ನಿಡಗುಂದಿ: ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯರಾಗಿ ಕಾಂಗ್ರೆಸ್ ಸದಸ್ಯ ಸಂಜೀವ ಶೆಟ್ಟೆಪ್ಪ ರಾಠೋಡ ಅವಿರೋಧ ಆಯ್ಕೆಯಾಗಿದ್ದಾರೆೆ ಎಂದು ಮುಖ್ಯಾಧಿಕಾರಿ ವಿರೇಶ ಹಟ್ಟಿ ತಿಳಿಸಿದ್ದಾರೆ.
ಇತ್ತೀಚೆಗೆ ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಆಡಳಿತ ಹಾಗೂ ವಿರೋಧ ಪದ ಸದಸ್ಯರ ಹೊಂದಾಣಿಕೆ ಮೇರೆಗೆ ಐವರು ಕಾಂಗ್ರೆಸ್, ಇಬ್ಬರು ಬಿಜೆಪಿ ಸದಸ್ಯರು ಸೇರಿ ಏಳು ಜನರು ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬಳಿಕ, ಸ್ಥಾಯಿ ಸಮಿತಿ ಸದಸ್ಯರು ಸಂಜೀವ ರಾಠೋಡ ಅವರನ್ನು ಅಧ್ಯರನ್ನಾಗಿ ಅವಿರೋಧ ಆಯ್ಕೆ ಮಾಡಿದ್ದಾರೆ ಎಂದರು.
ಪಪಂನ 16 ಸ್ಥಾನಗಳ ಪೈಕಿ 9 ಕಾಂಗ್ರೆಸ್, 6 ಬಿಜೆಪಿ, ಓರ್ವ ಪೇತರ ಸದಸ್ಯರಿದ್ದಾರೆ. ಪೇತರ ಸದಸ್ಯೆ ದೇಸಾಯಿ ಜಂಬಕ್ಕ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮಿತಿ ಸದಸ್ಯರನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿರೇಶ ಹಟ್ಟಿ ಹಾಗೂ ಸಿಬ್ಬಂದಿ ಸನ್ಮಾನಿಸಿದರು.
ಸ್ಥಾಯಿ ಸಮಿತಿ ಸದಸ್ಯರು:
ಸಂಜೀವ ಶೆಟ್ಟೆಪ್ಪ ರಾಠೋಡ ಅಧ್ಯ, ಸದಸ್ಯರಾಗಿ ಹನಮಂತ ಗುಂಡಿನಮನಿ, ಗಣೇಶ ಕೂಚಬಾಳ, ನಬಿರಸೂಲ ಬಾಣಕಾರ, ಆರ್.ರಾಜು, ಕರಿಯಪ್ಪ ಸಿಂದಗಿ, ಬಸವರಾಜ ವಂದಾಲ ಆಯ್ಕೆಗೊಂಡಿದ್ದಾರೆ.