More

    ಸ್ವಾಭಿಮಾನದ ಹೋರಾಟಕ್ಕೆ ವಿರೋಧಿಗಳು ಕಂಗಾಲು

    ಟೇಕಲ್​: ಪಕ್ಷೇತರ ಅಭ್ಯರ್ಥಿ ನನ್ನ ಪತಿ ಹೂಡಿ ವಿಜಯಕುಮಾರ್​ಗೆ ಸಿಗುತ್ತಿರುವ ಬೆಂಬಲ ನೋಡಿ ಕಂಗಾಲಾಗಿರುವ ಕಾಂಗ್ರೆಸ್, ಜೆಡಿಎಸ್​ ಮತ್ತು ಬಿಜೆಪಿ ಅಭ್ಯರ್ಥಿಗಳು ಅಪಪ್ರಚಾರ ಮಾಡುತ್ತಿದ್ದು, ಜನ ಇದ್ಯಾವುದನ್ನೂ ನಂಬದೆ, ಆಟೋ ಗುರುತಿಗೆ ಮತಕೊಡುವ ಮೂಲಕ ಸ್ವಾಭಿಮಾನದ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಶ್ವೇತಾ ವಿಜಯಕುಮಾರ್​ ಮನವಿ ಮಾಡಿಕೊಂಡರು.
    ಹೋಬಳಿಯ ವಿವಿಧ ಗ್ರಾಮಗಳಲ್ಲಿ ಪತಿ ಪರ ಮತಯಾಚನೆ, ಪ್ರಚಾರ ಸಭೆಗಳನ್ನು ನಡೆಸಿ ಮಾತನಾಡಿದರು. ನನ್ನ ಪತಿ ಕಳೆದ ನಾಲ್ಕೆದು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಎಲ್ಲೆಡೆ ಜನ ವ್ಯಕ್ತಪಡಿಸುತ್ತಿರುವ ಪ್ರೀತಿ, ವಿಶ್ವಾಸ, ಗೌರವ ನಮಗೆ ಶ್ರೀರಕ್ಷೆಯಾಗುತ್ತಿದೆ. ಬಿಜೆಪಿಯವರು ಮೋಸ ಮಾಡಿದರೂ ಜನರು ನಮ್ಮ ಕೈಬಿಡಲಿಲ್ಲ. ಅವರ ನಂಬಿಕೆಗೆ ದ್ರೋಹ ಮಾಡದಂತೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದರು.
    ಪ್ರತಿಪಕ್ಷದವರು ನನ್ನ ಪತಿ ಗೆದ್ದಮೇಲೆ ಬಿಜೆಪಿ ಸೇರುತ್ತಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಾವ ಸಣ್ಣ ಕೆಲಸವನ್ನೂ ಮಾಡುವುದಿಲ್ಲ ಎಂದರು. ಎಲ್ಲ ಬೂತ್​ಗಳಲ್ಲಿ ಯಾವುದೇ ದೌರ್ಜನ್ಯ, ದಬ್ಬಾಳಿಕೆಗೆ ಅಂಜದೆ ಮತದಾನ ಮಾಡಿಸಬೇಕು. ತಾಲೂಕಿನಲ್ಲಿ ದಬ್ಬಾಳಿಕೆ ದೂರವಾಗಿ ಬಡವರು, ಮಹಿಳೆಯರು, ಎಲ್ಲ ಸಮುದಾಯದವರು ಸೌಹಾರ್ದ ಬದುಕು ಸಾಗಿಸಬೇಕು ಎಂದರು.
    ಹೋಬಳಿಯ ನಕ್ಕನಹಳ್ಳಿ, ಕೆ.ಜಿ.ಹಳ್ಳಿ, ಬನಹಳ್ಳಿ, ಟೇಕಲ್​ ಗ್ರಾಮದಲ್ಲಿ ಮನೆ ಮನೆ ಮತಯಾಚನೆ ಮಾಡಿದರು.
    ಪ್ರತಿ ಗ್ರಾಮದಲ್ಲಿ ಶ್ವೇತಾವಿಜಯಕುಮಾರ್​ಗೆ ಮಹಿಳೆಯರು ಹೂವಿನ ಹಾರ ಹಾಕಿ, ಆರತಿ ಬೆಳಗಿ ಸ್ವಾಗತ ಕೋರಿದರು. ಟೇಕಲ್​ ಬಾಬು, ಕೃಷ್ಣಕಾಂತ್​, ಹುಣಸಿಕೋಟೆ ಬಾಬು, ಬಾಲಾಜಿ, ಕೆ.ಜಿ.ಹಳ್ಳಿ ಶಶಿಧರ, ಅವಿನಾಶ್​, ಅರ್ಜುನ್​, ಯಲುವಗುಳಿ ಅಜಯ್​, ಕೆಂಪಸಂದ್ರ ಮುನಿರಾಜು, ಬಲ್ಲೇರಿ ಈರಣ್ಣ, ಇನ್ನೂ ಅನೇಕ ಮಂದಿ ಅವರ ಜತೆಗಿದ್ದರು.

    ರಾಜ್ಯದಲ್ಲಿ ಈ ಬಾರಿ ಸಮ್ಮಿಶ್ರ ಸರ್ಕಾರ

    ಲಕ್ಕೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬರಲಿದೆ. ಹೀಗಾಗಿ ಪಕ್ಷೇತರ ಶಾಸಕನಾಗಿ ಆಯ್ಕೆಯಾದರೆ ತಾಲೂಕಿನ ಅಭಿವೃದ್ಧಿಗೆ ಸಹಕಾರ ನೀಡುವ ಪಕ್ಷಕ್ಕೆ ಬೆಂಬಲ ನೀಡುತ್ತೇನೆ. ಹೀಗಾಗಿ ವಿರೋಧ ಪಕ್ಷದವರ ಆರೋಪಗಳಿಗೆ ಕಿವಿಗೊಡಬೇಡಿ ಎಂದು ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್​ಕುಮಾರ್​ ಹೇಳಿದರು.
    ತಾಲೂಕಿನ ನೊಸಗೆರೆ ಹಾಗೂ ಎಚ್​.ಹೊಸಕೋಟೆ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಂಬಲಿಗ ಕಾರ್ಯಕರ್ತರೊಂದಿಗೆ ಚುನಾವಣೆ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು. ನಾಲ್ಕು ವರ್ಷದಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕರೊನಾ ಸಂದರ್ಭದಲ್ಲಿ ದಿನಸಿ ಕಿಟ್​, ಸೋಂಕಿತರಿಗೆ ಉಚಿತ ವೈದ್ಯಕಿಯ ಸೌಲಭ್ಯ, ಪರಿಕರಗಳನ್ನು ನೀಡಿ ಪ್ರತಿಯೊಂದು ಗ್ರಾಮದಲ್ಲಿ ಸ್ಯಾನಿಟೈಸರ್​ ಸಿಂಪಡಣೆ ಮಾಡಿಸಲಾಗಿದೆ. ಆರೋಗ್ಯ, ಶಿಕ್ಷಣ, ಸಮಾಜ ಸೇವೆಯ ಮೂಲಕ ಬಿಜೆಪಿ ಕಟ್ಟಿ ಬೆಳೆಸಲಾಗಿತ್ತು. ಆದರೆ ಪಕ್ಷ ನನಗೆ ಟಿಕೆಟ್​ ನೀಡದೆ ಜೆಡಿಎಸ್​ನಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿ ರಜೆ ಮೇಲೆ ಕ್ಷೇತ್ರವನ್ನು ಬಿಟ್ಟು ತೆರಳಿದ್ದ ಮಾಜಿ ಶಾಸಕರಿಗೆ ಟಿಕೆಟ್​ ನೀಡುವ ಮೂಲಕ ಪಕ್ಷ ಒಡೆಯುವ ಕೆಲಸ ಮಾಡಿದ್ದಾರೆ. ಇದನ್ನರಿತು ಎಲ್ಲ ಧರ್ಮ, ಜನಾಂಗದವರು ಜನಸೇವೆಗೆ ಅವಕಾಶ ಕಲ್ಪಿಸುವ ವಿಶ್ವಾಸವಿದೆ ಎಂದರು.
    ಮುಖಂಡರಾದ ಹರೀಶ್​ಗೌಡ, ಮಂಜುಳಾ, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ, ನರಸಿಂಹರೆಡ್ಡಿ, ಶ್ರೀನಾಥ್​, ಜಯಶಂಕರ್​ ಇನ್ನಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts