ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹುಬ್ಬಳ್ಳಿ ನಗರ ತಾಲೂಕು 10ನೇ ಕನ್ನಡ ಸಾಹಿತ್ಯ ಸಮೆ್ಮೕಳನವನ್ನು ಮಾ. 20 ರಂದು ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ ಆಯೋಜಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಅಂದು ಬೆಳಗ್ಗೆ 8.30 ಕ್ಕೆ ಪಾಲಿಕೆ ಸಭಾ ನಾಯಕ ವೀರಣ್ಣ ಸವಡಿ, ಕಸಾಪ ತಾಲೂಕು ಅಧ್ಯಕ್ಷೆ ವಿದ್ಯಾ ವಂಟಮುರಿ ಅವರು ಧ್ವಜರೋಹಣ ನೆರವೇರಿಸುವರು. ಬೆಳಗ್ಗೆ 9 ಗಂಟೆಗೆ ಕಲಾ ತಂಡಗಳೊಂದಿಗೆ ಸರ್ವಾಧ್ಯಕ್ಷರ ಮೆರವಣಿಗೆ ದೇಶಪಾಂಡೆ ನಗರದ ಕಾಮಾಕ್ಷಿ ದೇವಾಲಯದಿಂದ ಸವಾಯಿ ಗಂಧರ್ವ ಭವನದವರೆಗೆ ನಡೆಯಲಿದೆ. ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮುರಿ ಉಪಸ್ಥಿತಿ ಇರುವರು ಎಂದು ತಿಳಿಸಿದರು.
ಬೆಳಗ್ಗೆ 10 ಗಂಟೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸಮೆ್ಮೕಳನಕ್ಕೆ ಚಾಲನೆ ನೀಡುವರು. ಸಾಹಿತಿ ಡಾ. ಬಿ.ವಿ. ಶಿರೂರು ಅಧ್ಯಕ್ಷತೆ ವಹಿಸುವರು. ಸರ್ವಾಧ್ಯಕ್ಷರಾದ ಪ್ರೊ. ಕೆ.ಎಸ್. ಕೌಜಲಗಿ ಅವರು ಸರ್ವಾಧ್ಯಕ್ಷರ ನುಡಿ ನುಡಿಯಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಶಿಕ್ಷಣ ಸಾಹಿತ್ಯ ಕುರಿತು ಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ವಹಿಸುವರು. ಆರೋಗ್ಯದ ಬಗ್ಗೆ ವೈದ್ಯರಾದ ಡಾ. ಜಿ. ಬಿ. ಸತ್ತೂರ, ಡಾ.ಚಿದಾನಂದ ಮನ್ಸೂರ ಅವರು ಶಿಕ್ಷಣ ಹಾಗೂ ಸಂವಿಧಾನ ಆಶಯ, ವಚನಗಳಲ್ಲಿ ಸ್ತ್ರೀ ಸಬಲೀಕರಣ ಕುರಿತು ಸ್ನೇಹಾ ಭೂಸನೂರ ವಿಷಯ ಮಂಡನೆ ಮಾಡಲಿದ್ದಾರೆ ಎಂದು ವಿವರಿಸಿದರು.
ಕೇಳೋಣ ಬನ್ನಿ ಕವಿಗೋಷ್ಠಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಮಹಾಂತಪ್ಪ ನಂದೂರ ಅಧ್ಯಕ್ಷತೆ ವಹಿಸುವರು. 25 ಕವಿಗಳು ಪಾಲ್ಗೊಳ್ಳುವರು. ಮಧ್ಯಾಹ್ನ 3.30ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಡಾ. ಮಹೇಶ ಹೊರಕೇರಿ, ಡಾ. ವೀರೇಶ ಹಂಡಗಿ, ಸಿ.ಎಂ. ಮುನಿಸ್ವಾಮಿ, ಡಾ. ಲಿಂಗರಾಜ ರಾಮಾಪೂರ ಸೇರಿದಂತೆ ಅನೇಕರು ಭಾಗವಹಿಸುವರು. ಸಂಜೆ 4.30ಕ್ಕೆ ನಡೆಯುವ ಬಹಿರಂಗ ಅಧಿವೇಶನದಲ್ಲಿ ನಿರ್ಣಗಳನ್ನು ಅಂಗೀಕರಿಸಲಾಗುವುದು ಎಂದು ಹೇಳಿದರು.
ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಂಗಕರ್ವಿು ಡಾ. ಗೋವಿಂದ ಮಣ್ಣೂರ ಅಧ್ಯಕ್ಷತೆ ವಹಿಸುವರು. ಜಾನಪದ ವಿವಿ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಸಮಾರೋಪ ಭಾಷಣ ಮಾಡುವರು. ಸಂಜೆ 6.30ಕ್ಕೆ ಸಾಂಸೃ್ಕಕ ಕಾರ್ಯಕ್ರಮ ನಡೆಯಲಿವೆ ಎಂದರು.
ವಿದ್ಯಾ ವಂಟಮುರಿ, ಎಸ್.ಕೆ. ಆದಪ್ಪನವರ, ಚನ್ನಬಸಪ್ಪ ಧಾರವಾಡಶೆಟ್ಟರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.