ಹುಮನಾಬಾದ್: ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಭಾನುವಾರ ಪಟ್ಟಣದಲ್ಲಿ ಗಣಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ರೋಡ್ ಶೋ ನಡೆಯಿತು. ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಬಾಲಾಜಿ ಮಂದಿರ, ಸರ್ದಾರ್ ಪಟೇಲ್, ಅಂಬೇಡ್ಕರ್ ವೃತ್ತದ ಮೂಲಕ ಶಿವಚಂದ್ರ ವೃತ್ತದವರೆಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಲಾಯಿತು.
ಕೇಂದ್ರದಲ್ಲಿ ಐದು ವರ್ಷ ಆಡಳಿತ ಮಾಡಿದ ಮೋದಿ ನೇತೃತ್ವದ ಬಿಜೆಪಿ ಸಕರ್ಾರ ದೇಶದ ಅಭಿವೃದ್ಧಿ, ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಒಡೆದಾಳುವ ನೀತಿ ಅನುಸರಿಸಿದೆ. ಜನರಿಗೆ ಕೊಟ್ಟಂಥ ವಾಗ್ದಾನ ಈಡೇರಿಸುವಲ್ಲಿ ವಿಫಲವಾಗಿದೆ. ಅಚ್ಛೇ ದಿನ್ ಹುಸಿಯಾಗಿದೆ. ಹೀಗಾಗಿ ಈ ಸಲ ಜನತೆ ಬಿಜೆಪಿಗೆ ಅಧಿಕಾರದಿಂದ ದೂರವಿಡಲಿದ್ದಾರೆ ಎಂದರು.
ಸಂಸದ ಭಗವಂತ ಖೂಬಾ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸ ಮಾಡಿಲ್ಲ. ಸುಳ್ಳು ಭರವಸೆ ನೀಡಿದ ಬಿಜೆಪಿಗೆ ಪಾಠ ಕಲಿಸಬೇಕು. ಅಭಿವೃದ್ಧಿಪರ ಚಿಂತಕ ಖಂಡ್ರೆಯವರಿಗೆ ಬೆಂಬಲಿಸಿ ಭರ್ಜರಿ ಜಯ ತಂದುಕೊಡಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ವೀರಣ್ಣ ಪಾಟೀಲ್, ಭೀಮರಾವ ಪಾಟೀಲ್, ಲಕ್ಷ್ಮಣರಾವ ಬುಳ್ಳಾ, ರಮೇಶ ಡಾಕುಳಗಿ, ಸಂಜಯ ಜಾಗಿರ್ದಾರ, ಸುಗಂಧಾ ಅಣ್ಣೆಪ್ಪ, ಕಂಟೆಪ್ಪ ದಾನಾ, ಪ್ರಭು ತಾಳಮಡಗಿ, ಡಾ. ಸಿದ್ದು ಪಾಟೀಲ್, ಓಂಕಾರ ತುಂಬಾ, ಅಫ್ಸರಮಿಯ್ಯಾ, ರಾಜು ಇಟಗಿ, ಮಲ್ಲಿಕಾಜರ್ುನ ಸೀಗಿ, ಆಜಮ್, ನೂರ್ ಕಲಿಮುಲ್ಲಾ, ಫೈಯಜ್ ಗುತ್ತೇದಾರ್, ಇಸ್ಮಾಯಿಲ್, ಅಬ್ದುಲ್ ಸಮದ್, ದತ್ತಕುಮಾರ ಚಿದ್ರಿ, ವಾಹೇದ್ ಬೇಗ್, ದೇವಿಂದ್ರಪ್ಪ ಪೋಲಾ, ಉಮೇಶ ಜಂಬಗಿ, ಸುದರ್ಶನ ಮಾಳಗೆ, ಹುಲೆಪ್ಪ ಪವಿತ್ರ, ವಿಜಯಕುಮಾರ ನಾಥೆ, ವಿನಾಯಕ ಯಾದವ, ಸುರೇಶ ಘಾಂಗ್ರೆ, ವೀರಪ್ಪ ಧುಮ್ಮನಸೂರ ಇತರರಿದ್ದರು