ತಾಳಿಕೋಟೆ : ಪಟ್ಟಣದ ಆರಾಧ್ಯ ದೈವ ಶ್ರೀ ಸಾಂಭಪ್ರಭು ಶರಣಮುತ್ಯಾ ಜಾತ್ರೋತ್ಸವ ನಿಮಿತ್ತ ಬುಧವಾರ ಸಂಜೆ ಅಪಾರ ಭಕ್ತ ಸಮೂಹದ ಮಧ್ಯೆ ರಥೋತ್ಸವ ಸಡಗರದಿಂದ ನಡೆಯಿತು.
ಬೆಳಗಿನ ಜಾವ ಶರಣಮುತ್ಯಾ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಜರುಗಿದವು. ಕರಿಭಾವಿಯಿಂದ ನಂದಿಕೋಲ ಆಗಮಿಸಿತು. ನಂತರ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಗೊಂಬೆ ಕುಣಿತ, ಕರಡಿ ಮಜಲು ಮೆರವಣಿಗೆಗೆ ಮೆರಗು ತಂದವು.
ಸಂಜೆ 6ಕ್ಕೆ ಅಪಾರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.ರಾಜ್ಯದ ವಿವಿಧ ಕಡೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಶರಣರ ಮಠದ ಶ್ರೀ ಬಸಣ್ಣ ಶರಣರು, ಶ್ರೀ ಶರಣಪ್ಪ ಶರಣರು ರಥೋತ್ಸವದ ನೇತೃತ್ವ ವಹಿಸಿದ್ದರು.
TAGGED:ತಾಳಿಕೋಟೆ