Wednesday, 12th December 2018  

Vijayavani

Breaking News

ಬಾರ್​ನಲ್ಲಿ ಕಾಂಗ್ರೆಸ್ ಮುಖಂಡನ ಪುತ್ರನ ಪುಂಡಾಟ

Sunday, 18.03.2018, 5:02 PM       No Comments

ಹುಬ್ಬಳ್ಳಿ: ನಗರದ ಬಾರ್​ವೊಂದರಲ್ಲಿ ಕಾಂಗ್ರೆಸ್​ ಮುಖಂಡ ದುರ್ಗಪ್ಪ ಬಿಜವಾಡ್​ ಅವರ ಪುತ್ರ ಪುಂಡಾಟ ನಡೆಸಿದ್ದು, ರಾಡ್​ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಶನಿವಾರ ತಡರಾತ್ರಿ ಗ್ರೀನ್​ಗೆಟ್​ ಬಾರ್​ನಲ್ಲಿ ದುರ್ಗಪ್ಪ ಅವರ ಪುತ್ರ ವಿಜಯ್​ ಬಿಜವಾಡ್​ ಪುಂಡಾಟ ನಡೆಸಿದ್ದಾನೆ. ಈ ದೃಶ್ಯ ಬಾರ್​ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ವಿಜಯ್​ ಬಿಜವಾಡ್​ ಸೇರಿ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್​ 143, 144, 147 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ನಂತರ ಆರೋಪಿ ವಿಜಯ್​ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top