ಗಳಿಕೆಯಲ್ಲಿ ಒಂದಿಷ್ಟು ದಾನ ಮಾಡುವುದು ಮುಖ್ಯ

blank

ಹುಬ್ಬಳ್ಳಿ: ಒಬ್ಬ ವ್ಯಕ್ತಿ ಜೀವನದಲ್ಲಿ ಎಷ್ಟು ಕೋಟಿ ರೂಪಾಯಿ ಗಳಿಸಿದರು ಎಂಬುದು ಮುಖ್ಯವಲ್ಲ. ಗಳಿಕೆಯಲ್ಲಿ ಎಷ್ಟು ಕೋಟಿ ಹಣವನ್ನು ಧಾರ್ವಿುಕ, ಸಾಮಾಜಿಕ ಕಾರ್ಯಗಳಿಗೆ ದಾನ ನೀಡಿದರು ಎಂಬುದು ಮುಖ್ಯ ಎಂದು ಮೂರುಸಾವಿರಮಠದ ಶ್ರೀ ಡಾ. ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಚವರಗುಡ್ಡ ಗ್ರಾಮದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಶಾಖಾ ಮಠದ ಮರುನಿರ್ವಣಕ್ಕೆ ಶ್ರೀಗಳು ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸ್ವರ್ಣಾ ಗ್ರುಪ್ ಆಫ್ ಕಂಪನಿ ಮಾಲೀಕ ಡಾ. ವಿಎಸ್​ವಿ ಪ್ರಸಾದ ಮಾತನಾಡಿ, ಚವರಗುಡ್ಡ ಗ್ರಾಮಕ್ಕೂ ನನಗೂ 23 ವರ್ಷಗಳಿಂದ ಅವಿನಾಭಾವ ಸಂಬಂಧವಿದೆ. ಇಲ್ಲಿ ಮೂರುಸಾವಿರಮಠದ ಶಾಖಾ ಮಠದ ಮರು ನಿರ್ಮಾಣ ಕಾರ್ಯದ ಸುದ್ದಿ ಕೇಳಿ ತುಂಬಾ ಖುಷಿಯಾಗಿದೆ. ಇದು ಭಗವಂತನಿಗೆ ಸೇವೆ ಸಲ್ಲಿಸಲು ಸಿಕ್ಕ ಅವಕಾಶ, ದೇವರು ನನಗೆ ಎಷ್ಟು ನೀಡಲು ಸಂಕಲ್ಪ ಮಾಡುತ್ತಾನೋ ಅಷ್ಟು ದೇಣಿಗೆ ನೀಡುತ್ತೇನೆ ಎಂದರು.

ರಾಯನಾಳ ವಿರಕ್ತಮಠದ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ಶಿವಯ್ಯ ಸ್ವಾಮೀಜಿ, ಬಿ.ಆರ್. ಪಾಟೀಲ, ಮೇಘರಾಜ ಬಾಕಳೆ, ಯಲ್ಲಪ್ಪ ಮೊರಬದ, ದಾದಾಪೀರ ಬಿಜಾಪುರ, ಪಿಡಿಒ ಚನ್ನಬಸಪ್ಪ ಧರೆಣ್ಣವರ, ತಿಪ್ಪಣ್ಣ ಸೋಮನಕೊಪ್ಪ, ಪರಶುರಾಮ ಮಾಲಪ್ಪನವರ, ರಾಮಪ್ಪ ಉಣಕಲ್ಲ, ಮಂಜುನಾಥ ಮೋರೆ, ರಾಜು ಖಾನಾಪುರ, ಅಮರ ಮಾನೆ, ಎಂ.ವಿ. ಗಿರಡ್ಡಿ, ದುರಗಪ್ಪ ಮುದ್ದಿ, ಇತರರಿದ್ದರು.

Share This Article

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…