ಸಿದ್ದಾಪುರ: ಕುಟುಂಬದ ಉಪನಯನ ಕಾರ್ಯಕ್ರಮಕ್ಕೆ ಸ್ಕೂಟರ್‌ನಲ್ಲಿ ಮಂಗಳೂರಿಗೆ ಮಂಗಳವಾರ ಸಂಜೆ ತೆರಳುತ್ತಿದ್ದ ದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇಲ್ಲಿನ ನೆಲ್ಯಹುದಿಕೇರಿಯ ಎಸ್.ಎಸ್.ಜ್ಯುವೆಲರಿಯಲ್ಲಿ ಅಕ್ಕಸಾಲಿಗ ವೃತ್ತಿ ಮಾಡುತ್ತಿದ್ದ ಚಿದಾನಂದ ಆಚಾರ್ಯ(49) ಮತ್ತು ಪತ್ನಿ ನಳಿನಿ(40) ಮೃತಪಟ್ಟವರು.
ಮಡಿಕೇರಿಯಿಂದ ಮಂಗಳೂರಿಗೆ ದ್ವಿಚಕ್ರ ವಾಹನದಲ್ಲಿ ದಂಪತಿ ಹೋಗುತ್ತಿದ್ದರು. ಇದೇ ಸಂದರ್ಭ ಸಂಪಾಜೆ ಮಾರ್ಗವಾಗಿ ಸುಳ್ಯದಿಂದ ಬರುತ್ತಿದ್ದ ಕಂಟೇನರ್ ಮಧ್ಯೆ ಕೊಯನಾಡು ಚೆಡಾವು ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಹಿಂಬದಿ ಸವಾರರಾಗಿದ್ದ ನಳಿನಿ ಗಂಭೀರ ಗಾಯಗೊಂಡು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರೂ ಮೃತಪಟ್ಟಿದ್ದಾರೆ. ಮೃತ ದಂಪತಿಗೆ 12 ವರ್ಷ ಮಗ ಇದ್ದಾನೆ. ಘಟನಾ ಸ್ಥಳಕ್ಕೆ ಸಂಪಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.