ಗಟ್ಸ್‌ ಇದ್ದರೆ ನಿಮ್ಮ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಿ: ಜಗದೀಶ್‌ ಶೆಟ್ಟರ್‌

ಹುಬ್ಬಳ್ಳಿ: ಈ ಸಮ್ಮಿಶ್ರ ಸರ್ಕಾರ ಎನಿ ಟೈಮ್ ಪತನಗೊಳ್ಳುತ್ತದೆ. ನೀರಿನ ಮೇಲಿನ ಗುಳ್ಳೆಯಂತಿರುವ ಸರ್ಕಾರ ಯಾವಾಗ ಬೇಕಾದರೂ ಒಡೆಯಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಇದು ಜನಾದೇಶದ ವಿರುದ್ಧ ಇರುವ ಸರ್ಕಾರವಾಗಿದೆ. ಅಧಿಕಾರದ ಹಪಾಹಪಿಯಿಂದ ಸಮ್ಮಿಶ್ರ ಸರ್ಕಾರ ಬಂದಿದೆ. ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಗುದ್ದಾಟ ನಡೆಸಿದ್ದಾರೆ. ಅವರ ನಡುವೆ ಒಳ ಬೇಗುದಿ ಇದೆ. ಜೆಡಿಎಸ್ ಜತೆ ಮೈತ್ರಿ‌ ಮಾಡಿಕೊಂಡು ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.

ಸಿಎಂ ಕಿಂಗ್ ಪಿನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಮ್ಮಲ್ಲಿ ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಿ. ಅದು ಬಿಟ್ಟು ಹಿಟ್ ಅಂಡ್ ರನ್ ಹೇಳಿಕೆ ನೀಡಬೇಡಿ. ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ನಿಮಗೆ ಗಟ್ಸ್ ಇದ್ದರೆ ನಿಮ್ಮ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಿ. ಅದು ಬಿಟ್ಟು ನಮ್ಮ ಮೇಲೆ ಹಾಕಬೇಡಿ. ಸರ್ಕಾರ ಬಿದ್ದರೆ ಸಹಜವಾಗಿಯೇ ನಾವು ಉಪಯೋಗ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)