ಹುಣಸಗಿ: ಸಹಕಾರಿ ಸಂಘಗಳು ಸಾರ್ವಜನಿಕರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹುಣಸಗಿ ಕೇಂದ್ರದ ಸಂಚಾಲಕಿ ಬಿ.ಕೆ.ಶಾಂತಕ್ಕ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಸಮೃದ್ಧಿ ಮಹಿಳಾ ಪತ್ತಿನ ಸಹಕಾರ ಸಂಘದ ೪ನೇ ವರ್ಷದ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯರು ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಮಾಡಬೇಕು. ಸಹಕಾರಿ ಬ್ಯಾಂಕ್‌ಗಳೆಂದರೆ ಕೇವಲ ದುಡ್ಡು ಗಳಿಸುವುದಲ್ಲ. ಬಡಜನರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಸಮೃದ್ಧಿ ಮಹಿಳಾ ಬ್ಯಾಂಕ್ ಒಳ್ಳೆಯ ಹೆಸರು ಮಾಡಿದ್ದು, ಇನ್ನೂ ಹೆಚ್ಚಿನ ಕೆಲಸ ಮಾಡುವ ಮೂಲಕ ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಸಂಘದ ಅಧ್ಯಕ್ಷೆ ನಂದಿನಿ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿದ್ಯಾ ನಂದುಲಾಲ್ ಠವಾಣಿ, ನಿರ್ದೇಶಕರಾದ ಸವಿತಾಬಾಯಿ ಶೆಟ್ಟಿ, ನೀಲಮ್ಮ ವೈಲಿ, ಭಾಗ್ಯಶ್ರೀ ಕುಲಕರ್ಣಿ, ಜ್ಯೋತಿ ಸ್ಥಾವರಮಠ, ಕಾವ್ಯಶ್ರೀ ಬಳಿ, ಕವಿತಾ ದೇಸಾಯಿ, ಸುನಂದಾ ದೇಸಾಯಿ, ಸುನಿತಾ ಚವ್ಹಾಣ್, ರೇಣುಕಾ ಸಿದ್ದಾಪುರ ಇತರರಿದ್ದರು.
ಶಿಕ್ಷಕಿ ಶಿವಲೀಲಾ ಮುರಾಳ ನಿರೂಪಣೆ ಮಾಡಿ ವಂದಿಸಿದರು. ಸಕಾಲಕ್ಕೆ ಸಾಲ ಮರುಪಾವತಿ ಮಾಡಿದವರನ್ನು ಸನ್ಮಾನಿಸಲಾಯಿತು.