ಸಂತ್ರಸ್ತರಿಗೆ ಕಿಟ್ ವಿತರಣೆ

ಹುನಗುಂದ: ಜಿಲ್ಲೆಯಲ್ಲಿ ಮೂರು ನದಿಗಳ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನಮ್ಮಿಂದ ಸ್ವಲ್ಪ ಮಟ್ಟಿಗಿನ ಸಹಾಯ ಮಾಡುತ್ತಿದ್ದೇವೆ ಎಂದು ದಿ. ಮಾಜಿ ಶಾಸಕ ಚಂದ್ರಶೇಖರ ಪಾಟೀಲ (ರೇವೂರ) ಅಭಿಮಾನಿ ಬಳಗದ ಅಧ್ಯಕ್ಷ ಅಪ್ಪು ಕಣಕಿ ಹೇಳಿದರು.

ತಾಲೂಕಿನ ಕಟಗೂರ, ತುರಡಗಿ, ಕೂಡಲಸಂಗಮ ಗ್ರಾಮಗಳಿಗೆ ಶಾಸಕ ದತ್ತಾತ್ರೇಯ ಪಾಟೀಲ (ರೇವೂರ) ಅವರ ನೇತೃತ್ವದಲ್ಲಿ ಸಂತ್ರಸ್ತರಿಗೆ ಅಕ್ಕಿ ಹಾಗೂ ಆಹಾರ ನೀರಿನ ಬಾಟಲ್ ಸೇರಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್, ಔಷಧ ಹೊಂದಿದ್ದ ಅಂದಾಜು 500 ಕ್ಕೂ ಹೆಚ್ಚು ಕಿಟ್ ವಿತರಿಸಿ ಮಾತನಾಡಿದರು.

ಸಂಗಮೇಶ ರಾಜೊಳ್ಳಿ, ಶಾಂತು ದುದನಿ, ಅಪ್ಪಾಸಾಹೇಬ ಪಾಟೀಲ, ರಾಮು ರಡ್ಡಿ, ರಾಜು ದೇವದುರ್ಗ, ಚೇತನ ತಡಕಲ್ಲ, ಸೋಮನಗೌಡ ಸಾವಳಗಿ, ಜಗ್ಗು ನೀಲಾ, ನಾಗು ಬಿರಾದಾರ, ವಾದಿರಾಜ ದೇಶಪಾಂಡೆ, ಮಂಜು ಆಲೂರ ಇತರರಿದ್ದರು.

Leave a Reply

Your email address will not be published. Required fields are marked *