Wife Death: ಗಂಡನೇ ಸರ್ವಸ್ವ ಎಂದು ಭಾವಿಸಿ, ಹಲವಾರು ಕನಸು ಕಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಹಿಳೆ, ಇದೀಗ ಪತಿಯಿಂದಲೇ ದುರಂತ ಅಂತ್ಯ ಕಂಡಿದ್ದಾಳೆ. ಈ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿದೆ.

ಇದನ್ನೂ ಓದಿ: ಭೀಮಾ ಕೃಷ್ಣಾ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸಿನ ನೆರವು, ಸಿಎಂ ಸಭೆ ಕುರಿತು ಎಂ.ಬಿ. ಪಾಟೀಲ ಹೇಳಿದ್ದೇನು ಗೊತ್ತಾ?
ಹಲವು ವರ್ಷಗಳ ಹಿಂದೆಯೇ ಮದುವೆಯಾಗಿ, ಸಂಸಾರ ಸಾಗಿಸುತ್ತಿದ್ದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಪತಿಯ ಆಟವನ್ನು ಪತ್ತೆಹಚ್ಚಿದ ಹೆಂಡತಿ, ಈ ವಿಷಯದಿಂದ ತೀರ ಆಘಾತಕ್ಕೊಳಗಾಗಿದ್ದಳು. ಇದೇ ವಿಷಯಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ, ಬುದ್ಧಿ ಕಲಿಸಲು ಮುಂದಾಗಿದ್ದ ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪತಿ, ಆಕೆಯ ದುರಂತ ಅಂತ್ಯಕ್ಕೆ ಕಾರಣನಾಗಿದ್ದಾನೆ.
ಮೃತ ಮಹಿಳೆಯನ್ನು ಖಮ್ಮಂ ಮೂಲದ ಸಾಹಿತಿ (30) ಎಂದು ಗುರುತಿಸಲಾಗಿದ್ದು, ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಪಲ್ವಂಚ ಗ್ರಾಮದವರು ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆಯಷ್ಟೇ ಖಮ್ಮಂ ಮೂಲದ ರೆಗುಲಾ ಅನಿಲ್ ಎಂಬ ವ್ಯಕ್ತಿಯನ್ನು ಮದುವೆ ಆಗಿದ್ದ ಸಾಹಿತಿ, ಪತಿ ಅನ್ಯ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿರುವುದನ್ನು ಪತ್ತೆಹಚ್ಚಿದ್ದಾರೆ. ಈ ವಿಷಯವನ್ನು ತನ್ನ ಮನೆಯವರಿಗೂ ತಿಳಿಸಿ, ಅನಿಲ್ಗೆ ಎಚ್ಚರಿಸಿದ್ದರು. ಆದರೆ, ಇದು ಇಲ್ಲಿಗೆ ನಿಂತಿಲ್ಲ.
ಇದನ್ನೂ ಓದಿ: 1 ಕೋಟಿ ರೂ. ಕೊಡುವಂತೆ ಮೊಹಮ್ಮದ್ ಶಮಿಗೆ ಬೆದರಿಕೆ ಕಾಲ್! | Threatening
ಇದೇ ವಿಷಯಕ್ಕೆ ಮನೆಯಲ್ಲಿ ಹಲವಾರು ಬಾರಿ ಜಟಾಪಟಿ ನಡೆದಿದೆ. ದಿನದಿಂದ ದಿನಕ್ಕೆ ಜಗಳ ತಾರಕ್ಕೇರುತ್ತಿದ್ದಂತೆ ಮನೆಯ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ನಡೆಸಿ, ಅನಿಲ್ ತನ್ನ ಅನೈತಿಕ ಸಂಬಂಧವನ್ನು ಇಂದಿಗೆ ಕೊನೆಗೊಳಿಸುವಂತೆ ಎಚ್ಚರಿಕೆ ಕೂಡ ನೀಡಲಾಗಿತ್ತು. ಇದ್ಯಾವುದಕ್ಕೂ ಬಗ್ಗದ ಅನಿಲ್ ಎಂದಿನಂತೆ ತನ್ನ ವಿವಾಹೇತರ ಸಂಬಂಧವನ್ನು ಮುಂದುವರಿಸಿದ್ದ. ಈ ನಡೆಗೆ ಸಿಟ್ಟಾದ ಸಾಹಿತಿ, ಶನಿವಾರ (ಮೇ.03) ರಾತ್ರಿ ಅನಿಲ್ ಜೊತೆಗೆ ತೀರ ವಾಗ್ವಾದಕ್ಕಿಳಿದಿದ್ದಳು. ಪತ್ನಿಗೆ ಮನಬಂದಂತೆ ಥಳಿಸಿದ ಪತಿ, ಆಕೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾಳೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದ.
ಸಾಹಿತಿಗೆ ಹಿಗ್ಗಾಮುಗ್ಗಾ ಹೊಡೆದು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪತಿ ಬಿಂಬಿಸಿದ್ದಾನೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಆಕೆಯ ದೇಹದ ಮೇಲೆ ಗಾಯಗಳಿವೆ, ಇದು ಖಂಡಿತ ಕೊಲೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಘಟನೆಯ ಬೆನ್ನಲ್ಲೇ ಊರು ಬಿಟ್ಟಿರುವ ಪತಿ ಅನಿಲ್, ಪೊಲೀಸರಲ್ಲಿ ಅನುಮಾನ ಹೆಚ್ಚಿಸಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದು ಕೊಲೆ ಎಂದು ಸಾಬೀತಾದರೆ ಆತನ ಮೇಲೆ ಕ್ರಮ ಜರುಗಿಸುತ್ತೇವೆ. ಮೊದಲು ಪ್ರಕರಣ ದಾಖಲಿಸಿ ಎಂದು ತಿಳಿಸಿದ ಬೆನ್ನಲ್ಲೇ ಸಾಹಿತಿ ಪೋಷಕರು ಅನಿಲ್ ವಿರುದ್ಧ ದೂರು ಸಲ್ಲಿಸಿದ್ದಾರೆ,(ಏಜೆನ್ಸೀಸ್).
ಭಾರತಕ್ಕೆ ರಷ್ಯಾ ಬೆಂಬಲ! ಪಹಲ್ಗಾಮ್ ದಾಳಿ ಖಂಡಿಸಿದ ಪುಟಿನ್; ಪ್ರಧಾನಿ ಮೋದಿ ಮಾತಿಗೆ ಸಮ್ಮತಿ | Pahalgam Attack