More

    ವಿಶ್ವಾಸದ್ರೋಹಿ ಗಂಡನಿಗೆ ಹೆಂಡತಿ ಮಾಡಿದನ್ನು ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!

    ಉಕ್ರೈನ್​: ಗಂಡ ವಿಶ್ವಾಸದ್ರೋಹಿಯಾಗಿದ್ದರೆ ಹೆಂಡತಿ ಏನು ಮಾಡಬಹುದು. ಭಾರತದ ನಾರಿಯರು ಏನು ಮಾಡುತ್ತಾರೋ ಗೊತ್ತಿಲ್ಲ, ಆದರೆ ಉಕ್ರೈನ್​ನ ಹೆಂಡತಿ ಮಾತ್ರ ಹೀಗೆ ಮಾಡಿದಳು!

    40 ವರ್ಷದ ಈ ಪುರುಷ ಅಂದು ಮುಂಜಾನೆ ಎದ್ದಾಗ ಆತನ ಜನನಾಂಗ ಉಬ್ಬಿಕೊಂಡಿತ್ತು, ಮತ್ತು ದಪ್ಪವಾಗಿ ಅಸಾಧ್ಯ ನೋವಿತ್ತು. ಅದಕ್ಕೆ ಆತ ಏನೇನೋ ಪ್ರಯೋಗ ಮಾಡಿದರೂ ನೋವು ಕಡಿಮೆಯಾಗಲಿಲ್ಲ. ಕೊನೆಗೆ ಆಂಬುಲೆನ್ಸ್​ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಬೇಕಾಯಿತು.

    ವಿಶ್ವಾಸದ್ರೋಹಿ ಗಂಡನಿಗೆ ಹೆಂಡತಿ ಮಾಡಿದನ್ನು ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!ಆಗಿದ್ದಿಷ್ಟು, ಆತನ ಹೆಂಡತಿ ಅಂದು ರಾತ್ರಿ ಮಲಗಿದ್ದಾಗ ಆತನ ಜನನಾಂಗದೊಳಕ್ಕೆ ಕಬ್ಬಿಣದ ನಟ್​ನ್ನು ಸೇರಿಸಿಬಿಟ್ಟಿದ್ದಳು! ಅಸಾಧ್ಯ ನೋವಿನಿಂದ ಬಳಲುತ್ತಿದ್ದ ಅವನು, ಅದನ್ನು ತಾನೇ ಹೊರತೆಗೆಯಲು ಕಷ್ಟ ಪಟ್ಟಿದ್ದಾನೆ. ಆದರೆ ಸಾಧ್ಯವಾಗದೇ ಝಪೊರೊಝಿಯಾ ನಗರದ ಆಸ್ಪತ್ರೆಗೆ ತೆರಳಿದ್ದಾನೆ.

    ಈತನನ್ನು ಪರಿಕ್ಷೀಸಿದ ವೈದ್ಯರು “ಕೋಬ್ರಾ” ರಕ್ಷಕ ಸಿಬ್ಬಂದಿಯನ್ನು ಕರೆಸಿದ್ದಾರೆ. ಏಕೆಂದರೆ ಅವರ ಬಳಿ ಈ ನಟ್​ನ್ನು ತೆಗೆಯಲು ಸಾಧ್ಯವಾಗುವಂತಹ ಯಾವ ಸಲಕರಣೆಗಳು ಇರಲಿಲ್ಲ!

    ಆ ನಟ್​ನನ್ನು ಹೊರ ತೆಗೆಯಲು ಗರಗಸ ಬಳಸ ಬೇಕಾಗಿತ್ತು. ನಟ್​ನ್ನು ತುಂಡರಿಸಲು ಗರಗಸವನ್ನು ಬಳಸುವಾಗ ಬೆಂಕಿ ಹೊರ ಬರುತ್ತಿತ್ತು. ಅದರಿಂದ ಗರಗಸ ಬಿಸಿಯಾಗುವುದನ್ನು ತಡೆಯಲು ನೀರು ಹಾಕುತ್ತಾ ನಟ್​​ನ್ನು ಕೊಯ್ಯಬೇಕಾಯಿತು.

    ತಂಡದ ಮುಖ್ಯಸ್ಥ ಒಲೆಕ್ಸಂಡರ್ ಬ್ರಿಯೆಂಕೊ, ನಟ್​ನ್ನು ತೆಗೆಯಲು ನಮಗೆ ವೈದ್ಯರಿಂದ ಕರೆ ಬಂತು. ನಾವು ಈ ಕೆಲಸ ಮಾಡಲು ವಿಶೇಷ ಉಪಕರಣಗಳನ್ನು ಬಳಸಬೇಕಾಯಿತು. ಅನಸ್ತೇಷಿಯಾ ನೀಡಿ ಆ ಗಂಡನನ್ನು ಮಲಗಿಸಿದ್ದೆವು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ತಂಡದ ಸದಸ್ಯ ಎಡ್ವರ್ಡ್ ನೆಖೋರೋಶೆವ್, ನಾವು ಇಂತಹ ಹಲವು ಪ್ರಕರಣಗಳನ್ನು ಎದುರಿಸಿದ್ದೇವೆ. ಕೆಲ ರಿಂಗ್​ಗಳನ್ನು ತೆಗೆಯಲು ನಮಗೆ ತರಬೇತಿ ಇದೆ. ರಿಂಗ್​ಗಳು ಅಲ್ಲದೆ ಕೈಕೋಳಗಳನ್ನು ನಾವು ಮನುಷ್ಯರ ದೇಹದಿಂದ ಹೊರ ತೆಗೆದಿದ್ದೇವೆ. ನಾವು ಈತನ ಗಂಡಸ್ತನಕ್ಕೆ ಹಾನಿಯುಂಟು ಮಾಡಿಲ್ಲ. ಮುಂದೆ ಆತ ತಂದೆಯಾಗುವ ಶಕ್ತಿಯನ್ನು ಹೊಂದಿದ್ದಾನೆ ಎಂದು ತಿಳಿಸಿದರು.

    ಈಗ ಆತ ಐವರು ವೈದ್ಯರ ತಂಡದ ತೀವ್ರ ನಿಗಾದಲ್ಲಿದ್ದಾನೆ. ಆತನಿಗೆ ಚಿಕಿತ್ಸೆ ಮುಂದುವರಿದಿದೆ. ಆತ ಬಲು ಬೇಗ ಗುಣಮುಖನಾಗುತ್ತಾನೆ ಎನ್ನುತಾರೆ ಆ ವೈದ್ಯರು.

    ಕರಾಳ ರಾತ್ರಿಯಲ್ಲಿ ನಡೆದ ಅಂದಿನ ಆ ಘಟನೆ ಬಳಿಕ ಆತ ಆಕೆಗೆ ವಿಚ್ಚೇದನ ನೀಡಲು ಯೋಚಿಸಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts