ಮೊದಲ ಪತ್ನಿ ತವರಿಗೆ ಹೋಗಿದ್ದ ಗ್ಯಾಪಲ್ಲೇ 2ನೇ ಮದುವೆಯಾಗಿದ್ದ ಗಂಡನ ಕತೆ ಮುಂದೇನಾಯಿತು?

ಚಿಕ್ಕಬಳ್ಳಾಪುರ: ಮೊದಲ ಹೆಂಡತಿಗೆ ಗೊತ್ತಿಲ್ಲದಂತೆ ಕದ್ದು ಮುಚ್ಚಿ ಮತ್ತೊಂದು ಮದುವೆಯಾಗಿದ್ದ ವ್ಯಕ್ತಿಯೊರ್ವನ ಅಸಲಿ ಬಂಡವಾಳ ಬಯಲಾಗಿದ್ದೇ ತಡ, ಮೊದಲ ಹೆಂಡತಿ ಗಂಡನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಮೆಹಬೂಬ್ ಎಂಬಾತ ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತ 4 ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಸಲ್ಮಾತಾಜ್ ಜತೆ ವಿವಾಹವಾಗಿದ್ದ. ಮೂರನೇ ಮಗುವಾದ ನಂತರ ಹೆಂಡತಿ ತವರಿಗೆ ಹೋಗಿದ್ದ ಗ್ಯಾಪಲ್ಲೇ ಫರೀದಾ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಆಕೆಗೂ ಒಂದು ಮಗು ಕರುಣಿಸಿ, ಆಕೆಗೆ ಗೊತ್ತಿಲ್ಲದಂತೆ ಈಕೆ ಜತೆ, ಈಕೆಗೆ ಗೊತ್ತಿಲ್ಲದಂತೆ ಆಕೆ ಜತೆ ಸಂಸಾರ ಮಾಡುತ್ತಿದ್ದ.

ಗಂಡನ ಎರಡನೇ ಮದುವೆ ವಿಚಾರ ಸಂಬಂಧಿಕರ ಮೂಲಕ ಸಲ್ಮಾತಾಜ್‌ಗೆ ಗೊತ್ತಾಗಿದೆ. ಇದರಿಂದ ಕೆರಳಿದ ಸಲ್ಮಾತಾಜ್, ಗಂಡನಿಗೆ ಬುದ್ಧಿವಾದ ಹೇಳಿದ್ದಳಂತೆ. ಆದರೂ ಕೇಳದಿದ್ದಾಗ, ಮಕ್ಕಳ ಸಮೇತ 2ನೇ ಹೆಂಡತಿ ಮನೆಗೆ ಬಂದು, ಗಂಡನನ್ನು ಎಳೆದುಕೊಂಡು ಹೋಗಿದ್ದಾಳೆ. ಇತ್ತ ನನಗೂ ಗಂಡ ಬೇಕು ಎಂದು 2ನೇ ಹೆಂಡತಿ ಫರೀದಾ ಅವಲತ್ತುಕೊಂಡಿದ್ದಾಳೆ. (ದಿಗ್ವಿಜಯ ನ್ಯೂಸ್)

4 Replies to “ಮೊದಲ ಪತ್ನಿ ತವರಿಗೆ ಹೋಗಿದ್ದ ಗ್ಯಾಪಲ್ಲೇ 2ನೇ ಮದುವೆಯಾಗಿದ್ದ ಗಂಡನ ಕತೆ ಮುಂದೇನಾಯಿತು?”

  1. Our Chief minister started the trend. Probably just like offering write off loans to farmers, he may bring a new proposal giving all men having second wife exception from paying any personal tax and if they have to pay income tax than state government will reimburse it

  2. ಇಬ್ಬರೇ ಸಾಕೆ? ಇಪ್ಪತ್ತು ಹೆಂಡತಿಯರು ಬೇಕಿಲ್ಲವೇ? ಅವಕಾಶ ಸಿಕ್ಕಿದರೆ ಏನು ಮಾಡಲೂ ಹೇಸುವುದಿಲ್ಲ ಇಂತಹ ಭಂಡ ನನ್ನ ಮಕ್ಕಳು.

Leave a Reply

Your email address will not be published. Required fields are marked *