ಕೇರಳ; ಒರ್ವ ವ್ಯಕ್ತಿಯೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಪತ್ನಿಯನ್ನು ಹಿಂಬಾಲಿಸಿದ ಪತಿ, ಕಾರಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾನೆ. ಈ ಹಿನ್ನೆಲೆ ಆಕೆ ಮೃತಪಟ್ಟ(Kill) ಘಟನೆ ಇಲ್ಲಿನ ಕೊಲ್ಲಂ ಜಿಲ್ಲೆಯ ಚೆಮ್ಮುನ್ ಮುಕ್ಕು ಎಂಬಲ್ಲಿ ಮಂಗಳವಾರ ರಾತ್ರಿ(ಡಿ.04) ನಡೆದಿದೆ.
ಸ್ಥಳೀಯ ನಿವಾಸಿ ಅನಿಲಾ(44) ಮೃತೆ ಎಂದು ಗುರುತಿಸಲಾಗಿದೆ. ಅಲ್ಲದೆ. ಪತಿ ಪದ್ಮರಾಜನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಒರ್ವ ವ್ಯಕ್ತಿಯೊಂದಿಗೆ ಅನಿಲಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಪತಿ ಪದ್ಮರಾಜನ್ ಓಮ್ನಿ ವ್ಯಾನ್ನಲ್ಲಿ ಹಿಂಬಾಲಿಸಿದ್ದಾನೆ. ಕಾರನ್ನು ಅಡ್ಡಗಟ್ಟಿ ಒಳಗೆ ಹೊರಗೆ ಪೆಟ್ರೋಲ್ ಹಾಕಿ ಏಕಾಏಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಇದರಿಂದ ಎಚ್ಚೆತ್ತ ವ್ಯಕ್ತಿ ಸ್ಥಳೀಯರ ಸಹಾಯದಿಂದ ಕಾರಿನಿಂದ ಹೊರಗೆ ಬಂದು ಆಕೆಯನ್ನು ಕಾಪಾಡಲು ಪ್ರಯತ್ನಿಸಿದ್ದಾನೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆನೆ ಮೃತಪಟ್ಟಿದ್ದಾಳೆ. ಆ ವ್ಯಕ್ತಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 16 ವರ್ಷದವನ್ನು ಪ್ರೀತಿಸಿ ಮದುವೆಯಾದ ಶಿಕ್ಷಕಿ; ಅಪರೂಪದ ಪ್ರಕರಣದ ಬಗ್ಗೆ ಅಧಿಕಾರಿಗಳು ಹೇಳಿದ್ದಿಷ್ಟು
ಅನಿಲಾ ಇತ್ತೀಚೀಗಷ್ಟೇ ತನ್ನ ಸ್ನೇಹಿತ ಹನೀಶ್ ಜತೆಗೂಡಿ ಬೇಕರಿ ತೆರೆದಿದ್ದಾರೆ. ಇದನ್ನು ಪದ್ಮರಾಜನ್ ವಿರೋಧಿಸಿದ್ದರು ಎಂದು ಹೇಳಲಾಗಿದೆ. ಹೀಗಾಗಿ, ದಂಪತಿಗಳಿಬ್ಬರು ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. ಕಾರಿನಲ್ಲಿ ಹನೀಶ್ ಇದ್ದಾನೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಈ ಕೃತ ಎಸಗಿದ್ದಾನೆ, ಇದು ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).
36 ವರ್ಷಗಳ ಬಳಿಕ 104ರ ವೃದ್ಧ ಜೈಲ್ನಿಂದ ಬಿಡುಗಡೆ; ಶತಾಯುಷಿ ಹೇಳಿದ್ದೇನು ಗೊತ್ತಾ? | Jail
16 ವರ್ಷದವನ್ನು ಪ್ರೀತಿಸಿ ಮದುವೆಯಾದ ಶಿಕ್ಷಕಿ; ಅಪರೂಪದ ಪ್ರಕರಣದ ಬಗ್ಗೆ ಅಧಿಕಾರಿಗಳು ಹೇಳಿದ್ದಿಷ್ಟು