ಮಾನವನ ಸ್ವಾರ್ಥದಿಂದ ಅರಣ್ಯಕ್ಕೆ ಅಪಾಯ

blank

ಬ್ಯಾಡಗಿ: ಗಿಡ-ಮರಗಳಿದ್ದಲ್ಲಿ ಎಲ್ಲ ಜೀವಿಗಳು ಉಸಿರಾಡಲು ಸಾಧ್ಯ. ಪ್ರತಿಯೊಬ್ಬರೂ ಪರಿಸರ ಕಾಪಾಡುವ ಮೂಲಕ ಉತ್ತಮ ವಾತಾವರಣ ನಿರ್ವಿುಸಬೇಕಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ವಿಶ್ವ ಅರಣ್ಯ ದಿನ ಹಾಗೂ ವಿಶ್ವ ಜಲ ದಿನ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ದೇಶ ಸೇರಿದಂತೆ ವಿಶ್ವಮಟ್ಟದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಪ್ರತಿನಿತ್ಯವೂ ಮೂಲಸೌಕರ್ಯ ಸಮಸ್ಯೆ ಸೇರಿದಂತೆ ಪಂಚಭೂತಗಳ ಮೇಲೆ ಮಾನವನ ದಾಳಿ ನಡೆದಿದೆ. ಮಾನವನ ಸ್ವಾರ್ಥ ತೀವ್ರಗೊಂಡು ಕಾಡು ಬರಿದಾಗುತ್ತ ವನ್ಯಜೀವಿಗಳು ನಾಡಿಗೆ ನುಗ್ಗುವ ಮೂಲಕ ಅಪಾಯ ತಂದೊಡ್ಡುತ್ತಿವೆ. ಈ ಹಿನ್ನೆಲೆಯಲ್ಲಿ ನಾವು ಕಾಡಿನ ರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕಿದೆ ಎಂದರು.

ಪಟ್ಟಣದ ಎಲ್ಲ ನಾಗರಿಕರು ತಮ್ಮ ಮನೆಯ ಹಾಗೂ ವಾಸಿಸುವ ಜಾಗದ ಸುತ್ತಮುತ್ತ ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಬೆಳವಣಿಗೆಯಲ್ಲಿ ಸಹಕರಿಸಬೇಕು ಎಂದರು.

ಪಟ್ಟಣಕ್ಕೆ ತುಂಗಭದ್ರಾ ನದಿಮೂಲದಿಂದ ನೀರಿನ ಪೂರೈಕೆ ನಡೆದಿದ್ದು, ಜನಸಂಖ್ಯೆಗೆ ತಕ್ಕಂತೆ ನೀರಿನ ಅಗತ್ಯವೂ ಹೆಚ್ಚಾಗುತ್ತಿದೆ. ನೀರು ಪೂರೈಕೆ ಪ್ರಮಾಣ ಹೆಚ್ಚಿಸಿದರೂ ಪ್ರತಿನಿತ್ಯ ತಾಪತ್ರಯಗಳು ಉದ್ಭವವಾಗುತ್ತಿವೆ. ಬೇಸಿಗೆಯಲ್ಲಿ ನೀರಿನ ಬಳಕೆ ತೀವ್ರವಾಗಲಿದ್ದು, ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಹೊಸದಾಗಿ ಮನೆ ಹಾಗೂ ಕಟ್ಟಡ ನಿರ್ವಿುಸುವ ಮಾಲೀಕರು ತಮ್ಮ ಮನೆಯ ಪಕ್ಕದಲ್ಲಿ ಮಳೆ ನೀರು ಕೊಯ್ಲು ನಿರ್ವಿುಸಿಕೊಂಡು ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಬಳಸಬೇಕು. ಕೊಳವೆ ಬಾವಿ ಹೊಂದಿರುವ ಮಾಲೀಕರು ಪಕ್ಕದಲ್ಲಿ ನೀರನ್ನು ಇಂಗಿ ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಆಶ್ರಯ ಸಮಿತಿ ಸದಸ್ಯ ಗಿರೀಶಸ್ವಾಮಿ ಇಂಡಿಮಠ, ಪುರಸಭೆ ಪರಿಸರ ಇಂಜಿನಿಯರ್ ಚನ್ನಪ್ಪ ಅಂಗಡಿ, ಮಾಲತೇಶ ಹಳ್ಳಿ ಇತರರಿದ್ದರು.

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…