ತಮಿಳುನಾಡಿನಿಂದ ಬಂದ ಇವಿಎಂ ಯಂತ್ರಗಳು

ಹುಣಸೂರು: ಹುಣಸೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ತಮಿಳುನಾಡಿನ ನಾಗಪಟ್ಟಣಂನಿಂದ ಆಗಮಿಸಿದ ಇವಿಎಂ ಯಂತ್ರಗಳು, ಕಂಟ್ರೋಲ್ ಯೂನಿಟ್ ಹಾಗೂ ವಿವಿ ಪ್ಯಾಟ್‌ಗಳನ್ನು ಭಾನುವಾರ ನಗರಸಭೆ ಕಟ್ಟಡದ ಭದ್ರತಾ ಕೊಠಡಿಯಲ್ಲಿ ತಹಸೀಲ್ದಾರ್ ಐ.ಇ.ಬಸವರಾಜು ಸಮ್ಮುಖದಲ್ಲಿ ಕಂದಾಯ ಸಿಬ್ಬಂದಿ ಸುರಕ್ಷಿತವಾಗಿ ಇರಿಸಿದರು.

ಈ ವೇಳೆ ಮಾತನಾಡಿದ ತಹಸೀಲ್ದಾರ್, ನಗರಸಭೆಯ ನೂತನ ಕಟ್ಟಡದ ಭದ್ರತಾ ಕೊಠಡಿ ಮತಯಂತ್ರಗಳನ್ನು ಇರಿಸಲಾಗಿದ್ದು, ಕೊಠಡಿಯ ನಾಲ್ಕೂ ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಬಾರಿ ಎಂ3 ಮಾದರಿಯ ಇವಿಎಂ ಯಂತ್ರಗಳನ್ನು ಚುನಾವಣಾ ಆಯೋಗ ಒದಗಿಸಿದೆ ಎಂದರು.

ಭಾನುವಾರ ಬೆಳಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಂಗ್ ಭದ್ರತಾ ಕೊಠಡಿ ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆಯ ಸಭಾಂಗಣವನ್ನು ಪರಿಶೀಲನೆ ನಡೆಸಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯಗಳಿಗೆ ಈ ಸ್ಥಳವೇ ಅನುಕೂಲಕರವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದರು.

Leave a Reply

Your email address will not be published. Required fields are marked *