VIDEO: ಹಾವು ಹಸಿದಿತ್ತು… ಬಾಲ ಕಂಡಿತ್ತು… ತನ್ನದೆಂದು ಗೊತ್ತಾಗದೇ ಅದನ್ನೇ ನುಂಗಿತ್ತು… ವಿಚಿತ್ರವಾದರೂ ಸತ್ಯ ಕಾಣಿರೋ…

ಪೆನ್ಸಿಲ್ವೇನಿಯಾ: ತುಂಬಾ ಹಸಿದುಕೊಂಡಿದ್ದ ಹಾವೊಂದು, ಬಾಲ ತನ್ನದೆಂದು ಗೊತ್ತಾಗದೆ, ಮತ್ತೊಂದು ಹಾವಿರಬಹುದು ಎಂದು ನುಂಗಲು ಮುಂದಾಗಿತ್ತು… ಆದರೆ, ಹಾವು ಸಾಕಿದವರು ಇನ್ನು ಗಮನಿಸಿ ತಕ್ಷಣವೇ ಅದನ್ನು ಬಿಡಿಸಿದ್ದಾರೆ.

ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿರುವ ಫರ್ಗಾಟನ್​ ಫ್ರೆಂಡ್​ ರೆಪ್ಟೈಲ್​ ಸ್ಯಾಂಚುರಿಯಲ್ಲಿ ಇಂಥ ವಿಚಿತ್ರ ಘಟನೆ ಕಂಡುಬಂದಿದೆ. ಇದನ್ನು ಗಮನಿಸಿದ ಸರೀಸೃಪಗಳ ಧಾಮದ ಸದಸ್ಯ ಜೆಸ್ಸಿ ರಾಟ್​ಹ್ಯಾಕರ್​ ಈ ವಿಡಿಯೋವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಿಂಗ್​ಸ್ನೇಕ್​ ಎಂದು ಕರೆಯಲ್ಪಡುವ ಕಪ್ಪು ಮತ್ತು ಬಿಳಿ ಪಟ್ಟಿಯ ಹಾವಿಗೆ ಬೆಳಗ್ಗೆಯೇ ಊಟ ಕೊಡಲಾಗಿತ್ತು. ಆದರೂ ಅದರ ಹೊಟ್ಟೆ ತುಂಬಿರಲಿಲ್ಲ. ಹಾಗಾಗಿ ಅದು ಮುದುಡಿಕೊಂಡಾಗ ಕಾಣಿಸಿದ ತನ್ನ ಬಾಲವನ್ನೇ ಇನ್ನೊಂದು ಹಾವೆಂದು ಬಗೆದು, ಅದನ್ನು ನುಂಗಲಾರಂಭಿಸಿತ್ತು.

ಈ ಕುರಿತು ವಿವರಿಸಿರುವ ಜೆಸ್ಸಿ ರಾಟ್​ಹ್ಯಾಕರ್​, ಕಿಂಗ್​ಸ್ನೇಕ್​ಗಳು ತುಂಬಾ ಹಸಿದುಕೊಂಡಾಗ ತಮ್ಮ ಬಾಲವನ್ನೇ ಮತ್ತೊಂದು ಹಾವೆಂದು ಭಾವಿಸಿ ಕಚ್ಚಿಕೊಳ್ಳುವುದು ಸ್ವಾಭಾವಿಕ. ಆದರೆ, ನಮ್ಮ ಸರೀಸೃಪಗಳ ಧಾಮದಲ್ಲಿರುವ ಕಿಂಗ್​ಸ್ನೇಕ್​ ತುಂಬಾ ವಿಚಿತ್ರವಾಗಿ ವರ್ತಿಸುತ್ತಿದ್ದು, ತನ್ನ ಬಾಲವನ್ನು ತಾನೇ ನುಂಗುತ್ತಿದೆ. ಇದನ್ನು ತಪ್ಪಿಸಲು ಪ್ರಯತ್ನಿಸುವುದಾಗಿ ಹೇಳುತ್ತಾರೆ.

ಸಾಮಾನ್ಯವಾಗಿ ಹಾವುಗಳು ಏನನ್ನಾದರೂ ನುಂಗುವಾಗ ಅವುಗಳ ಮೂಗಿನ ಮೇಲೆ ಹಗುರವಾಗಿ ಹೊಡೆದರೆ, ಒತ್ತಡಕ್ಕೆ ಒಳಗಾಗಿ ತಿನ್ನುತ್ತಿರುವ ವಸ್ತುಗಳನ್ನು ಹಾಗೆಯೇ ಉಗುಳುತ್ತವೆ. ಇದೇ ರೀತಿ ಕಿಂಗ್​ಸ್ನೇಕ್​ಗೂ ಮಾಡಿ, ಅದರ ಬಾಲವನ್ನು ಬಿಡಿಸುವುದಾಗಿ ಹೇಳಿ ಪ್ರಯತ್ನಿತ್ತಾರೆ. ಆದರೆ, ತನ್ನ ಬಾಲವನ್ನು ಉಗುಳುವ ಬದಲು ಕಿಂಗ್​ಸ್ನೇಕ್​ ಮತ್ತಷ್ಟು ನುಂಗಲು ಪ್ರಯತ್ನಿಸುತ್ತದೆ.

ಆಗ ಅವರು ತಮ್ಮ ಹೆಬ್ಬೆರಳಿನ ಉಗುರನ್ನು ಹಾಕಿ ಬಾಯಿಯ ಮೇಲ್ಭಾಗದ ಹಿಡಿತವನ್ನು ಸಡಿಲಗೊಳಿಸಲು ಯತ್ನಿಸುತ್ತಾರೆ. ಆಗ ಕಿಂಗ್​ಸ್ನೇಕ್​ ತಾನು ನುಂಗಿದ್ದ ತನ್ನ ಬಾಲವನ್ನು ಉಗುಳುತ್ತದೆ. ಜೆಸ್ಸಿ ಅವರು ಆ.9ರಂದು ಈ ವಿಡಿಯೋವನ್ನು ಚಿತ್ರೀಕರಿಸಿ ಫೇಸ್​ಬುಕ್​ನಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ಲಭಿಸಿವೆ. (ಏಜೆನ್ಸೀಸ್​)

Jesse rescues a hungry kingsnake from eating himself 🐍😮😳👍🏻

Forgotten Friend Reptile Sanctuary ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಆಗಸ್ಟ್ 9, 2019

Leave a Reply

Your email address will not be published. Required fields are marked *