ಜೊಯಿಡಾ:ಕಾಡು ಕುರಿ ಹೊಡೆದು, ಅದರ ಮಾಂಸವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಬೇಟೆಗಾರರನ್ನು(Hunters) ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದ ಅಧಿಕಾರಿಗಳು ಬಂಧಿಸಿದ್ದಾರೆ.
ಗೋಪಾಲ ತಾಂಬಡೋ ವೇಳಿಪ ಹಾಗೂ ಶಾಲಿನಿ ವೇಳೀಪ ಬಂಧಿತರು. ಬಂಧಿತರಿಂದ ಮಾಂಸ ಹಾಗೂ ಬೇಟೆಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅವರು ಬೇಟೆಯಾಡಿ, ಮಾಂಸ ತೆಗೆದು ಸಂಬಂಧಿಕರಿಗೆ ಹಂಚುವ ಸಲುವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ.
ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ನಿರ್ದೇಶಕ ನೀಲೇಶ ದೇವೋಬಾ ಶಿಂಧೆ. ಎಸಿಎಫ್ ಎಂ.ಎಸ್ ಕಳ್ಳಿಮಠ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ನೀಲಕಂಠ ಎಲ್. ದೇಸಾಯಿ, ಡಿಆರ್‌ಎಫ್‌ಒಗಳಾದ ವಿನೋದ ಪತ್ತಾರ, ದಯಾನಂದ ಮುಗಳಿ, ಸಿಬ್ಬಂದಿ ಮುತ್ತಪ್ಪ ಹುಲಕೋಟಿ, ಸಂತೋಷ ಪೂಜಾರಿ ಪಾಲ್ಗೊಂಡಿದ್ದರು.