
ಹಟ್ಟಿಚಿನ್ನದಗಣಿ: 2019ರ ಸೆಪ್ಟೆಂಬರ್‌ನಲ್ಲಿ ಕುಡಿವ ನೀರು ಪೂರೈಸಿದ ಟ್ಯಾಂಕರ್ ಮಾಲೀಕರಿಗೆ 3.38 ಲಕ್ಷ ರೂ. ನೀರಿನ ಬಿಲ್ ಪಾವತಿಸುವಲ್ಲಿ ಗೆಜ್ಜಲಗಟ್ಟಾ ಗ್ರಾಪಂ ಆಡಳಿತ ನಿರ್ಲಕ್ಷೃ ವಹಿಸಿದೆ.
ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ನಿಲೋಗಲ್ ಹಾಗೂ ಚಿಕ್ಕನಗನೂರು ಗ್ರಾಮಗಳಿಗೆ ಮೇ 2019ರಿಂದ ಸೆಪ್ಟೆಂಬರ್‌ವರೆಗೆ ಬೇಸಿಗೆ ಸಮಯದಲ್ಲಿ ನೀರಿನ ಅಭಾವದಿಂದ ಬಾಡಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. 14 ತಿಂಗಳಿಂದ ಬಿಲ್ ಪಾವತಿಸಲು ಸತಾಯಿಸುತ್ತಿದ್ದು, ಅನುದಾನದ ಕೊರತೆ ಇದೆ ಎಂದು ಪಿಡಿಒ ಕಾಲದೂಡುತ್ತಿದ್ದಾರೆ. ಟ್ಯಾಂಕರ್‌ನಿಂದಲೆ ಉಪಜೀವನ ನಡೆಸುತ್ತಿರುವ ನಮಗೆ ಲಾಕ್‌ಡೌನ್ ಹೊಡೆತಕ್ಕೆ ಜೀವನ ನಡೆಸುವುದು ಕಷ್ಟವಾಗಿದೆ ಎಂಬುದು ಟ್ಯಾಂಕರ್ ಮಾಲೀಕರು ಅಳಳು.
ಗ್ರಾಪಂ ವ್ಯಾಪ್ತಿಯಲ್ಲಿ ಕರ ವಸೂಲಿ, ಅಕ್ರಮ ನಲ್ಲಿಗಳ ಪತ್ತೆಹಚ್ಚಿ ಕ್ರಮಕೈಗೊಳ್ಳುವಲ್ಲಿ ಗ್ರಾಪಂ ಆಡಳಿತ ವಿಫಲವಾಗಿದ್ದು, ಅಭಿವೃದ್ಧಿ ಮರೆತಿದೆ. ನಿರ್ಲಕ್ಷೃ ವಹಿಸಿದ ಪಿಡಿಒ ವಿರುದ್ಧ ಕ್ರಮಕೈಗೊಂಡು ಮೇಲಧಿಕಾರಿಗಳು ಬಿಲ್ ಪಾವತಿಸಲು ಮುಂದಾಗಬೇಕೆಂದು ಟ್ಯಾಂಕರ್ ಮಾಲೀಕರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೆಜ್ಜಲಗಟ್ಟಾ ಗ್ರಾಪಂ ಪಿಡಿಒ ನಜೀರ್‌ಸಾಬ್, ಗೆಜ್ಜಲಗಟ್ಟಾ ಗ್ರಾಪಂ ನಲ್ಲಿ ಅನುದಾನದ ಕೊರತೆಯಿದೆ. ಶಾಸಕ ಡಿ.ಎಸ್.ಹೂಲಗೇರಿ ಅವರಿಗೆ ಪತ್ರ ಬರೆಯಲಾಗಿದೆ. ಆದಷ್ಟು ಬೇಗ ಬಾಕಿ ಉಳಿದ ನೀರಿನ ಬಿಲ್ ಪಾವತಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.