ಮಹಿಳೆ ಉನ್ನತ ಹುದ್ದೆ ಅಲಂಕರಿಸಲಿ

ಹುನಗುಂದ: ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು. ಗ್ರಾಮೀಣ ಪ್ರದೇಶದಲ್ಲಿಯೇ ಉತ್ತಮ ಶಿಕ್ಷಣ ದೊರೆಯುತ್ತದೆ. ಸದುಪಯೋಗ ಪಡೆಯಬೇಕು ಎಂದು ಮುಖ್ಯಶಿಕ್ಷಕಿ ಶೋಭಾ ಪಾಟೀಲ ಹೇಳಿದರು.

ತಾಲೂಕಿನ ನಾಗೂರ ಗ್ರಾಮದ ಹಾದಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಮಹಿಳೆ ನೂರು ಶಿಕ್ಷಕರಿಗೆ ಸಮಾನಳು. ಸಮಾಜದಲ್ಲಿ ಮಹಿಳೆ ವಿಶೇಷ ಸ್ಥಾನ ಹೊಂದಿದ್ದಾಳೆ ಎಂದರು.

ಕಾನೂನು ಸಲಹೆಗಾರ್ತಿ ಡಿ.ಭಾರತಿ ಮಾತನಾಡಿ, ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಸ್ತ್ರೀ-ಪುರುಷ ಭೇದ ಮಾಡದೆ ಎಲ್ಲರನ್ನು ಸಮಾನ ರೀತಿಯಲ್ಲಿ ಕಂಡು ಮುನ್ನಡೆಯಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಶಿವಗಂಗವ್ವ ಗೋಡಿ, ಉಪಾಧ್ಯಕ್ಷ ಬಸಟ್ಟೆಪ್ಪ ಶಿಂಗಾಡಿ, ಸದಸ್ಯರಾದ ಮಲ್ಲಮ್ಮ ನರಗುಂದ, ರತ್ನವ್ವ ಗುಣಕಿ, ಪ್ರಭಾವತಿ ಸಜ್ಜನ, ರುದ್ರಯ್ಯ ಸಾಲಿ, ಕರಸಂಗನಗೌಡ ನರಸಾಪುರ, ಮೇಲ್ವಿಚಾರಕಿ ರಾಜೇಶ್ವರಿ ಗೌಡರ, ಡಾ.ರವಿ ಗೋಟಿಹಾಳ, ಅಂದಾನೆಪ್ಪ ಹೊಂಬಳದ, ಆಶಾದೀಪ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಗ್ರಾಮದ ಮಹಿಳೆಯರು, ವಿವಿಧ ಸಂಘಗಳ ಪದಾಧಿಕಾರಿಗಳು, ಸೀಶಕ್ತಿ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು. ಸಲಿಂ ಮುದಗಲ್ಲ ಸ್ವಾಗತಿಸಿದರು. ಹಸಿನಾಬಾನು ಹವಾಲ್ದಾರ ನಿರೂಪಿಸಿದರು. ಉಮೇಶ ಶಿರೂರ ವಂದಿಸಿದರು.