ಮುದ್ದೇಬಿಹಾಳ: ಪಟ್ಟಣದ ಮೂರನೇ ವಾರ್ಡಿನ ಮಾರುತಿ ನಗರ ಬಡಾವಣೆಯ ಅಭಿವೃದ್ಧಿ ಯಾವಾಗ ಎಂಬ ಪ್ರಶ್ನೆ ಇಲ್ಲಿನ ನಿವಾಸಿಗಳಲ್ಲಿ ಕಾಡುತ್ತಿದೆ.
ಹಲವು ವರ್ಷಗಳಿಂದ ಮಾರುತಿ ನಗರ ಬಡಾವಣೆ ಮಲಿನ ಮುಕ್ತ ಬಡಾವಣೆಯನ್ನಾಗಿ ಮಾಡಲಾಗುವುದು ಎಂದು ಈ ಹಿಂದೆ ಸಾಕಷ್ಟು ಸಲ ಜನ ಪ್ರತಿನಿಧಿಗಳು ಭರವಸೆ ಕೊಟ್ಟಿದ್ದಾರೆ. ಆದರೆ ಅವರು ನೀಡಿದ ಭರವಸೆ ಅನುಷ್ಠಾನಕ್ಕೆ ಬಂದಿಲ್ಲ. ಪುರಸಭೆ ಸದಸ್ಯರಿಂದಾಗಲಿ ಅಥವಾ ಪುರಸಭೆಯಿಂದಾಗಲಿ ಚರಂಡಿ ನಿರ್ಮಿಸಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಚರಂಡಿಯ ದುರ್ವಾಸನೆ ತಡೆಯಲಾಗುತ್ತಿಲ್ಲ. ಹೀಗಾಗಿ ಮನೆ ಬಾಗಿಲು ಸದಾ ಮುಚ್ಚಿಕೊಂಡು ಜೀವನ ಸಾಗಿಸುವಂತಾಗಿದೆ ಎಂದು ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.
ಈ ಬಡಾವಣೆಯಲ್ಲಿ ಅಂದಾಜು 250 ಕುಟುಂಬಗಳು ವಾಸ ಮಾಡುತ್ತಿವೆ. ಚರಂಡಿ ಇಲ್ಲದ ಕಾರಣ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ. ಸಂಬಂಧಿತರು ಶ್ರೀ ಸಮಸ್ಯೆ ಬಗೆಹರಿಸಬೇಕು ಎಂದು ಬಡಾವಣೆ ನಿವಾಸಿಗಳ ಆಗ್ರಹವಾಗಿದೆ.
TAGGED:ಮುದ್ದೇಬಿಹಾಳ