ಗೊಳಸಂಗಿ: ದೇಶ, ಸಮಾಜ, ಪ್ರಜೆ, ಪ್ರತಿಪಗಳು ಒಗ್ಗೂಡಿ ನಮ್ಮ ದೇಶದ ತಾಯಂದಿರ, ಸಹೋದರಿಯರ ಕುಂಕುಮದ ಮೇಲೆ ಕೈ ಇಟ್ಟರೆ ಏನಾಗುತ್ತದೆ ಎಂಬುದನ್ನು ನಮ್ಮ ಸೇನೆ ತೋರಿಸಿಕೊಟ್ಟಿದೆ ಎಂದು ಶ್ರಿದೇವಿ ಅಮರೇಶಗೌಡ ಪಾಟೀಲ್ ಅಭಿಮತ ವ್ಯಕ್ತಪಡಿಸಿದ್ದಾರೆ.

ಪಾಕಿಸ್ಥಾನಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಹೊಸಕಿ ಹಾಕಿ ರಕ್ತ ಸಿಂಧೂರದ ಮೂಲಕ ತಕ್ಕ ಉತ್ತರ ನೀಡುವಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಯಶಸ್ವಿಯಾಗಿದ್ದಾರೆ. ಅದ್ಭುತ ಶೌರ್ಯ ತೋರಿದ ಭಾರತೀಯ ಸೇನೆಗೆ ನಮ್ಮ ಎಲ್ಲ ಸಹೋದರಿಯರ ನಮನ ಸಲ್ಲಿಸುವೆವು. ಅದೇರೀತಿ ಆರೇಷನ್ ಸಿಂಧೂರದ ಯಶಸ್ಸನ್ನು ದೇಶದ ನಾರಿಶಕ್ತಿಗೆ ಸಮರ್ಪಿಸಿದ ಪ್ರಧಾನಿ ಮೋದಿ ಕಾರ್ಯ ಶ್ಲಾನೀಯ ಎಂದರು.
TAGGED:ಗೊಳಸಂಗಿ