ಗೊಳಸಂಗಿ: ಗ್ರಾಮದ ಕೂಲಿಕಾರ ಮಹಾಂತೇಶ ಶಂಕ್ರಪ್ಪ ಮೇಲಿನಮನಿ ಅವರ ಪುತ್ರಿ ಸೃಷ್ಟಿ ಮೇಲಿನಮನಿ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.93 ರಷ್ಟು ಅಂಕ ಗಳಿಸಿದ್ದಾಳೆ.

ಸೃಷ್ಟಿ 10 ನೇ ತರಗತಿಯಲ್ಲೂ 95.68 ಅಂಕ ಗಳಿಸಿದ್ದಳು. ಆಕೆಗೆ ಶಿಣ ಕೊಡಿಸಲು ಹೆತ್ತಪ್ಪ ಅಸಹಾಯಕನಾಗಿದ್ದಾನೆ. ಅವರಿವರ ಸಹಾಯದಿಂದ ಮಗಳನ್ನು ಬಾಗಲಕೋಟೆಯ ಬಸವೇಶ್ವರ ಕಾಲೇಜಿಗೆ ಸೇರಿಸಿದ್ದರು.
ಹೆತ್ತವರ ಬಡತನದ ಕಹಿಯನ್ನು ಕಂಡ ಸೃಷ್ಟಿ ತಂದೆಯ ಕಷ್ಟ ದೂರಮಾಡಬೇಕು ಎಂಬ ಛಲದಿಂದ ಓದಿದ ಪರಿಣಾಮವಾಗಿ ಕನ್ನಡದಲ್ಲಿ ನೂರಕ್ಕೆ ನೂರು, ರಸಾಯನಶಾಸ್ತ್ರದಲ್ಲಿ 95, ಇಂಗ್ಲಿಷ್ನಲ್ಲಿ 93, ಜೀವಶಾಸ್ತ್ರಕ್ಕೆ 91, ಗಣಿತಕ್ಕೆ 90, ಭೌತಶಾಸ್ತ್ರಕ್ಕೆ 89 ಸೇರಿ ಒಟ್ಟು 558 ಅಂಕ ಗಳಿಸಿ ಡಿಸ್ಟಿಂಕ್ಷನ್ನಲ್ಲಿತೇರ್ಗಡೆಯಾಗಿದ್ದಾಳೆ.
TAGGED:ಗೊಳಸಂಗಿ