ಪತಿಯ ನಿರ್ಲಕ್ಷ್ಯತನದ ಬೈಕ್ ಸವಾರಿಗೆ ಪತ್ನಿ ಬಲಿ

blank
ರಾಣೆಬೆನ್ನೂರ: ಪತಿಯ ನಿರ್ಲಕ್ಷ್ಯತನದ ಬೈಕ್ ಸವಾರಿಗೆ ಪತ್ನಿ ಮೃತಪಟ್ಟ ಟನೆ ತಾಲೂಕಿನ ಚಳಗೇರಿ ರಾಷ್ಟ್ರೀಯ ಹೆದ್ದಾರಿ-48ರ ಟೋಲ್ ನಾಕಾದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ದೇವಗೊಂಡನಕಟ್ಟಿ ಗ್ರಾಮದ ಗಿರಿಜಮ್ಮ ಮಲ್ಲಿಕಾರ್ಜುನ ಹಾವೇರಿ (48) ಮೃತ ಪತ್ನಿ. ಈಕೆಯ ಪತಿ ಮಲ್ಲಿಕಾರ್ಜುನ ಹಾವೇರಿ (52) ನಿರ್ಲಕ್ಷ್ಯತನದಿಂದ ಸಾವು ಸಂಭವಿಸಿದೆ ಎನ್ನಲಾಗಿದೆ.
ಮಲ್ಲಿಕಾರ್ಜುನ ತನ್ನ ಪತ್ನಿ ಗಿರಿಜಮ್ಮ ಅವರನ್ನು ಸ್ಕೂಟ್ ಮೇಲೆ ಕುಂದರಿಸಿಕೊಂಡು ದೇವಗೊಂಡನಕಟ್ಟಿಯಿಂದ ದಾವಣಗೆರೆಗೆ ಹರ್ಬಲ್ ಲೈಫ್ ಮಿಟಿಂಗ್ ಗೆ ತೆರಳುತ್ತಿದ್ದ. ಈ ಸಮಯದಲ್ಲಿ ಚಳಗೇರಿ ಟೋಲ್ನಾಕಾದಲ್ಲಿ ಗೇಟ್ ಹಾಕಿದ್ದರೂ ಸೈಡ್ ಗೆ ಹೋಗುವ ಬದಲು ಗೇಟ್ ಮೇಲೆ ತಾನೂ ತಲೆ ಭಾಗಿ ಹೋಗಿದ್ದಾನೆ. ಆದರೆ, ಹಿಂದೆ ಕುಳಿತ್ತಿದ್ದ ಪತ್ನಿ ಗಿರಿಜಮ್ಮಗೆ ಗೇಟ್ ಬಡಿದು ಕೆಳಗೆ ಬಿದ್ದಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ದಾವಣಗೆರೆ ಸಿಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿತ್ತಾದರೂ ಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Share This Article

ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake

Cobra Snake : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು…

ದೇ ಪದೇ ಗಂಟಲು ನೋವು ಬರುತ್ತಿದೆಯೇ? ಹಾಗಾದ್ರೆ ಈ ಸುಲಭ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ | Home remedies

Home remedies: ಹವಾಮಾನ ಬದಲಾದಂತೆ ಸೋಂಕಿನ ಹರಡುವಿಕೆ ಕೂಡಾ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಅನೇಕ ಜನರು…

ಈರುಳ್ಳಿ ರಸ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ | Onion Juice

Onion Juice: ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಡುಗೆಯನ್ನು…