ಡಾ.ಪುಷ್ಪಾ ಅಮರನಾಥ್‌ಗೆ ಪರಿಸರ ಮಿತ್ರ ಪ್ರಶಸ್ತಿ

ಹುಣಸೂರು: ತಾಲೂಕಿನ ಮರದೂರು ಲಾಸಲೆಟ್ ವಿದ್ಯಾನಿಕೇತನ್ ಸಂಸ್ಥೆ ವತಿಯಿಂದ ಕೊಡಮಾಡುವ ಪರಿಸರ ಮಿತ್ರ-2019 ಪ್ರಶಸ್ತಿಗೆ ಜಿಪಂ ಸದಸ್ಯೆ ಡಾ.ಪುಷ್ಪಾ ಅಮರನಾಥ್ ಭಾಜನರಾದರು.

ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಸಮಾರಂಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಮಪ್ಪ, ವಿದ್ಯಾಸಂಸ್ಥೆಯ ನಿರ್ದೇಶಕ ಫಾ.ಜೋಬಿಟ್ ಹಸಿರು ಮಿಶ್ರಿತ ಆಕರ್ಷಕ ಕಿರೀಟ ತೊಡಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ಡಾ.ಪುಷ್ಪಾ ಅಮರ್‌ನಾಥ್ ಮಾತನಾಡಿ, ಈ ಬಾರಿ ವಾಯುಮಾಲಿನ್ಯ ತಡೆಗಟ್ಟುವ ಗುರಿ ಹೊಂದಲಾಗಿದ್ದು, ಪ್ರಕೃತಿ ನಾಶದಿಂದಾಗಿ ವಿಶ್ವವೇ ತಲ್ಲಣಿಸುವಂತಾಗಿದೆ. ಹೀಗಾಗಿ ಪರಿಸರ ದಿನಾಚರಣೆಯನ್ನು ಜೂನ್‌ಗೆ ಸೀಮಿತಗೊಳಿಸದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯ ಸುತ್ತಮುತ್ತ ಸಸಿ ನೆಡಬೇಕು. ಸ್ಥಳವಿಲ್ಲದಿದ್ದಲ್ಲಿ ಕನಿಷ್ಠ ಕುಂಡಗಳಲ್ಲಾದರೂ ಬೆಳೆಸಬೇಕು ಎಂದು ಕೋರಿದರು.

ಎಸಿಎಫ್ ಸೋಮಪ್ಪ ಮಾತನಾಡಿ, ಪರಿಸರದ ಬಗ್ಗೆ ಕಾಳಜಿ ಇರುವ ಅರ್ಹ ವ್ಯಕ್ತಿ ಡಾ.ಪುಷ್ಪಾ ಅಮರ್‌ನಾಥ್ ಅವರಿಗೆ ಪರಿಸರ ಮಿತ್ರ ಪ್ರಶಸ್ತಿ ನೀಡುತ್ತಿರುವುದು ಸ್ವಾಗತಾರ್ಹ. ಇವರು ಒಂದು ಲಕ್ಷ ಸೀಡ್‌ಬಾಲ್ ತಯಾರಿಸಲು ವಿಶೇಷ ಶ್ರಮ ಹಾಕಿದ್ದರು ಎಂಬುದನ್ನು ಸ್ಮರಿಸಿದರು.

ದಿನಾಚರಣೆ ಅಂಗವಾಗಿ ಪರಿಸರಕ್ಕೆ ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಂಸ್ಥೆಯ ವ್ಯವಸ್ಥಾಪಕ ಫಾ.ಜೋಜೋ, ಫಾ.ತೂಯನಾಧನ್, ಪ್ರಾಚಾರ್ಯ ರವಿ ದೀಪಕ್, ಮುಖ್ಯಶಿಕ್ಷಕಿ ಸಿಸ್ಟರ್ ಕರುಣಾ, ಉಪ ಪ್ರಾಂಶುಪಾಲ ಫಾ.ಅನಿತ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *