More

  ಸೋಲು-ಗೆಲವು ಸಮನಾಗಿ ಸ್ವೀಕರಿಸಿ

  ಹುಣಸಗಿ: ಕ್ರೀಡೆಗಳಲ್ಲಿ ಸೋಲು-ಗೆಲವು ಸಹಜ, ಎರಡನ್ನೂ ಸಮನಾಗಿ ಸ್ವೀಕರಿಸುವವರು ಮಾತ್ರ ಉತ್ತಮ ಕ್ರೀಡಾಪಟು ಎನಿಸಿಕೊಳ್ಳಲು ಸಾಧ್ಯ ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು.

  ಪಟ್ಟಣದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಎನ್‌ಟಿಆರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ೩ನೇ ವರ್ಷದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಮಂಜುನಾಥ ವೈದ್ಯದಲ್ಲಿ ವೃತ್ತಿಯಲ್ಲಿ ತಮ್ಮದೆಯಾದ ಛಾಪು ಮೂಡಿಸಿ ಈಗ ಕ್ರೀಡಾಪಟುಗಳಿಗೆ ಕಬಡ್ಡಿ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

  ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಮಾತನಾಡಿ, ಗ್ರಾಮೀಣ ಭಾಗದಲ್ಲಿ ವೈದ್ಯ ಡಾ.ಮಂಜುನಾಥ ಅವರ ಸೇವೆ ಅಮೋಘವಾಗಿದೆ. ಅಲ್ಲದೆ ಕ್ರೀಡಾ ಚಟುವಟಿಕೆ ನಡೆಸುತ್ತಿರುವುದು ಬಡವರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಅನುಕೂಲವಾಗು ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರ ನಡೆಸುವಂತಾಗಲಿ ಎಂದು ಹೇಳಿದರು.

  ಗೋರಸೇನಾ ರಾಷ್ಟ್ರೀಯ ಸಂಘದ ರಾಜ್ಯ ಕಾರ್ಯದರ್ಶಿ ಕೃಷ್ಣ ಜಾಧವ್ ಪ್ರಾಸ್ತಾವಿಕ ಮಾತನಾಡಿದರು.

  ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ನಿಂಗರಾಜ ಬಾಚಿಮಟ್ಟಿ, ಮಲ್ಲಣ್ಣ ಸಾಹು ಮಧೋಳ, ಬಸವರಾಜ ಬಳಿ, ಸೂಗಪ್ಪ ಚಂದಾ, ಶರಣು ಸಾಹುಕಾರ ದಂಡಿನ, ಚನ್ನಯ್ಯಸ್ವಾಮಿ ಹಿರೇಮಠ, ಸಿದ್ದು ಸಾಹು ಮುದಗಲ್, ಬಸವರಾಜ ಸಜ್ಜನ್, ವೆಂಕೋಬ ಸಾಹುಕಾರ ಹಾಗೂ ಡಾ.ಮಂಜುನಾಥ ರಾಠೋಡ್, ಡಾ.ಸುಜಾತಾ ರಾಠೋಡ್ ಇತರರಿದ್ದರು.

  ಶಿಕ್ಷಕ ಭೀಮಣ್ಣ ವಾಲ್ಮೀಕಿ ಸ್ವಾಗತಿಸಿದರು. ಶಿಕ್ಷಕ ಶಿವಾನಂದ ತೋಟದ ನಿರೂಪಣೆ ಮಾಡಿ ವಂದಿಸಿದರು.

  ಚಾರಿಟೇಬಲ್ ಟ್ರಸ್ಟ್ನ ಪುಸ್ತಕ ಬಿಡುಗಡೆಗೊಳಿಸಲಾಯಿತು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts