ಹನಗೋಡು ಬಳಿಯ ಚಂದನಗಿರಿ ರಸ್ತೆಯಲ್ಲಿ ಕುರಿಯನ್ನು ಕೊಂದು ಹಾಕಿದ ಹುಲಿ

ಹನಗೋಡು: ನಾಗರಹೊಳೆ ಉದ್ಯಾನದಂಚಿನ ಹನಗೋಡು ಬಳಿಯ ಚಂದನಗಿರಿ ರಸ್ತೆ ಬದಿಯಲ್ಲಿ ಮೇಯಲು ಬಿಟ್ಟಿದ್ದ ಕುರಿಯನ್ನು ಹಾಡಹಗಲೇ ಹುಲಿ ಕೊಂದು ಹಾಕಿದೆ.
ನೇರಳಕುಪ್ಪೆ ಗ್ರಾಪಂನ ಚಂದನಗಿರಿ ರಸ್ತೆಯ ಹಂದಿಹಳ್ಳದ ಬಳಿಯಲ್ಲಿ ಭಾನುವಾರ ನೇರಳಕುಪ್ಪೆ ಗ್ರಾಮದ ಶಿವರಾಜು ಅವರಿಗೆ ಸೇರಿದ ಕುರಿಗಳನ್ನು ಮಧ್ಯಾಹ್ನ ಮೇಯಿಸುತ್ತಿದ್ದ ವೇಳೆ ದಿಢೀರ್ ಪ್ರತ್ಯಕ್ಷವಾದ ಹುಲಿ ಕುರಿಯೊಂದರ ಮೇಲೆರಗಿ ಕೊಂದು ಹಾಕಿದೆ.
ಈ ವೇಳೆ ಕುರಿಗಾಹಿಗಳು ಹಾಗೂ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಕೂಗಾಡತೊಡಗಿದಾಗ ಕುರಿಯನ್ನು ಅಲ್ಲೇ ಬಿಟ್ಟು ಅರಣ್ಯ ಪ್ರದೇಶದತ್ತ ಓಡಿ ಹೋಗಿದೆ. ನಂತರ ಗ್ರಾಮಸ್ಥರಿಂದ ಮಾಹಿತಿ ಪಡೆದ ಕಚುವಿನಹಳ್ಳಿ ಡಿಆರ್‌ಎಫ್‌ಒ ವೀರಭದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *