ಸಾಸ್ವೆಹಳ್ಳಿ: ಹೋಬಳಿಯ ಹುಣಸಘಟ್ಟ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬೆಂಕಿ ತಗುಲಿ ಗ್ರಾಮದ ರೈತ ರಂಗಪ್ಪ ಎಂಬುವವರ ದನದ ಕೊಟ್ಟಿಗೆ ಸಂಪೂರ್ಣ ಸುಟ್ಟಿದೆ. ಒಂದು ಹಸು ಅಗ್ನಿಗಾಹುತಿಯಾಗಿದೆ.
ಹಗಲು ವೇಳೆ ತೋಟಗಳಲ್ಲಿ ಮೇಯಿಸಿ, ಸಂಜೆ ಗ್ರಾಮದ ಕಣದಲ್ಲಿ ನಿರ್ಮಿಸಲಾಗಿದ್ದ ಕೊಟ್ಟಿಗೆಯಲ್ಲಿ ಎರಡು ಹಸು ಹಾಗೂ ಒಂದು ಕರುವನ್ನು ಕಟ್ಟಿ ಹಾಕಲಾಗಿತ್ತು. ಸೊಳ್ಳೆಗಳ ಕಾಟ ನಿವಾರಣೆಗೆ ಹಚ್ಚಿಟ್ಟಿದ್ದ ಬೆಂಕಿ ಕೊಟ್ಟಿಗೆಯ ನೆರಿಕೆಗೆ ತಗಲಿದೆ ಎನ್ನಲಾಗಿದೆ.