ಮುದ್ದೇಬಿಹಾಳ: ನಿವೃತ್ತ ಐಪಿಎಸ್ ಅಧಿಕಾರಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಜ್ಯಾಧ್ಯ ಶಂಕರ ಬಿದರಿ ಮಾ.23ರಂದು ಮುದ್ದೇಬಿಹಾಳಕ್ಕೆ ಆಗಮಿಸಿ ವೀರಶೈವ ಲಿಂಗಾಯಿತ ಒಳಪಂಗಡಗಳ ಒಗ್ಗಟ್ಟಿನ ಕುರಿತು ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಒಳಪಂಗಡಗಳ ಎಲ್ಲ ಜಾತಿ, ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಚದುರಿಹೋಗುತ್ತಿರುವ ಸಮಾಜವನ್ನು ಒಂದೇ ಸೂರಿನಡಿ ತರಲು ನಡೆಸುತ್ತಿರುವ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಮಹಾಸಭಾದ ತಾಲೂಕು ಅಧ್ಯ ವೆಂಕನಗೌಡ ಪಾಟೀಲ ತಿಳಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಾತ್ರವಲ್ಲದೆ ದೇಶದಲ್ಲಿರುವ 120ಕ್ಕೂ ಹೆಚ್ಚು ಒಳಪಂಗಡಗಳು ಒಟ್ಟಾಗಿ ಹೋಗಲು ಮಹಾಸಭಾದ ರಾಷ್ಟ್ರೀಯ ಅಧ್ಯ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಬಿದರಿ ಅವರು ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ವಿಜಯಪುರ ಸೇರಿದಂತೆ ಜಿಲ್ಲೆಯ ಬಹಳಷ್ಟು ತಾಲೂಕುಗಳಲ್ಲಿ ಮಹಾಸಭಾ ಸಕ್ರಿಯವಾಗತೊಡಗಿದೆ. ವಿಜಯಪುರದ ಸಿದ್ರಾಮಪ್ಪ ಉಪ್ಪಿನ ಅವರು ಮಹಾಸಭಾದ ರಾಷ್ಟ್ರೀಯ ಉಪಾಧ್ಯರಾಗಿ ಆಯ್ಕೆಯಾಗಿರುವುದು ನಮ್ಮ ಜಿಲ್ಲೆಗೆ ಸಂದ ಮಹತ್ವದ ಅವಕಾಶವಾಗಿದೆ ಎಂದರು.
ಆಲೂರನ ಅವಿಭಕ್ತ ಕುಟುಂಬದ ಯಜಮಾನರಾಗಿರುವ ಬಸವಂತ್ರಾಯ ಗೂಳಿ ಅವರನ್ನು ಸನ್ಮಾನಿಸಿ ಸಮಾಜದಲ್ಲಿ ಕಡಿಮೆಯಾಗುತ್ತಿರುವ ಅವಿಭಕ್ತ ಕುಟುಂಬದ ಮಹತ್ವ ತಿಳಿಸಿಕೊಡಲಾಗುತ್ತಿದೆ ಎಂದರು.
ಮಹಾಸಭಾ ತಾಲೂಕು ಟಕದ ನಿಕಟಪೂರ್ವ ಅಧ್ಯ ಬಾಪೂಗೌಡ ಪಾಟೀಲ ಆಲೂರ ಮಾತನಾಡಿ, ಪದಗ್ರಹಣದಲ್ಲಿ ಬಸರಕೋಡದ ಶರಣಪ್ಪ ಹೊಳಿಯವರನ್ನು ಆದರ್ಶ ರೈತರೆಂದು, ಜಟ್ಟಗಿ ತಾಂಡಾದ ಬಸವರಾಜ ಲಮಾಣಿಯವರನ್ನು ಕ್ರಿಯಾಶೀಲ ಶಿಕರೆಂದು, ಮಾಜಿ ಸೈನಿಕ ಬಸವರಾಜ ಹಡಪದ ಅವರನ್ನು ದೇಶ ಸೇವಕರೆಂದು, ಹಣ್ಣಿನ ವ್ಯಾಪಾರಿ ಶರಣಪ್ಪ ಚಲವಾದಿ ಅವರನ್ನು ಶ್ರಮಿಕರೆಂದು ಸನ್ಮಾನಿಸಿ ಸಮಾಜಕ್ಕೆ ಬಸವಣ್ಣನವರ ಸಮಾನತೆಯ ಸಂದೇಶ ಸಾರಲು ತೀರ್ಮಾನಿಸಲಾಗಿದೆ. ಮುದ್ದೇಬಿಹಾಳದಲ್ಲಿ ಮೊದಲ ಬಾರಿ ಇಂಥ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿದೆ ಎಂದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎ. ಬೇವಿನಗಿಡದ, ಮಹಿಳಾ ವಿಭಾಗದ ಅಕ್ಕಮಹಾದೇವಿ ನಾಲತವಾಡ, ಶ್ರೀ ಸಂಗಮೇಶ್ವರ ಪತ್ತಿನ ಸಹಕಾರಿ ಸಂದ ಮಾಜಿ ಅಧ್ಯೆ ಕಮಲಾಬಾಯಿ ಬಿರಾದಾರ, ವಿದ್ಯಾವತಿ ತಡಸದ ಮಾತನಾಡಿದರು.
ಮಹಾಸಭಾದ ಉಪಾಧ್ಯ ಸಂಗಣ್ಣ ಕಂಚ್ಯಾಣಿ, ಕೋಶಾಧ್ಯ ಸಂಗಣ್ಣ ಕಟ್ಟಿ, ಪ್ರಮುಖರಾದ ಸರೋಜಿನಿ ದೇವೂರ, ಸುವರ್ಣಾ ಕಟ್ಟಿ, ರವಿ ತಡಸದ, ಉಮೇಶ ಕಂಠಿ, ಬಸನಗೌಡ ಪಾಟೀಲ ಸರೂರ, ದಾನಪ್ಪ ಅಂಗಡಿ, ಅಶೋಕ ಚಟ್ಟೇರ, ರವಿ ನಂದೆಪ್ಪನವರ್ ಇದ್ದರು.