ದಂಪತಿಯ ಕೊಲೆ: ಬೇರೆ ಬೇರೆ ಕೋಣೆಗಳಲ್ಲಿ ಶವ, ಪ್ರತಿಷ್ಠಿತ ರೆಸಾರ್ಟ್​ನ ವಿಲ್ಲಾದಲ್ಲೇ ಹತ್ಯೆ!

ರಾಮನಗರ: ಪ್ರತಿಷ್ಠಿತ ರೆಸಾರ್ಟ್​ನ ವಿಲ್ಲಾವೊಂದರಲ್ಲಿ ನೆಲೆಸಿದ್ದ ದಂಪತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು, ಇಬ್ಬರೂ ಬೇರೆ ಬೇರೆ ಕೋಣೆಗಳಲ್ಲಿ ಹತ್ಯೆಗೀಡಾಗಿದ್ದಾರೆ. ಆಶಾ (63), ರಘುರಾಜ್ (70) ಹತ್ಯೆಗೀಡಾದ ದಂಪತಿ. ರಘುರಾಜ್​ ಏರ್​ಫೋರ್ಸ್ ಪೈಲಟ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಇವರು ಈಗಲ್​ಟನ್​ ರೆಸಾರ್ಟ್​ನ ಸಿ ಬ್ಲಾಕ್​ನ ವಿಲ್ಲಾವೊಂದರಲ್ಲಿ ವಾಸವಿದ್ದರು. ಮನೆಯ ಎರಡು ಪ್ರತ್ಯೇಕ ಕೋಣೆಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಕೆಲವು ವರ್ಷಗಳಿಂದ ಈ ದಂಪತಿ ಇಲ್ಲಿ ವಾಸವಿದ್ದು, ಹಣಕ್ಕಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ವಿಲ್ಲಾ ಭದ್ರತೆಗೆ ನಿಯೋಜಿಸಲಾಗಿದ್ದ ಸೆಕ್ಯುರಿಟಿ … Continue reading ದಂಪತಿಯ ಕೊಲೆ: ಬೇರೆ ಬೇರೆ ಕೋಣೆಗಳಲ್ಲಿ ಶವ, ಪ್ರತಿಷ್ಠಿತ ರೆಸಾರ್ಟ್​ನ ವಿಲ್ಲಾದಲ್ಲೇ ಹತ್ಯೆ!