24.5 C
Bangalore
Sunday, December 8, 2019

ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

Latest News

ಡಾಬಾದಲ್ಲಿ ಇಟ್ಟಿದ್ದ 40 ಕೆಜಿ ಈರುಳ್ಳಿ ಕದ್ದೊಯ್ದ ಇಬ್ಬರು ಮಹಿಳೆಯರು; ಪೊಲೀಸರಿಗೆ ದೂರು ನೀಡುವುದಿಲ್ಲವೆಂದ ಮಾಲೀಕ

ಮೊಹಾಲಿ: ಈರುಳ್ಳಿ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯ ನಡುವೆ ಈರುಳ್ಳಿ ಕಳ್ಳರೂ ಹೆಚ್ಚಾಗಿದ್ದಾರೆ. ಹಾಗೇ ಪಂಜಾಬ್​ನ ಮೊಹಾಲಿಯಲ್ಲಿ ಇಬ್ಬರು ಮಹಿಳೆಯರು ಸುಮಾರು 40 ಕೆಜಿ ಈರುಳ್ಳಿಯನ್ನು...

ಪಾವಗಡದ ಆಸ್ಪತ್ರೆ ಮುಂಭಾಗ ಮೃತನ ಸಂಬಂಧಿಕರ ಪ್ರತಿಭಟನೆ

ಪಾವಗಡ: ಆಕಸ್ಮಿಕ ಬೆಂಕಿ ಅವಘಡದಲ್ಲಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ನವ ವಿವಾಹಿತ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಎಚ್.ಪಾಳ್ಯದ ನವೀನ್(23) ಮೃತಪಟ್ಟಿದ್ದು, ಸಾವಿಗೆ ವೈದ್ಯರ...

ಸಾಸಲು ಗ್ರಾಮದಲ್ಲಿ ತ್ಯಾಜ್ಯ ನೀರಿನ ಸಂಕಷ್ಟ

ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ತ್ಯಾಜ್ಯ ನೀರು ಹರಿದು ವಿದ್ಯಾರ್ಥಿಗಳು ಕೊಳಚೆ ನೀರಲ್ಲೇ ಸಂಚರಿಸುವಂತಾಗಿದೆ. ಗ್ರಾಮದ ಅಣ್ಣಯ್ಯನ ಪಾಳ್ಯದ ತ್ಯಾಜ್ಯ ನೀರು ಶಾಲಾ...

ರಸ್ತೆಯಲ್ಲಿ ಬೇಡ ರಾಗಿ ಒಕ್ಕಣೆ

ಶಿವರಾಜ ಎಂ.ಬೆಂಗಳೂರು: ಸತತ ಬರದಿಂದ ಕಂಗೆಟ್ಟಿದ್ದ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ರಾಗಿ ಸಲಿನಿಂದ ‘ಸುಗ್ಗಿ’ ಸಂಭ್ರಮ ಮನೆ ಮಾಡಿದೆ. ಈಗಾಗಲೇ ರಾಗಿ ಕಟಾವು...

ಮಹನೀಯರ ಚರಿತ್ರೆ ಅರಿವಿಗೆ ಛದ್ಮವೇಷ ಪೂರಕ

ವಿಜಯಪುರ: ಮಹಾತ್ಮ ಗಾಂಧಿ, ನೆಹರು, ಭಗತ್‌ಸಿಂಗ್, ಶ್ರೀರಾಮ, ಅಂಬೇಡ್ಕರ್ ಸೇರಿ ಇತರ ಮಹನೀಯರ ವೇಷ-ಭೂಷಣವನ್ನು ಮಕ್ಕಳು ಧರಿಸುವುದರಿಂದ ಅವರ ಜೀವನ ಚರಿತ್ರೆ, ವ್ಯಕ್ತಿತ್ವ, ಅರಿಯಲು ಹಾಗೂ...

ಹುನಗುಂದ: ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಲು ಕೃಷಿ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದ್ದು, ರೈತರು ಸದುಪಯೋಗ ಪಡೆಯಬೇಕು ಎಂದು ಜಿಪಂ ಸದಸ್ಯ ಶಶಿಕಾಂತ ಪಾಟೀಲ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಸಮಗ್ರ ಕೃಷಿ ಅಭಿಯಾನ ತಿಳಿವಳಿಕೆ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಕೃಷಿ ಕ್ಷೇತ್ರದ ಪಾಲು ಬಹಳಷ್ಟಿದೆ. ಮೊದಲು ರೈತರು ಸಂಕಷ್ಟದಿಂದ ಹೊರ ಬರಬೇಕು ಎನ್ನುವ ಧ್ಯೇಯ ಸರ್ಕಾರದ್ದಾಗಿದೆ. ತಾಲೂಕಿನಲ್ಲಿರುವ ಎಲ್ಲ ಸವಳು-ಜವಳು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಸರ್ಕಾರ ಆದ್ಯತೆ ವಹಿಸಬೇಕಿದೆ ಎಂದು ಹೇಳಿದರು.

ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ ಮಾತನಾಡಿ, ರೈತರು ಹಳೇ ಕೃಷಿ ಪದ್ಧತಿಗೆ ಜೋತು ಬೀಳದೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಯನ್ನು ರೈತರು ಅನುಸರಿಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಆರ್.ಎಂ. ಕಾಂಟ್ರಾಕ್ಟರ್ ಮಾತನಾಡಿ, ಕೃಷಿ ಅಭಿಯಾನ ವಾಹನ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ರೈತರಿಗೆ ಆಧುನಿಕ ಕೃಷಿ ಪದ್ಧತಿ ಕುರಿತು ಜಾಗೃತಿ ಮೂಡಿಸಲಿದೆ. ವಾಹನದಲ್ಲಿ ವಿವಿಧ ಇಲಾಖೆಗಳ ಕ್ಷೇತ್ರ ಮಟ್ಟದ ಸಿಬ್ಬಂದಿ ಇರಲಿದ್ದು, ತೋಟಗಾರಿಕೆ, ಕೃಷಿ ಹಾಗೂ ಪಶುಸಂಗೋಪನೆ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದರು.

ತಾಪಂ ಸದಸ್ಯರಾದ ಅನೀಲ ನಾಡಗೌಡ, ಸಹನಾ ಗದ್ದಿ, ಎಪಿಎಂಸಿ ನಿರ್ದೇಶಕ ಅಂದಾನೆಪ್ಪ ಹವಾಲ್ದಾರ ಹಾಗೂ ಮಹಾಂತೇಶ ಹಳ್ಳೂರ, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಪಾಪನಗೌಡ ಬಾರಡ್ಡಿ, ಸದಸ್ಯ ಕೃಷ್ಣಾ ಜಾಲಿಹಾಳ, ಶಿವಪ್ರಸಾದ ಗದ್ದಿ, ಮುತ್ತಣ್ಣ ಗಂಜಿಹಾಳ, ಕೃಷಿ ಅಧಿಕಾರಿ ಆರ್.ಆರ್. ಜಾಧವ, ಜೆ.ಎಂ. ಹಿರೇಮಠ, ಬಿ.ವಿ. ಹಂಡಿ ಇತರರು ಇದ್ದರು.





Stay connected

278,749FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...