ಹೆಂಡತಿಯಿದ್ದರೂ ಮತ್ತೊಬ್ಬಳೊಂದಿಗೆ ಪ್ರೀತಿ-ಪ್ರೇಮ-ಪ್ರಣಯವಾಡಿದ ಪತಿಗೆ ಬಿತ್ತು ಗೂಸಾ!

ಬೆಂಗಳೂರು: ವಿಚ್ಛೇದನ ನೀಡದೆಯೇ ಪ್ರೇಯಸಿ ಜತೆ ಸಪ್ತಪದಿ ತುಳಿದಿದ್ದ ಕ್ಲಾಸ್​​​ ಒನ್​​​​​​​​​​ ಆಫೀಸರ್​​​​​ ಶಿವಕುಮಾರ್‌ಗೆ ಪತ್ನಿಯೇ ಥಳಿಸಿರುವ ಘಟನೆ ನಡೆದಿದೆ.

ವಿನೋದಾ ಎಂಬಾಕೆ ಜತೆ ಶಿವಕುಮಾರ್ ವಿವಾಹವಾಗಿದ್ದ. ಬಳಿಕ ರಂಜಿತಾ ಎಲಿಗಾರ್ ಎಂಬಾಕೆ ಜತೆಗೆ ಸ್ನೇಹ ಬೆಳೆಸಿಕೊಂಡಿದ್ದ ಈತ ಮೊದಲ ಪತ್ನಿ ವಿನೋದಾಗೆ ವಿಚ್ಛೇದನ ನೀಡದೆಯೇ 2ನೇ ವಿವಾಹ ಮಾಡಿಕೊಂಡಿದ್ದ. 2ನೇ ಪತ್ನಿಗೂ ಮಗುವನ್ನು ಕರುಣಿಸಿದ್ದ.

ಈ ಕುರಿತು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿ, ಮಕ್ಕಳಿಗೆ ನಿತ್ಯ ಚಿತ್ರಹಿಂಸೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಎರಡನೇ ಪತ್ನಿಯ ಮನೆಗೆ ನುಗ್ಗಿ ಪತಿಗೆ ಗೂಸಾ ನೀಡಿದ್ದಾರೆ. ಮೊದಲ ಪತ್ನಿ ಬರುತ್ತಿದ್ದಂತೆ ಅಲರ್ಟ್ ಆದ ಶಿವಕುಮಾರ್ 2ನೇ ಪತ್ನಿಯ ತಾಳಿ ಕಿತ್ತು, ಕಿಸೆಗೆ ಹಾಕಿಕೊಂಡಿದ್ದಾನೆ.

ಜೀವನ್‌ಭೀಮಾ ನಗರ ಠಾಣೆಗೆ ಮೊದಲ ಪತ್ನಿ ದೂರು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)

2 Replies to “ಹೆಂಡತಿಯಿದ್ದರೂ ಮತ್ತೊಬ್ಬಳೊಂದಿಗೆ ಪ್ರೀತಿ-ಪ್ರೇಮ-ಪ್ರಣಯವಾಡಿದ ಪತಿಗೆ ಬಿತ್ತು ಗೂಸಾ!”

  1. ನಮ್ಮ ದೇಶದ ಕಾನೂನು ವ್ಯವಸ್ಥೆ ತುಂಬಾ ತ್ವರಿತಗತಿಯಲ್ಲಿ ಸಾಂಸಾರಿಕ ಕಲಹಗಳ ಅಹಲುವಾಲುಗಳನ್ನು ಆಲಿಸಿ, ಬೇಗ ಏನಾದರೂ ತೀರ್ಮಾನಿಸಿ ಖುಲಾಸೆಗೊಳಿಸಬೇಕು. ಇಲ್ಲದಿದ್ದರೆ ಇಂತಹ ಹೊಡೆದಾಟಗಳು, ಚಾಪೆಯ ಕೆಳಗೋ ಇಲ್ಲ ರಂಗೋಲಿಯ ಕೆಳಗೋ ತೂರಿಕೊಳ್ಳಲು ನಮ್ಮ ಜನರೇ ತಡಕಾಡುವರು. ಏಕೆಂದರೆ ಇರುವುದೊಂದೇ ಜನ್ಮ ಏಕೆ ವರ್ಷಗಟ್ಟಲೆ ನ್ಯಾಯಾಲಯಗಳ ಮೆಟ್ಟಿಲುಗಳನ್ನು ಹತ್ತಿ ಇಳಿದು ವ್ಯರ್ಥ ಮಾಡುವುದು ? – ಗುಂಜ್ಮ೦ಜ (GUNJMANJA)

  2. ಮೊದಲ ಹೆಂಡತಿ ಆ ಕಾಮುಕ ಗಂಡನಿಗೆ ಗೂಸ ಕೊಟ್ಟಿದ್ದು ಸರಿಯಾಗಿದೆ. ಭೇಷ್!

Leave a Reply

Your email address will not be published. Required fields are marked *