ಸಮಾಜದಲ್ಲಿ ಮಾನವೀಯತೆ ಛಿದ್ರ

ಬೆಳಗಾವಿ: ಸಮಾಜದಲ್ಲಿ ಮಾನವೀಯತೆ ಎಂಬುದು ಛಿದ್ರವಾಗುತ್ತಿದೆ. ರಾಜಕೀಯ ಹಾಗೂ ಧರ್ಮಗಳು ತಮ್ಮ ಮೂಲಕ ಧ್ಯೇಯವನ್ನು ಮರೆತಿವೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಹೇಳಿದ್ದಾರೆ.

ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಸಭಾಂಗಣದಲ್ಲಿ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿದ್ದಯ್ಯ ಪುರಾಣಿಕರ ವಚನಗಳಲ್ಲಿ ವಿಶ್ವ ಸಂದೇಶ ವಿಷಯ ಕುರಿತು ಮಾತನಾಡಿದರು. ಮಾನವತೆ ಮರೆತ ಜನತೆಗೆ ತಮ್ಮ ಸಾಹಿತ್ಯದ ಮೂಲಕ ಬೆಳಕಾದವರು ಸಿದ್ದಯ್ಯ ಪುರಾಣಿಕರು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಸ್.ಪಾಟೀಲ ಮಾತನಾಡಿ, ಉಗ್ರವಾದ ತನ್ನ ಕರಾಳ ಬಾಹುವನ್ನು ಚಾಚುತ್ತಿರುವುದು ದುರಂತ. ಅದನ್ನು ಮಟ್ಟಹಾಕಬೇಕು. ಯುವ ಜನಾಂಗವನ್ನು ಪ್ರಜ್ಞಾವಂತರನ್ನಾಗಿ ರೂಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಬೆಳ್ಳುಚುಕ್ಕಿ ಸಾಂಸ್ಕೃತಿಕ ಸಂಘದ ರಾಜೇಶ್ವರಿ ಹಿರೇಮಠ, ಶಂಕರ ಚೊಣ್ಣದ, ಬಿ.ಎಸ್.ರಾಯಾಜಿ, ನ್ಯಾಯವಾದಿ ವಿ.ಕೆ.ಪಾಟೀಲ, ಡಾ.ಎಫ್.ವಿ.ಮಾನ್ವಿ, ಕಲ್ಯಾಣರಾವ್ ಮುಚಳಂಬಿ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬಾವಿಕಟ್ಟಿ, ಸೋಮಲಿಂಗ ಮಾವಿನಕಟ್ಟಿ, ಡಾ.ಗುರುದೇವಿ ಹುಲೆಪ್ಪನವರಮಠ, ಬಿ.ವೈ.ತರಗಾರ, ಡಾ.ಮಹೇಶ ಗುರನಗೌಡರ ಇತರರು ಇದ್ದರು.

Leave a Reply

Your email address will not be published. Required fields are marked *