19 C
Bengaluru
Saturday, January 18, 2020

ವಾರ ಭವಿಷ್ಯ: ಸಾಡೇಸಾತಿ ಕಾಟ ಇನ್ನೆರಡು ತಿಂಗಳಲ್ಲಿ ಬಂದು ವಕ್ಕರಿಸುವುದರೊಳಗೆ ಜಾಗ್ರತೆಯ ಹೆಜ್ಜೆ ಇರಿಸಲು ಮರೆಯದಿರಿ

Latest News

ಜೀ ಕನ್ನಡದಲ್ಲಿ ಇಂದಿನಿಂದ ಜೀನ್ಸ್ ಶೋ

ಬೆಂಗಳೂರು: ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿಯು ಇದೀಗ ‘ಜೀನ್ಸ್’ ಎಂಬ ಫ್ಯಾಮಿಲಿ ಎಂಟರ್​ಟೇನ್​ವೆುಂಟ್​ನ ಕಾರ್ಯಕ್ರಮ ಆರಂಭಿಸಿದೆ. ಈ ವಿನೂತನ...

ನಾಳೆ ಪೋಲಿಯೋ ದಿನ

ಬೆಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನವಾದ ಭಾನುವಾರ ರಾಜ್ಯದಲ್ಲಿ 0-5 ವರ್ಷದೊಳಗಿನ 64,65,561 ಮಕ್ಕಳಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದೆ. ಕಾರ್ಯಕ್ರಮಕ್ಕೆ 33,021 ಬೂತ್​ಗಳು,...

ನಿಜವಾದ ಕಲೆ ಯಾವುದು?

ವಿಕ್ರಮ ಸಿಂಹ ಎಂಬ ರಾಜ ಕಲೆಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದ. ಅರಮನೆಯಲ್ಲಿ ಕಲಾಕೊಠಡಿ ಇದ್ದು, ಆಸ್ಥಾನದಲ್ಲಿ ಸಾಕಷ್ಟು ಕಲಾವಿದರಿದ್ದರು, ಹೊರಗಡೆಯಿಂದಲೂ ಒಳ್ಳೊಳ್ಳೆಯ ಕಲಾವಿದರು...

ಭೂ ಒತ್ತುವರಿ ಪತ್ತೆಗೆ ಸಮಿತಿ: ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಸ್ಥಿತ್ವಕ್ಕೆ, ಸಂಪುಟ ನಿರ್ಧಾರ

ಬೆಂಗಳೂರು: ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಬೆಂಗಳೂರು ನಗರ ಸರ್ಕಾರಿ ಭೂಮಿ ಒತ್ತುವರಿ ಅಧ್ಯಯನ ಜಂಟಿ ಸದನ ಸಮಿತಿ ಮಾದರಿಯಲ್ಲಿಯೇ ಮತ್ತೊಂದು ಸಮಿತಿಯನ್ನು ಸರ್ಕಾರ...

ಅಜನೀಶ್-ವಿಜಯ್ ಮತ್ತೊಂದು ಮೋಡಿ

ಬೆಂಗಳೂರು: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಗಾಯಕ ವಿಜಯ್ ಪ್ರಕಾಶ್ ಜೋಡಿ ಸೇರಿದರೆ ಅಲ್ಲೊಂದು ಮೋಡಿ ಖಚಿತ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ...

ಮೇಷ: ಒಳಗಣ್ಣನ್ನು ತೆರೆದು ನಿಮ್ಮ ಶಕ್ತಿಯನ್ನು ವಿಶ್ಲೇಷಿಸಿ. ಬುಧ ಗ್ರಹದ ಕಾರಣದಿಂದಾಗಿ ವಿಶೇಷವಾದ ಬೌದ್ಧಿಕ ಶಕ್ತಿಯೊಂದು ಯುಕ್ತ ಕಾಲದಲ್ಲಿ ನಿಮ್ಮ ನೆರವಿಗೆ ಬಂದು ಅಗಾಧವಾದುದನ್ನು ನಿಮ್ಮಿಂದ ಮಾಡಿ ಪೂರೈಸಲು ಜತೆಗೆ ಜೀವನದ ಸಂದರ್ಭದ ಔಚಿತ್ಯಪೂರ್ಣ ಸಾಧನೆ ಮಾಡಿದುದರ ಬಗೆಗಿನ ವಿಚಾರದಲ್ಲಿ ಅನ್ಯರ ಪ್ರಶಂಸೆಯನ್ನು ಒದಗಿಸಲು ಪೂರಕವಾಗಿ ನಿಮ್ಮ ಜತೆಗೂಡುತ್ತದೆ. ಬೆರಗಾಗುವ ರೀತಿಯಲ್ಲಿ ಧನಲಾಭಕ್ಕೆ ದಾರಿ ತೆರೆದುಕೊಳ್ಳಬಹುದಾಗಿದೆ. ಉಪ್ಪು, ಕರ್ಪರದ ಪುಡಿ ಬೆರೆಸಿ ಹುಲ್ಲು ತುಂಬಿರುವ ಜಾಗೆಗೆ ದಕ್ಷಿಣಾಮೂರ್ತಿಯನ್ನು ನೆನೆದು ಹಾಕಿ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 7

ವೃಷಭ: ನೀವು ಗೆಲುವಿನಲ್ಲಿ ಲಾಭ ತರುವ ಅನೇಕ ವಿಚಾರಗಳನ್ನು ಪೂರೈಸಿಕೊಂಡು ಸಾಗಲು ಶಕ್ತಿ ಗಣೇಶನ ಅನುಗ್ರಹ ತೆರೆದುಕೊಳ್ಳಲಿದೆ. ಪ್ರಸ್ತುತದ ಅಷ್ಟಮ ಶನಿ ಕಾಟದಿಂದ ಧೈರ್ಯವನ್ನು, ಭಾಗ್ಯವನ್ನು, ಕೆಲಸದ ಸ್ಥಳದಲ್ಲಿನ ಕಂಪನಗಳನ್ನು, ಅಸ್ಥಿರತೆಯಿಂದಾಗಿ ಪಡಿಪಾಟಲುಗಳನ್ನು ಸೃಷ್ಟಿಸುತ್ತಿದೆ. ಕಾರ್ಯವಾಸಿ ಕತ್ತೆಕಾಲು ಎಂಬ ವಿಚಾರ ತಿಳಿದಿರಿ. ವೇದಿಕೆಯ ಮೇಲೆ ಆದರ್ಶದ ಮಾತನಾಡಿ ನಿಜಜೀವನದಲ್ಲಿ ನಡೆಸುವ ಕೆಲಸಗಳು ಹೀನವಾಗಿರುತ್ತವೆ. ಆತ್ಮಬಲ ದೃಢವಾಗಿರಲಿ. ನಾರಸಿಂಹ, ಶಕ್ತಿ ಮಾರುತಿಯ ಆರಾಧನೆಯಿಂದ ಒಳಿತು.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 2

ಮಿಥುನ: ಬಿರುಗಾಳಿ ಎದುರಿಗಿರುವಾಗ ಬಿರುಸಿನ ಹೆಜ್ಜೆ ಇರಿಸಲು ಅಸಾಧ್ಯ. ನಿಮ್ಮದಾದ ಮನೆಯನ್ನು ಮಾಡಿಕೊಳ್ಳಬೇಕು ಎಂಬ ನಿರೀಕ್ಷೆ ಹೊತ್ತಿದ್ದೀರಿ. ಅನೇಕ ರೀತಿಯ ಜಾಹೀರಾತುಗಳ ಪರಿಣಾಮವಾಗಿ ಮನೆ ಆಗಿಯೇ ಹೋಯ್ತು ಎಂಬ ನಿರ್ಧಾರಕ್ಕೂ ಬರುತ್ತೀರಿ. ವಾಸ್ತವದಲ್ಲಿ ಕಂಡ ಇಕ್ಕಟ್ಟುಗಳು ನಿಮಗೆ ಗೊಂದಲ ತರುತ್ತಿರುತ್ತವೆ. ಒಂದೆರಡು ವರ್ಷ ತಡೆದರೂ ಸರಿಯೆ, ಗಡಿಬಿಡಿ ಮಾಡಿ ಖರೀದಿಗೆ ಮುಂದಾಗದಿರಿ. ಗಣೇಶನ ಧ್ಯಾನ ಒಳಿತು. ಗಣೇಶನು ನಿಮ್ಮ ವ್ಯಾಕುಲತೆಯನ್ನು ದೂರ ಮಾಡುವ ಚಿಂತಾಮಣಿಯಾಗಿದ್ದಾನೆ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 9

ಕಟಕ:  ಸರ್ಪವು ಲಾಭದಾಯಕವಾಗಿರುವುದರಿಂದ ವಿಷ್ಣುವು ಪತ್ನಿಯಾದ ಶ್ರೀಲಕ್ಷ್ಮೀಯೊಂದಿಗೆ ನಿಮಗೆ ಅನುಗ್ರಹಿಸಲು ಸಾಧ್ಯ. ಹನುಮಾನ್ ಚಾಲೀಸಾ, ವಿಷ್ಣು ಅಷ್ಟೋತ್ತರ ನಾಮಾವಳಿ ಓದಿ. ಒಂದೆರಡು ದಿನಗಳಲ್ಲಿ ಹಾಳಾಗುವ ವ್ಯಾಪಾರ ಮಾಡದಿರಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 2

ಸಿಂಹ: ಒಳಿತಿಗಾಗಿನ ದಾರಿಗಳನ್ನು ಬುಧ ಶುಕ್ರರು ತೋರಲಿದ್ದಾರೆ. ವಾಣಿಜ್ಯ ವ್ಯವಹಾರ, ಬಹುವಾಗಿ ಒಗ್ಗೂಡಿಸಿದ ಬಂಡವಾಳದೊಂದಿಗೆ ನಡೆಸಬೇಕಾದ ವ್ಯವಹಾರ ಒಳಿತಿನ ದಿನಗಳ ಕಾರಣದಿಂದಾಗಿ ಸೂಕ್ತವಾಗಿರುವುದು ಸರಿಯಾದರೂ, ಕೆಲಸಗಾರರ ವಿರೋಧ, ಮುಷ್ಕರಗಳು ತೊಂದರೆ ತಂದೀತು. ನಿಖರವಾದ ಯೋಜನೆ ರೂಪಿಸಿಕೊಳ್ಳಿ. ಶ್ರೀದೇವಿ ಖಡ್ಗಮಾಲಿನಿಯನ್ನು ಆರಾಧಿಸಿ. ವೈರುಧ್ಯಗಳ ವಿರುದ್ಧ ಮಿಂಚಿನ ವೇಗದಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಕಸುವನ್ನು ಒದಗಿಸುವ ಸುಬ್ರಹ್ಮಣ್ಯನನ್ನೂ ಆರಾಧಿಸಿ. ದಿಟ್ಟ ನಡೆಯಿಂದ ಗೆಲುವಿದೆ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 9

ಕನ್ಯಾ: ನಿಮ್ಮ ಉತ್ಸಾಹವನ್ನು, ಕ್ರಿಯಾಶೀಲತೆಯನ್ನು ಹಿಡಿದೆಳೆದು ಜಗ್ಗಿದ ಅನುಭವವಾಗಬಹುದು. ನರಸಿಂಹನನ್ನು, ದುರ್ಗಾಳನ್ನು ಆರಾಧಿಸಿ. ಕಾಣದಂತೆ ಆವರಿಸುವ ಪಿಶಾಚಪೀಡೆಗಳು, ಭ್ರಮಾಧೀನ ಅಡೆತಡೆಗಳು ನಿಯಂತ್ರಣಕ್ಕೆ ಸಿಗಲು ಸಾಧ್ಯ. ಸ್ವಜನರ ಸುಳ್ಳು ಆರೋಪ, ಕುಟಿಲ ಕಾರಸ್ಥಾನಗಳೇ ನಿಮಗೆ ಮೊದಲ ಸಾಲಿನ ಅನಿಷ್ಟಗಳಾಗಿವೆ. ಅಪರಿಚಿತರು ನೆರವಿಗೆ ಬರಬಹುದು. ಸ್ವಜನರು ಕಾಲೆಳೆಯುತ್ತಾರೆ. ವಿದೇಶಕ್ಕೆ ಹೋಗ ಬಯಸಿದರೆ ಹತ್ತಿ ಕಾಳು, ಬೆಲ್ಲ, ಗೋದಿ ಬೆರೆಸಿದ ಗೋಗ್ರಾಸವನ್ನು ಹಸುವಿಗೆ ನೀಡಿ, ಕೃಷ್ಣನನ್ನು ಧ್ಯಾನಿಸಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 3

ತುಲಾ: ಪರಂಪರೆ ಮತ್ತು ಸಂಸ್ಕಾರಗಳ ಕಾರಣದಿಂದಾಗಿ ನಿಮ್ಮ ವ್ಯಕ್ತಿತ್ವದ ಘನತೆ ಅನನ್ಯವಾಗಿರುತ್ತದೆ ಎಂಬುದಕ್ಕೆ ಎರಡು ಮಾತಿಲ್ಲ. ಆದರೆ ಇಂದಿನ ವರ್ತಮಾನ ನಿಮ್ಮಿಂದ ಪಕ್ಕಾ ಆದ ಬಿಸಿನೆಸ್ ವಿಚಾರದ ಸ್ಮಾರ್ಟ್​ನೆಸ್ ಅನ್ನು ಬಯಸುತ್ತದೆ. ನ್ಯಾಯದ ವಿಚಾರವನ್ನು ಕಡೆಗಣಿಸಲಾಗದ ನಿಮಗೆ ನಿಮ್ಮ ಪಾರದರ್ಶಕತೆಯೇ ಮಿತಿಯಾಗುವ ಅಪಾಯವನ್ನು ಸೃಷ್ಟಿಸಿದೆ. ಪಾರದರ್ಶಕತೆಯನ್ನು ಸ್ವಾಗತಿಸುವ ಗ್ರಾಹಕ ನಿಮಗಿಂತ ಸಿಗುವುದು ದುಸ್ತರವಾಗುತ್ತಿದೆ. ಮಾರ್ಕೆಟ್​ನ ಹಾವುಏಣಿಯಾಟದ ತಿರುಳನ್ನು ಸೂಕ್ಷ್ಮವಾಗಿ ಅರಿತುಕೊಳ್ಳಿ. ರಾಮರಕ್ಷಾ ಸ್ತೋತ್ರ ಓದಿ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 6

ವೃಶ್ಚಿಕ: ನಿಮಗೆ ನುಂಗಿದರೆ ಬಿಸಿ ತುಪ್ಪ, ಉಗುಳಿದರೆ ತುಪ್ಪ ಕಳೆದುಕೊಳ್ಳುವ ಉಭಯ ಪೇಚಾಟ ಇದ್ದೇ ಇರುತ್ತದೆ. ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಇಷ್ಟ ಎನ್ನುವ ಸ್ಥಿತಿ ನಿರ್ವಿುಸಿಕೊಳ್ಳದಿರಿ. ನಿಮಗೆ ಕಾಲೆಳೆಯುವ ಬಂಧುಗಳಾದರೆ ಎಲ್ಲಿ ಇಡಬೇಕೋ ಅಲ್ಲೇ ಇಡಿ. ಹಿರಿಯರೊಬ್ಬರ ಸಲಹೆ ನಿಮಗೆ ಪರಿಣಾಮಕಾರಿಯಾಗಲಿದೆ. ಸಿಟ್ಟಿಗೆ ಬುದ್ಧಿ ಕೊಡಬೇಡಿ. ಕಷ್ಟಕ್ಕೆ ದಾರಿ ನಿರ್ಮಾಣ ಆಗದಿರಲಿ. ಆಸ್ತಿಯ ವಿಚಾರದಲ್ಲಿ ಬಿಗಿಯಾಗಿ ದಾಯಾದಿಗಳು ವರ್ತಿಸಿದಲ್ಲಿ ಚಾತುರ್ಯದಿಂದ ಸಂದರ್ಭವನ್ನು ಎದುರಿಸಿ ಪರಿಣಾಮ ಸಾಧಿಸಿ. ರಾಮರಕ್ಷಾ ಸ್ತೋತ್ರ ಓದಿ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 1

ಧನು: ನಿಮ್ಮ ಪಾಲಿಗೆ ಅನೇಕ ರೀತಿಯ ಜನ ಬರುತ್ತಿರುತ್ತಾರೆ. ಎಲ್ಲರೂ ಅಪ್ರಾಮಾಣಿಕರೇ ಎನ್ನಲಾಗದು. ಅಪ್ರಾಮಾಣಿಕರಲ್ಲ ಎಂಬುದನ್ನೂ ಹೇಳಲಾಗದು. ಸಮುದ್ರದ ತೆರೆಗಳಂತೆ ಆರ್ಭಟ ನಡೆಸುವವರಿರುತ್ತಾರೆ. ಶಾಂತವಾಗಿದೆ ಎಂದು ತಿಳಿದುಕೊಂಡಲ್ಲಿ ಸೆಳೆತದ ಸುಳಿಯೂ ಆವಿರ್ಭವಿಸಿರುತ್ತದೆ. ಈಜುವುದನ್ನು ಕಲಿಯಿರಿ. ಆದರೆ ಸುಳಿಯ ವಿರುದ್ಧ ದಿಕ್ಕಿನಲ್ಲಿ ಈಜುವ ಗೋಜಲು ಬೇಡ. ವಿಶೇಷವಾದ ಕಾರ್ಯ ಸಂಯೋಜನೆಗಳ ರೂಪುರೇಷೆಗೆ ಮಕ್ಕಳಿಂದ ಸಹಾಯ ಲಭ್ಯ. ಆರೋಗ್ಯದ ಬಗೆಗೆ ಎಚ್ಚರ ಇರಲಿ. ದಶರಥ ರಾಜ ವಿರಚಿತ ಶನಿಸ್ತೋತ್ರ ಓದಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 4

ಕುಂಭ: ಏನೂ ತಿಳಿಯದವರಂತೆ ಸುತ್ತರಿಯುವ ಜನ ಬಂದರೂ ಅಧೈರ್ಯ ತೋರದಿರಿ. ಬಂದವರು ಬುದ್ಧಿಯವರೋ ಧೂರ್ತರೋ ಆಗಿದ್ದರೆ ಮಾತಿನ ವರಸೆಯಿಂದ ಗೊಂದಲಕ್ಕೆ ಒಳಪಡಿಸಿ. ಶನೈಶ್ಚರ ಸದ್ಯ ಬೆಂಬಲಕ್ಕಿದ್ದಾನೆ. ಗುರು ಬಲವೂ ಇದೆ. ಆದರೆ ಸಮಯ ಜಾರುತ್ತಲಿದೆ. ಸಾಡೇಸಾತಿ ಕಾಟ ಇನ್ನೆರಡು ತಿಂಗಳಲ್ಲಿ ಬಂದು ವಕ್ಕರಿಸುವುದರೊಳಗೆ ಜಾಗ್ರತೆಯ ಹೆಜ್ಜೆ ಇರಿಸಲು ಮರೆಯದಿರಿ. ನಿಮ್ಮ ಯೋಚನಾ ಶಕ್ತಿ, ಚಾತುರ್ಯವನ್ನು ಮೀರಿದ ಅದರಲ್ಲೂ ಸಿಗದಂತೆ ಕಾಲಿಗೆ ಬೆಣ್ಣೆ ಬಡಿದುಕೊಂಡ ಜನರನ್ನು ಧೈರ್ಯದಿಂದ ಎದುರಿಸಿ. ದುರ್ಗಾ ಸ್ತುತಿ ಉತ್ತಮ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 8

ಮೀನ: ನಿಮಗೆ ಬಿಸಿಯ ತೀವ್ರತೆ ಹೆಚ್ಚಾಗಿ, ಮನಸ್ಸು ವಿಶ್ರಾಂತಿ ಬಯಸುತ್ತಿದೆ. ಆದರೆ ದಿನನಿತ್ಯದ ಒತ್ತಡದಿಂದಾಗಿ ಸನ್ನದ್ಧಗೊಳ್ಳಲೇಬೇಕಾದ ವರ್ತಮಾನದಿಂದ ಹೊರಬರಲು ಚಂದ್ರನು ಅವಕಾಶ ನೀಡುತ್ತಿಲ್ಲ. ರಾಕೆಟ್ ವೇಗದಲ್ಲಿ ಮನಸ್ಸನ್ನು ಓಡಿಸುತ್ತಿದ್ದಾನೆ. ಸಂತೆಯೊಳಗೊಂದು ಮನೆಯ ಮಾಡಿ ಶಬ್ದಗಳಿಗಂಜಿದೊಡೆಂತಯ್ಯ ಎಂಬ ಮಾತನ್ನು ನೀವು ತಿಳಿದೇ ಇರುತ್ತೀರಿ. ಸಂತೆಯ ಗೌಜಿಯಲ್ಲಿ ಅಂಗಡಿ ತೆರೆದಿಡಿ. ತುಸುವಾದರೂ ಸಹನೀಯ ಸ್ಥಿತಿ ತಲುಪಲು ಸೂರ್ಯನ, ಶನೈಶ್ಚರರ ನೆರವು ಸಿಗಲು ಅನಂತಪದ್ಮನಾಭನನ್ನು ಸ್ತುತಿಸಿ. ವ್ಯಾಪಾರ ಸಿದ್ಧಿಗೆ ಅನುಕೂಲ ಸಾಧ್ಯ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 5

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...