ಹುಮನಾಬಾದ್: ತಪ್ಪದೆ ಪ್ರತಿಯೊಬ್ಬರೂ ಮತದಾನ ಮಾಡಿದಾಗ ಮಾತ್ರ ಜನತಂತ್ರ ವ್ಯವಸ್ಥೆ ಸದೃಢಗೊಂಡು ಅಭಿವೃದ್ಧಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಉಂಟಾಗಲಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಕರ್ಾರಿ, ಅನುದಾನಿತ ಹಾಗೂ ಅನುದಾನ ರಹಿತಿ ಶಾಲಾ ಮುಖ್ಯಗುರುಗಳು ಹಾಗೂ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ನಾಲ್ಕು ದಿನಗಳ ಕಾಲ ನಡೆಯಲಿರುವ ಮತದಾರರ ಸಾಕ್ಷರತಾ ಕ್ಲಬ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಜನತಂತ್ರ ಯಶಸ್ಸಿಗೆ ಕಡ್ಡಾಯ ಮತದಾನ ಅವಶ್ಯಕವಾಗಿದೆ. ಚುನಾವಣೆ ವೇಳೆ ಮತಗಟ್ಟೆಗಳತ್ತ ಜನರನ್ನು ಆಕಷರ್ಿಸಲು ಹಾಗೂ ಮತದಾನದ ಮಹತ್ವವನ್ನು ಜನರಿಗೆ ತಿಳಿಸಿಕೊಡಲು ಸಾಕ್ಷರತಾ, ಜನಜಾಗೃತಿ ಆಂದೋಲನ ಆಯೋಜಿಸಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಮಾತನಾಡಿ, ಮತದಾನದ ಶೇಕಡಾವಾರು ಪ್ರಮಣ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮಾಣಿಕಪ್ಪ ಬಕ್ಕನ ಮಾತನಾಡಿ, ತಪ್ಪದೆ ಮತದಾನ ಮಾಡಬೇಕು. ಯುವ ಸಮೂಹ ಮತದಾನದ ಮಹತ್ವವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದರು.
ಅಕ್ಷರ ದಾಸೋಹ ಅಧಿಕಾರಿ ಓಂಕಾರ ರೋಗನ್, ಸಂಪನ್ಮೂಲ ವ್ಯಕ್ತಿಗಳಾದ ಸೋಮನಾಥ ಜ್ಞಾನಪನವರ್, ಮಹಾವೀರ ಜಮಖಂಡಿ, ವೀರಂತರಡ್ಡಿ ಜಂಪಾ, ಗಣೇಶ ಶೀಲವಂತ, ಶಿಕ್ಷಣ ಸಂಯೋಜಕ ಮಹಾದೇವ ಮೇತ್ರೆ, ಸುರೇಶ ಕಟ್ಟಿಮನಿ, ಅಮೀತ ಚಿಂಚೋಳಿಕರ್, ದತ್ತಾತ್ರೇಯ ಜಾಧವ, ಕಾಶಿನಾಥ ಕೂಡ್ಲಿ, ಮಹೇಬುಬ್ ಪಟೇಲ್, ಇದ್ದರು