Thursday, 13th December 2018  

Vijayavani

Breaking News

ಮೋದಿ,ಯೋಗಿ ಮೇಲಿನ ಅಭಿಮಾನಕ್ಕೆ ಶೌಚಗೃಹಗಳಿಗೆ ಕೇಸರಿ ಬಣ್ಣ

Friday, 12.01.2018, 5:17 PM       No Comments

ಲಖನೌ: ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಮೇಲಿನ ಅಭಿಮಾನಕ್ಕಾಗಿ ಉತ್ತರ ಪ್ರದೇಶದ ಗ್ರಾಮವೊಂದರ 100 ಕ್ಕೂ ಹೆಚ್ಚು ಶೌಚಗೃಹಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ.

ಯುಪಿಯ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಅವರ ತವರು ಜಿಲ್ಲೆಯಾದ ಇಟವಾದ ಅಮೃತ್​ಪುರ ಗ್ರಾಮದಲ್ಲಿ ಸ್ವಚ್ಛ ಭಾರತ್​ ಮಿಷನ್​ ಅಡಿ ನಿರ್ಮಿಸಲಾಗಿರುವ 100 ಕ್ಕೂ ಹೆಚ್ಚು ಶೌಚಗೃಹಗಳಿಗೆ ಕೇಸರಿ ಬಣ್ಣ ಹಚ್ಚಲಾಗಿದೆ.

ಶೌಚಗೃಹಗಳಿಗೆ ಕೇಸರಿ ಬಣ್ಣ ಹಚ್ಚುವುದರಲ್ಲಿ ಯಾವುದೇ ರಾಜಕೀಯ ಒತ್ತಡವಿಲ್ಲ. ಗ್ರಾಮದಲ್ಲಿ ಒಟ್ಟು 500 ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಕೇವಲ 100 ಶೌಚಗೃಹಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ. ಉಳಿದ 350 ಕ್ಕೂ ಹೆಚ್ಚು ಶೌಚಗೃಹಗಳಿಗೆ ಫಲಾನುಭವಿಗಳ ಇಚ್ಛೆಗನುಗುಣವಾಗಿ ಬಣ್ಣ ಬಳಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಮತ್ತು ಗ್ರಾಮದ ಮುಖ್ಯಸ್ಥ ವೇದ್​ ಪಾಲ್​ ಸಿಂಗ್​ ಸ್ಪಷ್ಟ ಪಡಿಸಿದ್ದಾರೆ.

ಆದರೆ, ಶೌಚಗೃಹಗಳು ಕೇಸರಿಮಯವಾಗಿರುವುದಕ್ಕೆ ಸಮಾಜವಾದಿ ಪಕ್ಷದ ನಾಯಕರು ಕಿಡಿ ಕಾರಿದ್ದು, ಕೇಸರಿ ಬಣ್ಣದ ಶೌಚಗೃಹವನ್ನು ಬಳಸುವ ಮೂಲಕ ಧರ್ಮಕ್ಕೆ ಅಪಮಾನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವೇ ಇದಕ್ಕೆ ಮೂಲಕ ಕಾರಣ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top