ಹಂಸಭಾವಿ: ವೈಜ್ಞಾನಿಕ ಆವಿಷ್ಕಾರಗಳ ಮೂಲಕ ಮನುಕುಲ ಸಮೃದ್ಧಗೊಂಡಿದೆ ಎಂದು ಧಾರವಾಡದ ಕವಿವಿ ಸಾವಯವ ರಸಾಯನಶಾಸ್ತ್ರ ವಿಭಾಗದ ಡಾ. ಲೋಕೇಶ ಎ. ಶಾಸ್ತ್ರಿ ಅಭಿಪ್ರಾಯಪಟ್ಟರು.

ಸ್ಥಳೀಯ ಮಹಾಂತಸ್ವಾಮಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಕೋಶದಡಿ ‘ಯುವ ಮನಸುಗಳಿಗೋಸ್ಕರ, ಮಾನವಕುಲಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ’ ವಿಷಯದ ಕುರಿತು ಬುಧವಾರ ಏರ್ಪಡಿಸಿದ್ದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ಔಷಧಗಳು, ಪೆನ್ಸಿಲಿನ್ ಎಂಬ ಆಂಟಿ ಬಯೋಟಿಕ್ ಆವಿಷ್ಕಾರ ಹಾಗೂ ಬೆಳಕನ್ನು ಸೂಸುವ ಸಾವಯವ ವಸ್ತುಗಳ ವೈಜ್ಞಾನಿಕ ಆವಿಷ್ಕಾರಗಳ ಇತಿಹಾಸ ಮತ್ತು ಅವುಗಳು ಮಾನವ ಕುಲಕ್ಕೆ ಯಾವ ರೀತಿಯಲ್ಲಿ ಉಪಯುಕ್ತವಾಗಿವೆ ಎಂಬುದನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಧೀರಜ್ ಕೆ.ವೀರನಗೌಡರ ಅವರು, ವಿಜ್ಞಾನ ಪುಸ್ತಕದಲ್ಲಿಲ್ಲ. ಅದು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿದೆ. ಅನೇಕ ಪ್ರಾಣಿ-ಪಕ್ಷಿಗಳ, ಸರಿಸೃಪಗಳ ಪ್ರತಿಯೊಂದು ಕ್ರಿಯೆಗೂ, ಅವುಗಳ ಗುಣ ಸ್ವಭಾವಗಳಿಗೆ ಒಂದು ಅರ್ಥ ಇರುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸಿದರು.</p><p>ವೈಜ್ಞಾನಿಕ ಸಂಶೋಧನೆ ಕುರಿತು ವಿದ್ಯಾರ್ಥಿಗಳ ಜತೆ ರ್ಚಚಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಅಲ್ಲದೆ, ವೈಜ್ಞಾನಿಕ ಸಂಶೋಧನೆಗೆ ಬೇಕಾದ ವಿವಿಧ ಕೌಶಲ ಹೇಗೆ ರೂಢಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ. ವಿ. ಕೆರೂಡಿ ಮಾತನಾಡಿ, ವಿದ್ಯಾರ್ಥಿಗಳು ಅವಕಾಶಗಳ ಸದ್ಬಳಕೆ ಮಾಡಿಕೊಂಡು ಮನುಕುಲಕ್ಕೆ ಉಪಯುಕ್ತವಾಗುವ ವೈಜ್ಞಾನಿಕ ಸಂಶೋಧನೆ ಮಾಡಬೇಕು ಎಂದರು.
ಪ್ರಾಚಾರ್ಯ ಎಸ್.ಎ. ತಿಪ್ಪೇಶ ಸ್ವಾಗತಿಸಿದರು. ಡಾ. ರವಿ ಎಸ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಲೋಕೇಶ ಎಸ್.ಬಿ. ಮತ್ತು ಡಾ.ದೀಪಕ ಶಿಂಧೆ ಅತಿಥಿಗಳನ್ನು ಪರಿಚಯಿಸಿದರು. ಅಶ್ವಿನಿ ತೆಗ್ಗಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಭಾಗ್ಯಾ ಕೆರೂಡಿ ವಂದಿಸಿದರು. ಪಲ್ಲವಿ ಬೋಳಕಟ್ಟಿ ಮತ್ತು ಡಾ.ಬಸವ್ವ ಹಮ್ಮಿಣಿ ನಿರೂಪಿಸಿದರು. ಆಡಳಿತಾಧಿಕಾರಿ ಸತೀಶ ಕಬ್ಬಿಣದ, ಉಪನ್ಯಾಸಕರಾದ ಡಾ. ಕೋಟೇಶ ಬಿ., ಪದ್ಮಾ ಹುಗ್ಗಿ ಮತ್ತು ಸಿಬ್ಬಂದಿ ಮತ್ತು ವಿವಿಧ ಕಾಲೇಜ್ಗಳ 100ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು.