ಹುಬ್ಬಳ್ಳಿಯಲ್ಲಿ ಕುಟುಂಬದ ಸದಸ್ಯರ ಮೇಲೆ ಮಚ್ಚು, ಲಾಂಗ್​ನಿಂದ ಹಲ್ಲೆ ನಡೆಸಿದ ಮಾಜಿ ಮೇಯರ್​

ಹುಬ್ಬಳ್ಳಿ: ನಗರದಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ಮಾಜಿ ಮೇಯರ್​ ವೆಂಕಟೇಶ್ ಮೇಸ್ತ್ರಿ ಹಾಗೂ ಬೆಂಬಲಿಗರು ಮಚ್ಚು ಮತ್ತು ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್​ ವೆಂಕಟೇಶ ಮೇಸ್ತ್ರಿ ಹುಬ್ಬಳ್ಳಿಯ ತೊರವಿ ಹಕ್ಕಲದಲ್ಲಿ ದೇವೇಂದ್ರಪ್ಪ ಆಲಕುಂಟೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ವೆಂಕಟೇಶ್​ ತಮ್ಮ ಬೆಂಬಲಿಗರೊಂದಿಗೆ ಲಾಂಗು, ಮಚ್ಚು, ತಲ್ವಾರ್​ ಮತ್ತು ಬ್ಯಾಟ್​ಗಳಿಂದ ಹಲ್ಲೆ ಮಾಡಿ ಬೈಕ್​ಗಳನ್ನು ಜಖಂ ಮಾಡಿ ಪರಾರಿಯಾಗಿದ್ದಾರೆ.ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಿಮ್ಸ್​ಗೆ ದಾಖಲಿಸಲಾಗಿದೆ.

ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಗಳಿದ್ದರೂ ವೆಂಕಟೇಶ್​ ಮೇಸ್ತ್ರಿಯನ್ನು ಕಮರಿಪೇಟ್​​ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಬಿಜೆಪಿಯಲ್ಲಿದ್ದ ವೆಂಕಟೇಶ್​ ಮೇಸ್ತ್ರಿ ಕಳೆದ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು.

Leave a Reply

Your email address will not be published. Required fields are marked *