲಿಸಲು ಮುಂದಾಗಿದ್ದ ಪ್ರಿಯಕರನಿಗೆ ವಧು ಕಡೆಯುವರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ಪಟ್ಟಣದಲ್ಲಿ ಗುರುವಾರ ನಡೆದಿದೆ.

ಕೆಂಭಾವಿ ಮೂಲದ ರಾಮು ಥಳಿತಕ್ಕೊಳಗಾದ ಪ್ರಿಯಕರ. ಪಟ್ಟಣದ ಲಿಂಗಾವಧೂತ ದೇವಸ್ಥಾನದಲ್ಲಿ ಕೆಂಭಾವಿ ಗ್ರಾಮದ ವಧು ಜತೆ ಪಟ್ಟಣದ ವರನೊಂದಿಗೆ ಗುರುವಾರ ವಿವಾಹ ನಿಶ್ಚಯವಾಗಿತ್ತು. ಈ ವಿಷಯ ತಿಳಿದ ಪ್ರೇಮಿ ರಾಮು, ಮದುವೆ ನಿಲ್ಲಿಸಲು ಪಟ್ಟಣಕ್ಕೆ ಬಂದಿದ್ದಾನೆ. ಇದನ್ನು ಮೊದಲೇ ಅರಿತ ವಧುವಿನ ಸಂಬಂಧಿಕರು ಹೊಸ ಬಸ್ ನಿಲ್ದಾಣದಲ್ಲಿ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದ ಪೊಲೀಸರು, ಯುವತಿ ಮದುವೆಯಾದ ಬಳಿಕ ಯುವಕನ ಮನೆಯವರನ್ನು ಕರೆಸಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *