ಗೊಳಸಂಗಿ: ಬೀರಲದಿನ್ನಿ ಗ್ರಾಮದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣಕ್ಕಾಗಿ ಗೊಳಸಂಗಿ, ಬೇನಾಳ&ಎನ್ಎಚ್ ಗ್ರಾಮಗಳಿಗೆ ಹತ್ತಾರು ಕಿಮೀ. ದೂರ ತೆರಳಬೇಕಿತ್ತು. ಈಗ ಬೀರಲದಿನ್ನಿ ಗ್ರಾಮದ ಶಾಲೆ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆಗಿ ಬಡ್ತಿ ಪಡೆದಿರುವುದರಿಂದ ಅನ್ಯ ಗ್ರಾಮನಗಳಿಗೆ ಹೋಗಿ ಶಿಕ್ಷಣ ಪಡೆಯುವುದು ತಪ್ಪಿದಂತಾಗಿದೆ.

ರಾಷ್ಟ್ರೀಯ ಹೆದ್ದಾರಿ&50 ಕ್ಕೆ ಹೊಂದಿಕೊಂಡಿದ್ದರೂ ಸರಿಯಾದ ಬಸ್ಸಿನ ಸಂಪರ್ಕ ಹೊಂದಿರದ ಗ್ರಾಮ ಬೀರಲದಿನ್ನಿ. ಈ ಗ್ರಾಮದಲ್ಲಿ ಒಂದರಿಂದ ಎಂಟನೆ ತರಗತಿ ವರಿಗೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇತ್ತು. ಮಕ್ಕಳು ಹೆಚ್ಚಿನ ಶಿಣ ಪಡೆಯಲು ದೂರದ ಗೊಳಸಂಗಿ, ಬೇನಾಳ&ಎನ್ಎಚ್, ನಿಡಗುಂದಿಯನ್ನೇ ಅವಲಂಭಿಸುವುದು ಅನಿವಾರ್ಯವಾಗಿತ್ತು.
ಇಂಥ ಊರಿಗೆ ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಮಂಜೂರಾತಿ ನೀಡಿ ಆದೇಶ ಹೊರಡಿಸಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.
TAGGED:ಗೊಳಸಂಗಿ