ಮಹಿಳೆಯರಿಗೆ ಕಾನೂನು ಬಲ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್
ಕಾನೂನಿನಲ್ಲಿ ಮಹಿಳೆಯರ ಸಂರಕ್ಷಣೆಗಾಗಿರುವ ಕಾಯ್ದೆಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕೆ ವಿನಃ, ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಕಮತೆ ಹೇಳಿದರು.

ತಾಪಂ ಸಭಾಂಗಣದಲ್ಲಿ ತಾಲೂಕಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಆಶ್ರಯದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳಾ ಸಂರಕ್ಷಣಾ ಕಾಯಿದೆ. ಮಹಿಳಾ ದೌರ್ಜನ್ಯ ಕಾಯಿದೆ, ವರದಕ್ಷಿಣೆ ವಿರೋಧಿ ಕಾಯಿದೆ ಸೇರಿ ಹಲವು ಕಾಯಿದೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. 2005ರಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಆಸ್ತಿ ನೀಡುವ ಕಾಯ್ದೆ ಜಾರಿಯಾಗಿದೆ ಎಂದು ಹೇಳಿದರು.

ವಕೀಲ ಸಂಘದ ಅಧ್ಯಕ್ಷ ಶಂಭುಲಿಂಗ ಧುಮ್ಮನಸೂರೆ, ಹಳ್ಳಿಖೇಡ (ಬಿ) ಪುರಸಭೆ ಮುಖ್ಯಾಧಿಕಾರಿ ಮೀನಾಕುಮಾರಿ ಬೊರಾಳಕರ ಮತನಾಡಿದರು. ಶರಣಮ್ಮಾ ನಾರಾಯಣಪೇಟಕರ್ ವಿಶೇಷ ಉಪನ್ಯಾಸ ನೀಡಿದರು. ಮಹಿಳೆಯರಿಗಾಗಿ ರಂಗೋಲಿ ಹಾಗೂ ಕುರ್ಚಿ ಸ್ಪರ್ಧೆ, ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಕರ್ಾರಿ ಹಾಗೂ ಸಂಘ ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.

ಪ್ರಧಾನ ಸಿವಿಲ್ ನ್ಯಾಯಾಧೀಶ ಆಶಪ್ಪ ಸಣ್ಣಮನಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಗಗನ್ ಎಂ.ಆರ್, ಶಿಶು ಅಭಿವೃದ್ಧಿ ಯೋಜನಾಧೀಕಾರಿ ಶೋಭಾ ಕಟ್ಟಿ, ತಾಪಂ ಇಒ ವಿಜಯಕುಮಾರ ಮಡ್ಡೆ, ಸಕರ್ಾರಿ ಅಭಿಯೋಜಕ ಮಹಾಂತೇಶ ಕುದರಿ, ಪ್ರಮುಖರಾದ ಈಶ್ವರ ಸೋನಕೇರಾ, ವಿಜಯಕುಮಾರ ಜೋತ್ತಗೊಂಡ, ಶರಣಮ್ಮ, ಭೀಮರಾವ ಓತಗಿ, ಕೆ.ಶ್ರೀಮಂತ, ವಿರೇಖಾ ಪಾಟೀಲ್, ಸಂತೋಷಿ, ಜೈಶ್ರೀ, ಗೀತಾ, ಪುಷ್ಪಾ, ವಿಜಯಕುಮಾರ ನಾತೆ, ಕಲ್ಯಾಣರಾವ ಇತರರಿದ್ದರು