ನಿಡಗುಂದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತೃತ್ವದ ಶಿಕ್ಷಕರ ತಂಡದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಅರ್ಪಿಸಲಾಯಿತು.

ಶನಿವಾರ ಇಲ್ಲಿನ ಮುದ್ದೇಬಿಹಾಳ ಕ್ರಾಸ್ ಬಳಿ ಸಚಿವ ಮಧು ಬಂಗಾರಪ್ಪ ಅವರನ್ನು ಶಿಕ್ಷಕಿಯರು ಆರಗಿ ಬೆಳಗಿ ಸ್ವಾಗತಿಸಿದರು. ನಂತರ ಮನವಿ ಸಲ್ಲಿಸಿ, ಅದರಲ್ಲಿ 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಶ್ರೀವಾಗಿ ಇತ್ಯರ್ಥಗೊಳಿಸಿ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕರನ್ನು ಪದವೀಧರ ಶಿಕರೆಂದು ಪರಿಗಣಿಸಬೇಕು. ನಿಡಗುಂದಿಯಲ್ಲಿ ಬಿಇಒ ಕಚೇರಿ ಆರಂಭಿಸಬೇಕು ಹಾಗೂ ಪ್ರವಾಸಿ ತಾಣವಾದ ನಿಡಗುಂದಿಯಲ್ಲಿ ಪ್ರವಾಸಿ ಮಂದಿರ ನಿರ್ಮಿಸಬೇಕು ಎಂಬ ಬೇಡಿಕೆಯುಳ್ಳ ಮನವಿಪತ್ರವನ್ನು ಸಲ್ಲಿಸಲಾಯಿತು.
ಸಂದ ಎಂ.ಎಸ್ ಮುಕಾರ್ತಿಹಾಳ, ಬಿಇಒ ವಸಂತ ರಾಠೋಡ, ಬಿಆರ್ಸಿ ಸುನೀಲ ನಾಯಕ, ಎಸ್.ಎಚ್ ಬಿರಾದಾರ, ಸಂಗಮೇಶ ಬಳಿಗಾರ, ಸಂಗಮೇಶ ಕೆಂಭಾವಿ, ವಿ.ವಿ. ಮಠ, ಎಂ.ಆರ್. ಮಕಾನದಾರ, ಬಸಮ್ಮ ಪೂಜಾರಿ, ಎಲ್.ಬಿ. ಸಂಖ, ಎಂ.ಎಂ. ಮುಲ್ಲಾ, ಸಲೀಂ ದಡೇದ, ಆರ್.ಜಿ. ಪತ್ತಾರ ಇತರರಿದ್ದರು.