ನಿತ್ಯಭವಿಷ್ಯ|15-05-2019

ಮೇಷ: ನಿರೀಕ್ಷೆಗಳು, ಕನಸುಗಳು ಇದ್ದೇ ಇರಲಿ. ಮುರವೈರಿ ಶ್ರೀಹರಿಯ ಕೃಪಾಕಟಾಕ್ಷದಿಂದ ಶ್ರೀರಕ್ಷೆ ಸಾಧ್ಯವಿದೆ. ಶುಭಸಂಖ್ಯೆ: 5

ವೃಷಭ: ನಿಮ್ಮದೇ ಯೋಚನೆ, ನಿಮ್ಮದೇ ನಿರ್ಧಾರ ಇತ್ಯಾದಿ ಎಲ್ಲ ನಿಮ್ಮದೇ ಆಗದಿರಲಿ. ಹಿರಿಯರ ಮಾತು ಕೇಳಿ. ಕ್ಷೇಮ. ಶುಭಸಂಖ್ಯೆ: 4

ಮಿಥುನ: ಸ್ವವಿಮರ್ಶೆಯನ್ನು ಮಾಡಿಕೊಳ್ಳದೆ ಇರುವ ಪ್ರಮಾದ ನಿಮ್ಮಿಂದ ಘಟಿಸದಿರಲಿ. ಇದರಿಂದ ಒಳಿತಾಗಲಿದೆ. ಶುಭಸಂಖ್ಯೆ: 7

ಕಟಕ: ಹೊಸ ಕೆಲಸ ಹುಡುಕುವ ವಿಚಾರದಲ್ಲಿ ಕೆಲವು ಪ್ರಗತಿಗಳನ್ನು ಕಾಣಲು ಈ ದಿನ ನಿಮ್ಮ ಪಾಲಿಗೆ ಶುಭಕರವಾಗಿದೆ. ಶುಭಸಂಖ್ಯೆ: 9

ಸಿಂಹ: ಕಷ್ಟಗಳು ಕಷ್ಟಗಳು ಎಂದೂ ಯಾರ ಮುಂದೆಯೂ ಗೋಗರೆಯದಿರಿ. ಲಾಭದ ದಾರಿ ಕುಂಠಿತವಾದೀತು. ಶುಭಸಂಖ್ಯೆ: 3

ಕನ್ಯಾ: ಒಣ ಪ್ರತಿಷ್ಠೆ, ಅತಿಯಾದ ಮಾತು, ಗೆದ್ದೇ ಗೆಲ್ಲುವೆ ಎಂಬ ಅತಿಯಾದ ಛಲ ಕೈಬಿಡಿ. ಒಳಿತಿನ ದಾರಿ ಸಿಗಲಿದೆ. ಶುಭಸಂಖ್ಯೆ: 1

ತುಲಾ: ತೇಜೋಮಯನಾದ ಭಾಸ್ಕರನ ಆರಾಧನೆಯಿಂದ ನಿಮ್ಮ ಇಂದಿನ ಸಂಕಲ್ಪಿತ ಕಾರ್ಯಗಳಿಗೆ ಸಿದ್ಧಿ ಸಿಗಲಿದೆ. ಶುಭಸಂಖ್ಯೆ: 8

ವೃಶ್ಚಿಕ: ಮುಗಿಸುವ ದುಷ್ಟಶಕ್ತಿಗಿಂತಲೂ ಕಾಯುವ ಶಕ್ತಿಯ ಅನುಗ್ರಹ ನಿಮ್ಮ ಪಾಲಿಗೆ ಇಂದು ಅಬಾಧಿತವಾಗಿದೆ. ಶುಭಸಂಖ್ಯೆ: 5

ಧನುಸ್ಸು: ಅದೇ ಮಂದಿ, ಅದೇ ಗೋಳು, ಅದೇ ಒತ್ತಡಗಳ ನಡುವೆ ಕುಗ್ಗದೆಯೇ ಮುನ್ನುಗ್ಗಿ. ವಿಶೇಷ ಅಚ್ಚರಿ ಕಾದಿದೆ. ಶುಭಸಂಖ್ಯೆ: 2

ಮಕರ: ಪೂರ್ವದಿಕ್ಕಿನತ್ತ ಮುಖ ಮಾಡಿ ಇಷ್ಟದೇವರನ್ನು ನೆನೆದು ಮನೆಯಿಂದ ಹೊರಡಿ. ಕಷ್ಟದ ಕೆಲಸ ಸರಳವಾಗಲಿದೆ. ಶುಭಸಂಖ್ಯೆ: 8

ಕುಂಭ: ಸಂಭಾವ್ಯ ತೊಡಕುಗಳು ಕಾರಣವಾಗಿ ಸುತಾರಾಂ ನಿಮ್ಮ ಮನದಿಚ್ಛೆಯು ಕೈಗೂಡಲು ಗೆಳೆಯನ ಬಾಧೆ ಇದೆ. ಶುಭಸಂಖ್ಯೆ: 3

ಮೀನ: ನೀವು ನೀಡಿದ ಸಾಲ ಇಂದು ಮರಳಿ ಬರಲು ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನವನ್ನು ನಡೆಸಿ ಗೆಲ್ಲಿ. ಶುಭಸಂಖ್ಯೆ: 6

Leave a Reply

Your email address will not be published. Required fields are marked *