More

    ಸಾರ್ವಜನಿಕರ ಸೇವೆ ಮಾಡಲು ಸಹಕಾರ ನೀಡಿ

    ಲಕ್ಕೂರು: ಮೇ 10ರಂದು ಚುನಾವಣೆ ನಡೆಯಲಿದ್ದು, ಪ್ರತಿಯೊಬ್ಬರೂ ಆಟೋ ಗುರುತಿಗೆ ಮತ ನೀಡುವ ಮೂಲಕ ಸಾರ್ವಜನಿಕರ ಸೇವೆ ಮಾಡಲು ಸಹಕಾರ ನೀಡಿ ಎಂದು ಪೇತರ ಅಭ್ಯರ್ಥಿ ಹೂಡಿ ವಿಜಯ್​ಕುಮಾರ್​ ಮನವಿ ಮಾಡಿದರು.
    ಲಕ್ಕೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರ ಮತಯಾಚನೆ ಮಾಡಿ ಮಾತನಾಡಿದರು.
    ಮಾಲೂರು ತಾಲೂಕಿನಲ್ಲಿ 4 ವರ್ಷಗಳಿಂದ ಸರ್ಕಾರದ ಯೋಜನೆಗಳನ್ನು ನಿರಂತರವಾಗಿ ತಲುಪಿಸಲಾಗಿದೆ. ಕೋವಿಡ್​ ಸಂದರ್ಭದಲ್ಲಿ ತಾಲೂಕಿನಲ್ಲಿ ಪ್ರತಿ ಮನೆ ಸೇರಿ ಒಟ್ಟು 2.5 ಲಕ್ಷ ಮಾಸ್ಕ್​ ವಿತರಿಸಲಾಗಿದೆ. ಜತೆಗೆ ದಿನಸಿ, ಔಷಧ ಕಿಟ್​, 220 ಗ್ರಾಮಗಳಿಗೂ ಸ್ಯಾನಿಟೈಸರ್​ ಮಾಡಲಾಗಿದೆ ಎಂದರು.
    ತಾಲೂಕಿನ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಹಾಗೂ ಕ್ಯಾನ್​ಗಳನ್ನು ವಿತರಿಸಿ ನಿಮ್ಮ ಮನೆ ಮಗನಾಗಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
    ಸುಮಾರು ನಾಲ್ಕು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕರ ಸಂಪರ್ಕದಲ್ಲಿದ್ದು, ಜನರ ಕಷ್ಟದಲ್ಲಿ ಜತೆಯಾಗಿ, ಪಕ್ಷ ಸಂಟನೆ ಮಾಡಿ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸಿದ್ದೆ. ಕಳೆದ ಸಲ ತಾವೆಲ್ಲ ಯಾರಿಗೆ ರಜೆ ಕೊಟ್ಟು ಮನೆಗೆ ಕಳಿಸಿದ್ದಿರೋ ಅವರಿಗೆ ಮಣೆ ಹಾಕುವ ಮೂಲಕ ಪಕ್ಷ ಟಿಕೆಟ್​ ನೀಡಿ ನನಗೆ ಮೋಸ ಮಾಡಿದೆ. ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಟ್ಟಿಲ್ಲ. ಆದರೆ ಮಾಲೂರು ತಾಲೂಕಿನ ಜನತೆ ನನಗೆ ಅವಕಾಶ ಮಾಡಿಕೊಟ್ಟು ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಿಮಗೆ ಅನ್ಯಾಯವಾಗಿದೆ. ಯಾವುದೇ ಕಾರಣಕ್ಕೂ ನಾವು ನಿಮ್ಮನ್ನು ಬಿಟ್ಟುಕೊಡುವುದಿಲ್ಲ ಎಂದು ಭರವಸೆ ನೀಡಿದ್ದಕ್ಕಾಗಿ ಸ್ವಾಭಿಮಾನಿಯಾಗಿ ನಿಮ್ಮ ಮುಂದೆ ಬಂದು ಮತಯಾಚನೆ ಮಾಡುತ್ತಿದ್ದೇನೆ ಎಂದರು.
    ಹಿಂದೆ ಜೆಡಿಎಸ್​ನಲ್ಲಿದ್ದ ಶಾಸಕರಿಗೆ ಮತ್ತು ಈಗಿನ ಶಾಸಕರಿಗೂ ಅವಕಾಶ ನೀಡಿದ್ದೀರಿ, ಅವರು ತಾಲೂಕಿನ ಅಭಿವೃದ್ಧಿ ಕೆಲಸ ಮಾಡಿಲ್ಲ. ತಾಲೂಕಿನಲ್ಲಿ ಹಲವು ವರ್ಷಗಳಿಂದ ಪಿ.ನಂಬರ್​ ಜಮೀನುಗಳನ್ನು ದುರಸ್ತಿ ಮಾಡಿಸಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಹಲವು ಸರ್ಕಾರಿ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.
    ಲಕ್ಕೂರು ಗ್ರಾಪಂ ಅಧ್ಯಕ್ಷ ಕೆ.ಸುರೇಶ್​, ಮಾಜಿ ಅಧ್ಯಕ್ಷ ವೆಂಕಟೇಶಪ್ಪ, ಗ್ರಾಪಂ ಸದಸ್ಯ ಶ್ರೀನಿವಾಸ್​, ಮುಖಂಡರಾದ ಆರ್​.ಪ್ರಭಾಕರ್​, ಸಿ.ಜೆ.ಹರೀಶ್​ಗೌಡ, ಮಂಜುಳಮ್ಮ, ಕೋಡೂರು ಚಿಕ್ಕಮುನಿಯಪ್ಪ, ವೆಂಕಟೇಶ್​, ನಯನಪ್ಪ ಇದ್ದರು.

    ಮಾಲೂರು ಜನತೆಯೇ ಹೈಕಮಾಂಡ್​

    ರಾಜ್ಯದಲ್ಲಿ ಕಾಂಗ್ರೆಸ್​, ಬಿಜೆಪಿ ಹಾಗೂ ಜೆಡಿಎಸ್​ ಸೇರಿ ಇದುವರೆಗೂ ಯಾವುದೇ ಸ್ಥಿರ ಸರ್ಕಾರ ಬಂದಿಲ್ಲ. ಇನ್ನು ಮುಂದೆಯೂ ಬರುವುದಿಲ್ಲ. ಪೇತರ ಅಭ್ಯರ್ಥಿಯಾದ ನನಗೆ ಅತ್ಯಧಿಕ ಮತಗಳನ್ನು ನೀಡುವ ಮೂಲಕ ನನಗೆ ಅವಕಾಶ ಮಾಡಿಕೊಟ್ಟರೆ ನಿಮ್ಮ ಮನೆ ಮಗನಾಗಿ ಎಲ್ಲ ಸೌಲಭ್ಯಗಳನ್ನು ತಲುಪಿಸುತ್ತೇನೆ. ಸುಮಾರು 15 ವರ್ಷಗಳಿಂದ ಮಾಲೂರು ದೂಳುರು ಆಗಿದೆ. ಸೌಲಭ್ಯಗಳಿಂದ ವಂಚಿತವಾಗಿರುವ ತಾಲೂಕನ್ನು ಅಭಿವೃದ್ಧಿ ಪಡಿಸುವುದೇ ನನ್ನ ಕರ್ತವ್ಯ. ಚುನಾವಣೆಯಲ್ಲಿ ಗೆದ್ದ ನಂತರ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಪೇತರವಾಗಿಯೇ ಉಳಿಯುತ್ತೇನೆ. ನನಗೆ ಯಾವುದೇ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್​ ಇಲ್ಲ. ಮುಂದೆ ನನ್ನ ಹೈಕಮಾಂಡ್​ ಎಂದರೆ ತಾಲೂಕಿನ ಜನತೆ ಎಂದು ಹೂಡಿ ವಿಜಯಕುಮಾರ್​ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts