ಕೊಲೆಗೀಡಾದ ಪತಿಯ ಅಗಲಿಕೆಯ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಚಿಕ್ಕಬಳ್ಳಾಪುರ: ಒಂದು ತಿಂಗಳ ಹಿಂದಷ್ಟೇ ಪತಿಯ ಕೊಲೆಯಾಗಿತ್ತು, ಇದೀಗ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಿಕ್ಕಬಳ್ಳಾಪುರದ ಮುಸ್ಟೂರು ಗ್ರಾಮದ ಸುನೀತಾ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸುನೀತಾ ಅವರ ಪತಿ ವೆಂಕಟೇಶ್​ ಕಳೆದ ತಿಂಗಳಲ್ಲಿ ಹಳೆಯ ದ್ವೇಷದಿಂದಾಗಿ ಸ್ನೇಹಿತರಿಂದಲೇ ಕೊಲೆಯಾಗಿದ್ದರು. ಮಾತ್ರವಲ್ಲ, ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿರಲಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆರೋಪಿಗಳು ಶಿಕ್ಷೆಗೆ ಒಳಗಾಗದೆ ಓಡಾಡುತ್ತಿದ್ದ ನೋವಿನ ಜತೆಗೆ ತುಂಬಾ ಪ್ರೀತಿಸುತ್ತಿದ್ದ ಪತಿಯ ಅಗಲಿಕೆಯ ನೋವು … Continue reading ಕೊಲೆಗೀಡಾದ ಪತಿಯ ಅಗಲಿಕೆಯ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ