ಹುಬ್ಬಳ್ಳಿ: ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಬಹುದಿನಗಳ ಕನಸಾಗಿದ್ದ ವೆಬ್ಸೈಟ್ ರಚಿಸಲಾಗಿದ್ದು, ಇದೀಗ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ಲಯನ್ಸ್ ಸ್ಕೂಲ್ ಚೇರ್ಮನ್ ಜಯಪ್ರಕಾಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ವಿಜಯನಗರದಲ್ಲಿರುವ ಲಯನ್ಸ್ ಆಂಗ್ಲ ಮಾಧ್ಯಮ ಸ್ಕೂಲ್ನಲ್ಲಿ ಶನಿವಾರ ಏರ್ಪಡಿಸಿದ್ದ www.lionschoolhubli.org ವೆಬ್ಸೈಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೆಬ್ಸೈಟ್ನಲ್ಲಿ ಶಾಲೆಯ ಆರಂಭ, ಲಯನ್ಸ್ ಸಂಸ್ಥೆಯ ಸಂಸ್ಥಾಪಕರು, ಇದರ ಏಳಿಗೆಗೆ ಶ್ರಮಿಸಿದ ಮಹನೀಯರು, ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ, ಇಲ್ಲಿ ಕಲಿತು ಉನ್ನತ ಸಾಧನೆಗೈದವರ ವಿವರ, ಶಾಲೆಗೆ ಭೇಟಿ ನೀಡಿದ ಗಣ್ಯರು, ರಾಜಕೀಯ ನಾಯಕರು ಹೀಗೆ ಎಲ್ಲ ವಿವರಗಳಿವೆ. ವೆಬ್ಸೈಟ್ ಮುಖೇನ ಶಾಲೆಯ ಸಂಪೂರ್ಣ ಮಾಹಿತಿ ಜನರಿಗೆ ಸಿಗಲಿದೆ ಎಂದರು.
ವಿಜಯವಾಣಿ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ವೆಬ್ಸೈಟ್ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಆಡಳಿತ ಮಂಡಳಿಯವರು ಸೇವಾ ಮನೋಭಾದಿಂದ ಶಾಲೆ ನಡೆಸುತ್ತಿದ್ದಾರೆ. ಇಂದಿನ ದಿನಮಾನಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಎಲ್ಲರಿಗೂ ಅಂಗೈಯಲ್ಲೇ ಶಾಲೆಯ ಮಾಹಿತಿ ನೀಡುವ ಉದ್ದೇಶದಿಂದ ಶಾಲೆಯ ಸಮಗ್ರ ಮಾಹಿತಿಯುಳ್ಳ ವೆಬ್ಸೈಟ್ ರೂಪಿಸಿರುವುದು ಮಕ್ಕಳು ಮತ್ತು ಪಾಲಕರಿಗೆ ಅನುಕೂಲವಾಗಲಿದೆ ಎಂದರು.
ವಿಜಯವಾಣಿ ಪತ್ರಿಕೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದ್ಯಾರ್ಥಿಮಿತ್ರ ಪತ್ರಿಕೆ ಪ್ರಕಟಿಸುತ್ತಿದೆ. ಇದಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಇದೆ. ವಿದ್ಯಾರ್ಥಿ ಮಿತ್ರ ಪತ್ರಿಕೆ ಓದಿದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ಮಕ್ಕಳು ನಿತ್ಯ ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜಯವಾಣಿ ಪತ್ರಿಕೆ ಎಜುಕೇಶನ್ ಎಕ್ಸ್ಪೋ, ಕಾರ್ಯಾಗಾರ, ಚಿತ್ರಕಲೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮ ಆಯೋಜಿಸುತ್ತ ಬರುತ್ತಿದೆ ಎಂದರು.
ಶಾಲೆಯ ಕಾರ್ಯದರ್ಶಿ ಶಂಭು ಯಾವಗಲ್ಲ ಮಾತನಾಡಿ, ಲಯನ್ ಸ್ಕೂಲ್ನಲ್ಲಿ ಬರುವ ಏಪ್ರಿಲ್ನಲ್ಲಿ ಸಿಬಿಎಸ್ಇ ಪಠ್ಯಕ್ರಮ ಬೋಧನೆ ಶುರುವಾಗಲಿದೆ. ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು. ಡಾ. ರವಿ ನಾಡಗೇರ, ಶಂಭು ಯಾವಗಲ್ಲ, ಎನ್. ಆರ್. ಪಾಟೀಲ, ಪ್ರಾಚಾರ್ಯು ನೇಹಾ ಗಡಗೋಲಿ, ಅನಿಲ್ ದೇಸಾಯಿ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಲಯನ್ಸ್ ಶಾಲೆಯ ಬಹುದಿನದ ಕನಸು ನನಸು

You Might Also Like
ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?
Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…
ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels
Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…
ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes
hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…