20.4 C
Bengaluru
Sunday, January 19, 2020

ಸಡಗರದ ಹುತ್ತರಿ ಹಬ್ಬ ಕೊಡವನಾಡಿನ ಸುಗ್ಗಿ

Latest News

ಎಲ್ಲರ ಬಾಯಿಗೆ ಬೀಗ ಹಾಕಿದ ಅಮಿತ್ ಷಾ

ಹುಬ್ಬಳ್ಳಿ: ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿದ ಅಮಿತ್ ಷಾ, ಪಕ್ಷದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ರಾತ್ರಿಯ ಭೋಜನ ಸವಿದರು.

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಹುತ್ತರಿ ಹಬ್ಬ ಕೊಡವ ಜನರ ದೊಡ್ಡ ಹಬ್ಬ. ಗದ್ದೆಯಲ್ಲಿ ಹುಲುಸಾಗಿ ಬೆಳೆದ ಬತ್ತದ ಪೈರನ್ನು ಆರಾಧಿಸಿ, ಕುಯ್ಲು ಮಾಡಿ ವಿಧ್ಯುಕ್ತವಾಗಿ ಮನೆತುಂಬಿಕೊಳ್ಳುವ ಸುಮುಹೂರ್ತವೇ ಹುತ್ತರಿ. ಹಬ್ಬದ ವೇಳೆ ಹುತ್ತರಿ ಕುಣಿತ ಎಂಬ ಜನಪದ ನೃತ್ಯವೂ ನಡೆಯುತ್ತದೆ. ಈ ಹಬ್ಬದ ವೈಶಿಷ್ಟ್ಯಗಳ ಕುರಿತ ಬರಹವಿದು.

ಕೊಡಗಿನ ಪ್ರಮುಖ ಹಬ್ಬಗಳ ಪೈಕಿ ಪುತ್ತರಿ ನಮ್ಮೆ ಕೂಡ ಒಂದು. ಧಾನ್ಯಲಕ್ಷ್ಮಿಯನ್ನು (ಭತ್ತದ ಕದಿರು) ಮನೆಗೆ ತರುವ ಪುತ್ತರಿ (ಹುತ್ತರಿ) ಕೊಡಗಿನ ಪಾಲಿಗೆ ಸುಗ್ಗಿ ಹಬ್ಬ. ಕೊಡವ ಭಾಷೆಯಲ್ಲಿ ಪುದಿಯ ಅರಿ ಎಂದರೆ ಹೊಸ ಅಕ್ಕಿ ಎಂದರ್ಥ. ಪುತ್ತರಿ ಕನ್ನಡದಲ್ಲಿ ಹುತ್ತರಿ ಎಂದಾಗಿದೆ.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಗದ್ದೆಯಿಂದ (ಡಿ. 11) ರಾತ್ರಿ 8 ಗಂಟೆಗೆ ಕದಿರು ತರಲಾಗುತ್ತದೆ. ತದನಂತರ ಸಾರ್ವಜನಿಕರು ತಮ್ಮ ಗದ್ದೆಯಲ್ಲಿ ರಾತ್ರಿ 8.35ಕ್ಕೆ ಕದಿರು ತರುತ್ತಾರೆ. ದಕ್ಷಿಣ ಕೊಡಗಿನ ಕೆಲವು ಭಾಗದಲ್ಲಿ 11ರಂದು ಬೆಳಗ್ಗೆ, ಮತ್ತೆ ಕೆಲವು ಭಾಗದಲ್ಲಿ 12ರಂದು ಬೆಳಗ್ಗೆ ಕದಿರು ತೆಗೆಯಲಾಗುತ್ತದೆ.

ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿ ಕದಿರು ತೆಗೆಯಲಾಗುತ್ತದೆ. ಅದು ಹೊಸ ಫಸಲನ್ನು ಪ್ರಥಮ ಬಾರಿಗೆ ಮನೆಗೆ ತರಲು ಪ್ರಶಸ್ತ ಸಮಯವೆಂದು ನಂಬಿಕೆ. ರೋಹಿಣಿ ನಕ್ಷತ್ರ ಬಾರದಿದ್ದರೆ ಕೃತ್ತಿಕೆಯಾದರೂ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಉದ್ಯೋಗ, ವಿದ್ಯಾಭ್ಯಾಸ ಸೇರಿದಂತೆ ವಿವಿಧ ಕಾರಣದಿಂದ ಕೊಡಗಿನಿಂದ ಹೊರಗಿರುವವರು ಹಬ್ಬಕ್ಕೆ ಹುಟ್ಟೂರಿಗೆ ಆಗಮಿಸುತ್ತಾರೆ. ಕೊಡವ ಕುಟುಂಬಗಳ ಐನ್​ವುನೆಗಳಲ್ಲಿ ಕುಟುಂಬಸ್ಥರು ಸೇರಿ ಕದಿರು ತೆಗೆಯುತ್ತಾರೆ.

ಈಡು: ಕದಿರು ತೆಗೆಯುವ ಒಂದು ವಾರಕ್ಕೆ ಮೊದಲು ಪುತ್ತರಿ ಹಬ್ಬದ ಪ್ರಯುಕ್ತ ನಡೆಯಲಿರುವ ಕೋಲಾಟ, ಪರಿಯ ಕಳಿ ಮೊದಲಾದ ಜಾನಪದೀಯ ಆಟಗಳ ತಾಲೀಮಿಗೆ ಈಡು ತೆಗೆಯುವುದು ಎಂದು ಹೆಸರು. ರಾತ್ರಿ ಏಳು-ಏಳೂವರೆಗೆ ಪ್ರತಿ ಕುಟುಂಬದಿಂದ ಒಬ್ಬನಂತೆ ಇದರಲ್ಲಿ ಭಾಗವಹಿಸುವರು. ಊರ ತಕ್ಕ ನೇತೃತ್ವದಲ್ಲಿ ಊರ ಮಂದಿಯಲ್ಲಿ ಈ ಆಟಗಳಲ್ಲಿ ನುರಿತವರು ತರಬೇತು ನೀಡುವರು.

ಊರು ಮತ್ತು ನಾಡಿನ ಮಂದ್​ಗಳಲ್ಲಿ ಮುಂದೆ ನಡೆಯುವ ಸ್ಪರ್ಧೆಗಳಲ್ಲಿ ಯುವಕರು ಪಾಲ್ಗೊಂಡು ಉತ್ತಮ ಪ್ರದರ್ಶನಗಳನ್ನಿತ್ತು ಗ್ರಾಮಕ್ಕೆ ಕೀರ್ತಿ ತರಲೆಂದು ಇದರ ಉದ್ದೇಶ. ನೂರು ವರ್ಷಗಳಿಗೆ ಹಿಂದೆ ಪ್ರತಿ ಕುಟುಂಬದಿಂದ ಕಡಿಮೆಯೆಂದರೆ ಒಬ್ಬನಾದರೂ ಈಡಿಗೆ ಊರ ತಕ್ಕನ ಮನೆಗೆ ಹೋಗಿ, ಅಲ್ಲಿ ರಾತ್ರಿಯೂಟ ಮುಗಿಸಿಕೊಂಡು ಮಂದಿಗೆ ಹೋಗುತ್ತಿದ್ದರು. ಹೋಗುವಾಗ ನಾಲ್ಕು ಜನರು ದುಡಿಗಳನ್ನು ಬಾರಿಸುತ್ತಾ ಕೊಡವ ಜಾನಪದ ಹಾಡು ಹಾಡುತ್ತಿದ್ದರು.

ಅವರ ಮುಂದೆ ಊರಿನ ಮೇದರು ವಾಲಗಗಳನ್ನು ಬಾರಿಸುತ್ತಾ ನಡೆಯುತ್ತಿದ್ದರು. ಮಂದ್ ತಲುಪಿದ ನಂತರ ನಾಡೆ ಕರೆಯುವರು. ನಾಡೆ ಕರೆಯುವದು ಹಾಸ್ಯಮಯವಾದ ಒಂದು ಸಣ್ಣ ಪ್ರಹಸನದ ಪ್ರದರ್ಶನ. ಇದರಲ್ಲಿ ಇಬ್ಬರಿಂದ ನಾಲ್ಕೈದು ಜನ ಭಾಗವಹಿಸುವರು. ಇದಾದ ಬಳಿಕ ದೋಳಿನ ಹೊಡೆತದ ಮಟ್ಟಿಗೆ ಸರಿಯಾಗಿ ಕುಣಿಯುತ್ತಾ ಕೋಲಾಟವಾಡುವರು. ತದನಂತರ ಪರಿಯಕಳಿಯನ್ನಾಡುವರು. ಕೊನೆಗೆ ಸಾಮೂಹಿಕ ಕುಣಿತ ಕುಣಿದು, ಎಲ್ಲರು ಮಂದ್​ನಿಂದ ತಕ್ಕನ ಮನೆಗೆ ಹೋಗಿ, ದುಡಿ-ತಾಳ ಹಿಂತಿರುಗಿಸಿ, ತಮ್ಮ ಮನೆಗಳಿಗೆ ಹೋಗುವರು.

ಹಬ್ಬಕ್ಕೆ ಸಿದ್ಧತೆ: ಹಿಂದೆ ಗ್ರಾಮದಲ್ಲಿ ಹಲವಾರು ಕಸುಬುದಾರರಿದ್ದಾಗ, ಹಬ್ಬಕ್ಕೆ ಬೇಕಾದ ಕುಕ್ಕೆ, ಚಾಪೆ, ಸಟ್ಟುಗ, ಕುತ್ತಿ, ಕುಡುಗೋಲು, ಕುಡಿಕೆ ಇತ್ಯಾದಿ ಹೊಸದಾಗಿ ತಯಾರಿಸಿ ಪ್ರತಿಯೊಂದು ಮನೆಗೂ ಕೊಂಡೊಯ್ದು ಕೊಡುತ್ತಿದ್ದರು. ಇವರಿಗೆ ಹುರಿದಕ್ಕಿಯ ಹಿಟ್ಟು, ಹುತ್ತರಿ ಗೆಣಸು, ಬೆಲ್ಲ. ಎಳ್ಳು ಇತ್ಯಾದಿ ಮನೆಯವರು ಕೊಡುತ್ತಿದ್ದರು. ಈಗ ಹಿಂದಿನ ವರ್ಷಗಳಲ್ಲಿ ಬಳಸಿದ್ದನ್ನೇ ಉಪಯೋಗಿಸುವರು, ಇಲ್ಲವೇ ಅಂಗಡಿಗಳಿಂದ ತರುವರು.

ಊರಿನ ಅರ್ಚಕನು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಿ, ತೀರ್ಥವನ್ನೂ ತೇಯ್ದ ಗಂಧವನ್ನೂ ಪ್ರತಿ ಮನೆಗೂ ವಿತರಿಸುವರು. ಅರ್ಚಕರಿಗೆ ಅಕ್ಕಿ, ತೆಂಗಿನಕಾಯಿ, ಬೆಲ್ಲ, ಬಾಳೆಹಣ್ಣು ಕೊಡುವರು. ಹಬ್ಬ ಪ್ರಯುಕ್ತ ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ ಸುಣ್ಣಬಣ್ಣ ಬಳಿದು, ಮನೆಯಂಗಳ, ಕಣ, ಕೊಟ್ಟಿಗೆ ಮೊದಲಾದವನ್ನು ಸ್ವಚ್ಛಗೊಳಿಸುವರು.

ನೆರೆ ಕಟ್ಟುವುದು: ನೆಲ್ಲಕ್ಕಿ ನಡುಬಾಡೆಯ ಮನೆಯ (ಮಧ್ಯದ ವಿಶಾಲ ಹಜಾರ) ತೂಗುದೀಪ ಹಚ್ಚಿ, ಅದರ ಕೆಳಗೆ ತಾಳೆಯೋಲೆಯ ಚಾಪೆ ಹಾಸಿ, ಅದರ ಮೇಲೆ ಪುತ್ತರಿ ಪಚ್ಚೆ (ಹುತ್ತರಿಗಾಗಿ ನೆಯ್ದ ಬಿದಿರಿನ ಕುಕ್ಕೆ) ಇಡಲಾಗುತ್ತದೆ. ಅದರಲ್ಲಿ ಮಾವಿನೆಲೆ, ಅಶ್ವತ್ಥದೆಲೆ ಮತ್ತು ಪುತ್ತರಿ ನಾರ್ (ಒಂದು ವಿಧದ ಮರದ ಕಾಂಡದಿಂದ ತೆಗೆಯಲ್ಪಡುವ ನಾರು) ಇಡುವರು.

ಇನ್ನೊಂದು ಕುಕ್ಕೆಯಲ್ಲಿ ಹಳೆಯ ಭತ್ತ ತುಂಬಿ, ಅದರ ಮೇಲೆ ಒಂದು ಸೇರಿನಲ್ಲಿ ಭತ್ತ, ಒಂದು ಅಚ್ಚೇರಿನಲ್ಲಿ ಅಕ್ಕಿ, ಪುತ್ತರಿ ಕುಡಿಕೆ (ಮಣ್ಣಿನ ಸಣ್ಣ ಕುಡಿಕೆ) ಯಲ್ಲಿ ಹುರಿದಕ್ಕಿಯ ಹಿಟ್ಟನ್ನು ತುಂಬಿಸಿಡುವರು. ಬಿದಿರಿನಲ್ಲಿ ತಯಾರಿಸಿದ ಅರೆಮೊಳದುದ್ದದ ಕುತ್ತಿಯಲ್ಲಿ ಸ್ವಲ್ಪ ಹಾಲು, ಜೇನು, ತುಪ್ಪ, ಎಳ್ಳು, ಶುಂಠಿ, ತೆಂಗಿನಕಾಯಿಯ ಚೂರು ಇತ್ಯಾದಿ ಹಾಕಿ ಈ ಕುತ್ತಿಯನ್ನು ಚಾಪೆಯ ಮೇಲಿಡುವರು. ಪಕ್ಕದಲ್ಲೇ ಕುಡುಗೋಲನ್ನಿಡುವರು.

ಒಂದು ಮುಕ್ಕಾಲಿ ಮೇಲೆ ಕಂಚಿನ ಒಂದು ತಳಿಗೆಯಲ್ಲಿ ಅಕ್ಕಿ ತುಂಬಿಸಿ, ಹಚ್ಚಿದ ಹಣತೆಯೊಂದನ್ನು ಅದರ ಮೇಲಿಟ್ಟು, ಪಕ್ಕದಲ್ಲಿ ವೀಳ್ಯದೆಲೆ – ಅಡಕೆಗಳನ್ನಿಡುವರು. ಇದಕ್ಕೆ ತಳಿಯತಕ್ಕಿ ಬೊಳಕ್ ಎನ್ನುವರು. ಸ್ವಲ್ಪ ಅಕ್ಕಿಯನ್ನು ಮೊದಲೇ ನೀರಲ್ಲಿ ನೆನೆಸಿಟ್ಟಿದ್ದು, ಅದನ್ನು ದೋಸೆ ಹಿಟ್ಟಿನಂತೆ ರುಬ್ಬಿಟ್ಟುಕೊಳ್ಳುವರು.

ನೆರೆಕಟ್ಟಿದ ಮೇಲೆ, ತೊಂಡೆಕಾಯಿಯಂತಿರುವ ಪೀರಕೆಯನ್ನು ಅಡ್ಡಕ್ಕೆ ಕತ್ತರಿಸಿ, ಅದನ್ನು ಈ ಹಿಟ್ಟಿನಲ್ಲಿ ಅದ್ದಿ, ಕುಡುಗೋಲಿಗೆ, ಕುತ್ತಿಗೆ, ಸೇರು ಮತ್ತು ಅಚ್ಚೇರಿಗೆ, ಕುಡಿಕೆಗೆ ಹಾಗೂ ಮನೆಯ ಕಿಟಿಕಿ ಬಾಗಿಲುಗಳಿಗೆ ಮುದ್ರೆಯನ್ನೊತ್ತುವರು.

ಫಲಾಹಾರ: ಎಲ್ಲರೂ ಒಟ್ಟಿಗೆ ಕುಳಿತು ಬೇಯಿಸಿದ ಪುತ್ತರಿ ಕಳಂಜಿಯನ್ನು (ಹುತ್ತರಿ ಗೆಣಸು) ಜೇನು ಮತ್ತು ತುಪ್ಪದಲ್ಲಿ ಅದ್ದಿಕೊಂಡು ತಿನ್ನುವರು. ನಂತರ ಕದಿರು ತೆಗೆಯುವ ಮುಹೂರ್ತಕ್ಕೆ ಸ್ವಲ್ಪ ಮೊದಲು ಎಲ್ಲರೂ ನೆಲ್ಲಕ್ಕಿ ನಡುಬಾಡೆಯ ತೂಗುದೀಪದೆದುರು ನಿಲ್ಲುವರು. ಮನೆ ಯಜಮಾನ, ಗುರು-ಕಾರಣರನ್ನೂ, ಇತರ ದೇವರನ್ನೂ ಪ್ರಾರ್ಥಿಸಿ, ಹಬ್ಬವನ್ನು ನಡೆಸಿ ಸುಗಮವಾಗಿ ಮನೆಗೆ ಹೊಸ ಕದಿರನ್ನು ತರಲು ಬೇಡಿಕೊಳ್ಳುತ್ತ ಕುತ್ತಿ ಕೈಗೆತ್ತಿಕೊಳ್ಳುವನು.

ಅದನ್ನು ಗದ್ದೆಗೆ ತೆಗೆದುಕೊಂಡು ಹೋಗಿ ಕದಿರು ಕುಯ್ಯಲು ಆಯ್ಕೆಯಾದವನಿಗೆ ಕೊಡುವರು. ಇವನು ಈ ಕೆಲಸಕ್ಕೆ ಯೋಗ್ಯ ನಕ್ಷತ್ರದಲ್ಲಿ ಹುಟ್ಟಿದವನಾಗಿರಬೇಕು. ಕುತ್ತಿಯನ್ನೆತ್ತಿಕೊಂಡವನ ಹೊರತು ಉಳಿದವರು ಹಿರಿಯರ ಕಾಲ್ಮುಟ್ಟಿ ನಮಸ್ಕರಿಸುವರು. ತಳಿಯತಕ್ಕಿ ಬೊಳಕನ್ನು ಒಬ್ಬ ಕನ್ಯೆಯ ಕೈಗೆ ಕೊಡುವರು. ಉಳಿದವರು ಕುಕ್ಕೆ, ಚಾಪೆ, ಇತ್ಯಾದಿಗಳನ್ನೆತ್ತಿಕೊಳ್ಳುವರು. ಒಬ್ಬನು ಕೋವಿಯನ್ನೆತ್ತಿಕೊಳ್ಳುವನು. ಮಕ್ಕಳು ಪಟಾಕಿಗಳನ್ನೆತ್ತಿಕೊಳ್ಳುವರು. ಕೆಲವೆಡೆ ದುಡಿ-ತಾಳಗಳನ್ನೂ ತೆಗೆದುಕೊಳ್ಳುವರು. ಹೀಗೆ ಮನೆಯವರೆಲ್ಲ ತಮ್ಮ ಗದ್ದೆಗೆ ತೆರಳುವರು.

ಏಳಕ್ಕಿ ಪುಟ್ಟ್: ಅಕ್ಕಿಹಿಟ್ಟು, ಎಳ್ಳು, ಶುಂಠಿ, ತೆಂಗಿನ ತುರಿ, ಹಾಗಲಕಾಯಿಯ ಮುಳ್ಳು, ಪೆರಂಬು ಕೊಡಿ ಮತ್ತು ಕಲ್ಲುಹರಳುಗಳನ್ನು ಬಾಳೆಹಣ್ಣು, ಹಾಲು ಮತ್ತು ಜೇನಿನೊಡನೆ ಕಲಸಿ ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಬೇಕು. ಚಾಪೆಯ ಮೇಲೆ ಹಾಸಿದ ಅಶ್ವತ್ಥದೆಲೆಗಳ ಮೇಲೆ ಇವುಗಳನ್ನಿಡುವರು. ಆಮೇಲೆ ಒಂದೊಂದಾಗಿ ಅಂಗೈಯಲ್ಲಿರಿಸಿಕೊಂಡು, ಗತಿಸಿದ ಪಿತೃಗಳ ಹೆಸರನ್ನು ಹೇಳಿ ನಡುಬಾಡೆಯ ಮಾಡಿಗೆ ಎಸೆಯುವರು. ಅವು ಅಲ್ಲಿಗೆ ಅಂಟಿಕೊಂಡರೆ ಪಿತೃಗಳು ಸ್ವೀಕರಿಸಿದರು ಎಂಬ ನಂಬಿಕೆ.

ಊಟ: ಬೆಲ್ಲ ಸೇರಿಸಿ ಅಕ್ಕಿಯ ಪಾಯಸ ಮಾಡುವಾಗ ತಂದ ಹೊಸ ಕದಿರಿನಿಂದ ಕೆಲವು ಭತ್ತದ ಕಾಳುಗಳನ್ನು ತೆಗೆದು ಸುಲಿದು ಅಕ್ಕಿ ಸೇರಿಸುವರು. ಕಿವುಚಿದ ಬಾಳೆ ಹಣ್ಣುಗಳೊಡನೆ ಹುರಿದಕ್ಕಿ ಹಿಟ್ಟನ್ನು ಕಲಸಿ ತಂಬುಟ್ಟನ್ನು ತಯಾರಿಸುವರು. ಮುತೆôದೆಯು ಇದರಲ್ಲಿ ಸ್ವಲ್ಪವನ್ನು ಕೈಮಡ ಮತ್ತು ಮೀದಿಕೋಂಬರೆ(ದೇವರ ಕೋಣೆ)ಯಲ್ಲಿ ಮೀದಿ (ನೈವೇದ್ಯ) ಇಡುವರು. ಬಳಿಕ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಪಾಯಸವನ್ನೂ ಎಳ್ಳು ಮತ್ತು ತುಪ್ಪವನ್ನು ಸೇರಿಸಿಕೊಂಡು ತಂಬುಟ್ಟನ್ನೂ ಸೇವಿಸುವರು.

ಕೋಲಾಟ: ಹಬ್ಬದ ಮರುದಿನ ಮಧ್ಯಾಹ್ನದ ಊಟವಾದ ನಂತರ ಎಲ್ಲರೂ ಸಾಂಪ್ರದಾಯಕ ಉಡುಗೆ-ತೊಡುಗೆ ಧರಿಸಿ ಊರಿನ ಮಂದ್​ಗೆ ಹೋಗು ವರು. ಅಲ್ಲಿರುವ ಅರಳಿಮರದ ಸುತ್ತಲೂ ದೊಡ್ಡ ವೃತ್ತಾಕಾರದಲ್ಲಿ ಪುರುಷರು ಕುಣಿಯುತ್ತಾ ಪೊಯಿಲೇ ಹಾಡನ್ನು ಹೇಳುತ್ತಾ ವಿವಿಧ ಪ್ರಕಾರಗಳ ಕೋಲಾಟಗಳನ್ನಾಡುವರು.

ಪರಿಯಕಳಿ: ಕೋಲಾಟ ಮುಗಿದ ಮೇಲೆ ಇಬ್ಬರು ಗಂಡಸರು ಬೆತ್ತದ ಗುರಾಣಿಯನ್ನೂ, ಅರೆಯಾಳುದ್ದದ ಕೋಲನ್ನೂ ಹಿಡಿದು ಪರಿಯಕಳಿಯ ನ್ನಾಡುವರು. ಈ ಹೊಡೆದಾಟದಲ್ಲಿ ಒಬ್ಬನದಕ್ಕಿಂತ ಇನ್ನೊಬ್ಬನದು ಮೇಲುಗೈಯಾದರೆ ಇದಕ್ಕೆಂದೇ ನಿಯಮಿಸಲ್ಪಟ್ಟ ಮೇಲ್ವಿಚಾರಕನು ಮಧ್ಯೆ ಪ್ರವೇಶಿಸಿ ತಡೆ ಮಾಡುವನು. ಒಟ್ಟು ಮೂರು ಸುತ್ತು ಆಡಿ ಆಟ ನಿಲ್ಲಿಸುವರು.

ಮನೆ ಹಾಡುವುದು: ಊರು ಕೋಲು ಆದ ಬಳಿಕ ಗಂಡಸರು ತಕ್ಕನ ಮನೆಗೆ ಹೋಗುವರು. ಅಲ್ಲಿ ನಾಲ್ವರು ದುಡಿಗಳನ್ನೆತ್ತಿಕೊಂಡು, ತಕ್ಕನ ಮನೆತನದ ಕಾರಣರನ್ನು, ಪಿತೃಗಳನ್ನು ಮತ್ತು ಜೀವಂತವಾಗಿರುವವರೆಲ್ಲರನ್ನು ಕುರಿತು ಜಾನಪದ ಮಟ್ಟಿನ ಹಾಡುಗಳನ್ನು ಹಾಡುವರು. ಇದಕ್ಕೆ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಈ ನಾಲ್ವರಿಗೆ ಮನೆಯವರು ಕೊಡುವರು. ಆ ವರ್ಷ ಮದುವೆಯಾದವರನ್ನೂ, ಹುಟ್ಟಿದ ಮಕ್ಕಳನ್ನೂ, ಆ ಮನೆಯಲ್ಲಿ ಯಾರಾದರೂ ನೆಂಟರಿದ್ದರೆ ಅವರನ್ನೂ ಕುರಿತು ಹಾಡಿ ಅವರಿಂದಲೂ ಹಣ ಪಡೆಯುವರು.

ಹೀಗೆ ಪ್ರತಿ ಮನೆಗೂ ಹೋಗಿ ಅಲ್ಲಿನ ಕಾರಣರನ್ನೂ ಕುಟುಂಬದವರನ್ನೂ ಕುರಿತು ಬೆಳಗಾಗುವವರೆಗೆ ಹಾಡುವರು. ಊರಿನ ಎಲ್ಲಾ ಮನೆಗಳಿಗೂ ಆ ರಾತ್ರಿ ಹೋಗಲಾಗದಿದ್ದರೆ, ಮರುದಿನ ನಾಡು ಕೋಲಿನ ನಂತರ ಬಾಕಿ ಮನೆಗಳಿಗೆ ಹೋಗಿ ಹಾಡಿ ಮುಗಿಸುವರು. ಈ ರೀತಿ ಮನೆ ಹಾಡಿ ಗಳಿಸಿದ ಹಣದಲ್ಲಿ ಊರೊರ್ವೆ ಮಾಡುವರು.

ಊರೊರ್ವೆ: ಪುತ್ತರಿ ಮುಗಿದ ಬಳಿಕ ಒಂದು ನಿಶ್ಚಿತ ಸಂಜೆ ಊರಿನ ಪ್ರತಿ ಮನೆಯಿಂದ ಒಬ್ಬನಂತೆ ಕಾಡುಮರಗಳ ತೋಪಿನಲ್ಲಿ ಕುಳಿತು ಸಾಮೂಹಿಕ ಭೋಜನ ಮಾಡುವರು. ಬೇಟೆ ನಿಷಿದ್ಧವಾಗಿಲ್ಲದಿದ್ದ ಕಾಲದಲ್ಲಿ ಬೆಳಗ್ಗೆ ಊರು ಬೇಟೆಯನ್ನಾಡಿ, ಸಂಜೆಯ ಔತಣಕ್ಕೆ ಸಿದ್ಧಪಡಿಸುತ್ತಿದ್ದರು. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸುವರು.

ಕದಿರು ತೆಗೆಯುವುದು

ಎಲ್ಲರೂ ಕದಿರು ತೆಗೆಯಲೆಂದು ನಿಶ್ಚಿತವಾದ ಗದ್ದೆಯ ಜಾಗಕ್ಕೆ ಬರುವರು. ಕುತ್ತಿ ತೆಗೆದವನು ಬೆಳೆ ಪೂಜಿಸಿ, ಕುತ್ತಿಯಲ್ಲಿರುವದನ್ನೆಲ್ಲ ಬುಡಕ್ಕೆ ಸುರಿದು ನೈವೇದ್ಯ ಮಾಡಿ, ಪೊಲಿ ಪೊಲಿ ದೇವಾ! ಎಂದು ಗಟ್ಟಿಯಾಗಿ ಪ್ರಾರ್ಥಿಸುವನು. ಪೊಲಿಯೆಂದರೆ ಹೆಚ್ಚಾಗು ಎಂದರ್ಥ. ಕೂಡಲೆ ಕೋವಿಯನ್ನೆತ್ತಿಕೊಂಡವನು ಅದನ್ನು ಆಕಾಶಕ್ಕೆ ಹಿಡಿದು ಗುಂಡು ಹಾರಿಸುವನು. ಎಲ್ಲರೂ, ಪೊಲಿ ಪೊಲಿ ದೇವಾ! ಎಂದು ಉಚ್ಚ ಕಂಠದಲ್ಲಿ ಪ್ರಾರ್ಥಿಸಲಾರಂಭಿಸುವರು.

ಕುತ್ತಿಯವನು ಮೊದಲಿಗೆ ಬೆಳೆದು ಭತ್ತದ ತೆನೆಗಳಿರುವ ಮೂರು ಪೈರುಗಳನ್ನು ಬುಡದಿಂದ ಕತ್ತರಿಸಿ, ಅದನ್ನು ಪಕ್ಕದಲ್ಲಿ ನಿಂತಿರುವವನಿಗೆ ಕೊಡುವನು. ಹೀಗೆಯೇ ಇನ್ನಷ್ಟು ಪೈರುಗಳನ್ನು ಕತ್ತರಿಸಿ ಅಲ್ಲಿ ನೆರೆದ ಎಲ್ಲರಿಗೂ ಕೊಡುವನು. ಎಲ್ಲರೂ ಪೊಲಿ ಪೊಲಿ ದೇವಾ ಎಂದು ಪ್ರಾರ್ಥಿಸುತ್ತ ಮನೆಗೆ ತೆರಳುವರು. ಮಕ್ಕಳು ಗುಂಡಿನ ಜತೆಯಲ್ಲಿಯೇ ಪಟಾಕಿ ಸಿಡಿಸಲಾರಂಭಿಸುವರು. ಕುತ್ತಿಯನ್ನೆತ್ತಿಕೊಂಡವನು ಮನೆಗೆ ಬರುವಾಗ ದಾರಿಯಲ್ಲಿರುವ ಕೈಮಡದಲ್ಲಿ (ಕಾರಣರೆಂದು ಪೂಜಿಸಲ್ಪಡುವ ಮನೆತನದ ಹಿರಿಯರನ್ನು ಸಂಕೇತಿಕವಾಗಿ ಪ್ರತಿಷ್ಠಾಪಿಸಲಾಗಿರುವ ಸಣ್ಣ ಗುಡಿ) ಒಂದು ಹಣತೆ ಹಚ್ಚಿ, ಅದರ ಬಾಗಿಲಿಗೆ ಕದಿರನ್ನು ಕಟ್ಟುವನು.

ಅವನು ಮನೆ ಪ್ರವೇಶಿಸುವಾಗ ಒಬ್ಬ ಕನ್ಯೆ ಅಥವಾ ಮುತೆôದೆಯು ತೊಳೆಯಲು ಅವನ ಕಾಲ್ಗಳಿಗೆ ನೀರು ಹಾಕಿ, ಕುಡಿಯಲು ಗಿಂಡಿಯಲ್ಲಿ ಹಾಲನ್ನು ಕೊಡುವಳು. ತಂದ ಕದಿರಿನ ಒಂದೊಂದು ಎಳೆಯನ್ನು ಕಣದ ನಡುಗಂಬಕ್ಕೆ, ಕೈಮಡದ ಬಾಗಿಲಿಗೆ, ಮನೆಯ ಎಲ್ಲ ಕಿಟಿಕಿ-ಬಾಗಿಲುಗಳಿಗೆ, ಬಾವಿಗೆ, ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ ಒಂದೊಂದು ಅಶ್ವತ್ಥದೆಲೆಯಲ್ಲಿ ಸುತ್ತಿ ಪುತ್ತರಿ ನಾರಿನಿಂದ ಕಟ್ಟುವರು. ಮನೆಯ ಮುಂಬಾಗಿಲಿಗೆ ಕಲಾತ್ಮಕವಾಗಿ ನೇಯ್ದು ತೋರಣ ಕಟ್ಟುವರು.

| ಅಜ್ಜಮಾಡ ರಮೇಶ್ ಕುಟ್ಟಪ್ಪ

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...