ಗೋಗೇರಿ ಸಾಹಿತ್ಯದಲ್ಲಿ ಹಾಸ್ಯವೇ ಪ್ರಧಾನ ಅಂಶ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಂ.ಡಿ. ಗೋಗೇರಿ ಸಾಹಿತ್ಯದಲ್ಲಿ ಹಾಸ್ಯವೇ ಪ್ರಧಾನ ಅಂಶ. ತಮ್ಮ ನವಿರಾದ ಹಾಸ್ಯದ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಅವರ ಸಾಹಿತ್ಯದಲ್ಲಿದೆ ಎಂದು ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ.ಡಿ. ಗೋಗೇರಿ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಎಂ.ಡಿ. ಗೋಗೇರಿ ಬದುಕು, ಬರಹ ಅವಲೋಕನ ಹಾಗೂ ಕವಿಗೋಷ್ಠಿಯಲ್ಲಿ ಗೋಗೇರಿ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದರು.
ಗೋಗೇರಿ ಅವರು ಬರೆದ ಚುನಾವಣೆಗೆ ನಿಂತ ನಮ್ಮ ಕಡೆಮನಿ ಹನಮಂತ ಕವನವು ನಾಡಿನಾದ್ಯಂತ ಸಾಹಿತ್ಯಾಸಕ್ತರ ಮನೆ ಮನದಲ್ಲಿ ಇನ್ನೂ ಜೀವಂತವಾಗಿದೆ. ಮಾನವೀಯ ಮೌಲ್ಯಗಳಾದ ಸರ್ವ ಧರ್ಮ ಸಮಾನತೆ, ಸೌಹಾರ್ದತೆ, ಸರ್ವರ ಹಿತರಕ್ಷಣೆ, ಪರೋಪಕಾರ, ನಿರಾಡಂಬರತೆ, ಜೀವನ ಮೌಲ್ಯಗಳನ್ನು ಜನಮಾನಸದಲ್ಲಿ ತಮ್ಮ ಸಾಹಿತ್ಯದ ಮೂಲಕ ಬಿತ್ತಿದರು. ಇವು ಬರಿ ಅವರ ಉಪದೇಶಗಳಾಗಿರಲಿಲ್ಲ ಹಾಗೆ ನಡೆದು ತೋರಿಸಿದರು ಎಂದರು.
ಎಂ.ಡಿ.ಗೋಗೇರಿ ಅವರ ಸಾಹಿತ್ಯದಲ್ಲಿ ಹಾಸ್ಯ-ವಿಡಂಬಣೆ ಕುರಿತು ಸಾಹಿತಿ ಎ.ಎ. ದರ್ಗಾ ಮಾತನಾಡಿ, ಗೋಗೇರಿ ಅವರ ಸಮಗ್ರ ಸಾಹಿತ್ಯದಲ್ಲಿ ಪ್ರಾಸಬದ್ಧ ಪದ ಪುಂಜಗಳೇ ಪ್ರಧಾನ ವಿಷಯ. ಅವರ ವಿರುದ್ಧಾರ್ಥಕ ಪದಗಳಲ್ಲೂ ಮನೋ ಹಾಸ್ಯವಿತ್ತು. ಸಮಾಜದ ಜ್ವಲಂತ ವಿಷಯಗಳನ್ನೇ ಹಾಸ್ಯದ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದರು ಎಂದರು.
ನಿಂಗಣ್ಣ ಕುಂಟಿ ಅಧ್ಯಕ್ಷತೆ ವಹಿಸಿದ್ದರು. ಶಿವು ಬನ್ನೂರ, ಅಕ್ಬರಲಿ ಸೋಲಾಪುರ, ಶಾಹೀನಬಾನು ಬಳ್ಳಾರಿ, ಶ್ರೀನಿವಾಸ ಪಾಟೀಲ, ಜಯಶ್ರೀ ಪಾಟೀಲ, ಸುಧಾ ಕಬ್ಬೂರ, ಅಶ್ಪಾಕ ಪೀರಜಾದೆ, ಮಧುಮತಿ ಸಣಕಲ್​, ರಾಹುಲ್​ ಉಪ್ಪಾರ ಕವನ ವಾಚಿಸಿದರು.
ಡಾ. ಶ್ರೀಶೈಲ ಹುದ್ದಾರ, ಡಾ. ಲಿಂಗರಾಜ ಅಂಗಡಿ, ಆನಂದ ಪಾಟೀಲ, ಜಿ.ಬಿ. ಸಜ್ಜನ, ಎಂ.ಜಿ. ಸುಬೇದಾರ, ಶಾಂತವೀರ ಬೆಟಗೇರಿ, ಹ.ಬಿ. ಸಂತೋಜಿ, ಆತ್ಮಾನಂದ ಗದ್ದಿಕೇರಿ, ಪರವೀನ ದರ್ಗಾ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು, ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಚಿಲ್ಲಿ ಚೀಸ್​​ ನೂಡಲ್ಸ್​​; ಇಲ್ಲಿದೆ ಸಿಂಪಲ್​ ವಿಧಾನ | Recipe

ಫ್ಯಾಮಿಲಿ ಜತೆ ಹೋಟೆಲ್​ಗೆ ಹೋದರೆ ಫ್ರೈಡ್​ರೈಸ್​​, ನೂಡಲ್ಸ್​​, ಗೋಬಿ ಹೀಗೆ ಚೈನೀಸ್​​​ ಫುಡ್ ಮೊದಲ ಆಯ್ಕೆಯಾಗಿರುತ್ತದೆ.…

ಈ ಕಾಯಿಲೆಯಿಂದ ಬಳಲುತ್ತಿರುವವರು ತಪ್ಪಾಗಿಯೂ ಬೀಟ್ರೂಟ್​ ಸೇವಿಸಬೇಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ತರಕಾರಿಯಾಗಿದೆ. ಇದು ಜೀವಸತ್ವಗಳು, ಖನಿಜಾಂಶಗಳು ಮತ್ತು ಉತ್ಕರ್ಷಣ…

ಗರ್ಭನಿರೋಧಕ ಮಾತ್ರೆಗಳಿಂದ ಅಪಾಯ ತಪ್ಪಿದ್ದಲ್ಲ; ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಅಸಲಿ ಸಂಗತಿ |Health Tips

ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಅತ್ಯಂತ ಜನಪ್ರಿಯ ವಿಧಾನವಾಗಿದೆ. ಪ್ರಪಂಚದಾದ್ಯಂತ ಅಂದಾಜು 250…