ರಾಜಕೀಯ ಪಕ್ಷಗಳ ಫ್ಲೆಕ್ಸ್, ಬ್ಯಾನರ್ ತೆರವು

ಹುಣಸೂರು: ಹುಣಸೂರು ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳ ಆದೇಶದಂತೆ ನಗರಸಭೆ ಸಿಬ್ಬಂದಿ ನಗರದಾದ್ಯಂತ ಸೋಮವಾರ ರಾಜಕೀಯ ಪಕ್ಷ ಹಾಗೂ ಮುಖಂಡರ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು.

ನಗರದ ವಿವಿಧ ವೃತ್ತಗಳು, ಬಸ್ ನಿಲ್ದಾಣ, ರೋಟರಿ ವೃತ್ತ, ಕಲ್ಕುಣಿಕೆ ಸರ್ಕಲ್, ಎಚ್.ಡಿ.ಕೋಟೆ ಸರ್ಕಲ್‌ಗಳಲ್ಲಿದ್ದ ಸುಮಾರು ನೂರಕ್ಕೂ ಹೆಚ್ಚು ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್‌ಗಳನ್ನು ನಗರಸಭೆ ಸಿಬ್ಬಂದಿ ತೆರವು ಮಾಡಿದರು.

ಗ್ರಾಮಾಂತರ ಭಾಗದಲ್ಲೂ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಪಿಡಿಒಗಳಿಗೆ ಸೂಚಿಸಲಾಗಿದ್ದು, ಅಲ್ಲಿಯೂ ಕಾರ್ಯಾಚರಣೆ ಆರಂಭವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯಾದ ತಹಸೀಲ್ದಾರ್ ಬಸವರಾಜು ತಿಳಿಸಿದರು. 

Leave a Reply

Your email address will not be published. Required fields are marked *